Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ ಸಪ್ತಮಿ ತಿಥಿಯ ಈ ದಿನ ಗುರುವಾರ, ರೋಹಿಣಿ ನಕ್ಷತ್ರ, ವಿಷ್ಕಂಭ ಯೋಗ, ವಿಷ್ಟಿ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಕುಟುಂಬದ ಮೌಲ್ಯ ಮತ್ತು ಸಂಪ್ರದಾಯವನ್ನು ನೀವಿಂದು ಎತ್ತಿ ಹಿಡಿಯುವಿರಿ. ನೀವು ನೀಡಿರುವ ಭರವಸೆಗಳನ್ನು ಪೂರೈಸಲು ಹೆಚ್ಚು ಶ್ರಮ ವಹಿಸುವಿರಿ. ನಿಮ್ಮ ಪ್ರತಿ ಕೆಲಸದಲ್ಲೂ ಕುಟುಂಬದವರು ಬೆನ್ನೆಲುಬಾಗಿ ನಿಲ್ಲಲಿದ್ದಾರೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ಸೃಜನಶೀಲ ಪ್ರಯತ್ನಗಳು ವೇಗವನ್ನು ಪಡೆಯಲಿವೆ. ಕುಟುಂಬದಲ್ಲಿ ಪರಿಸರವು ಅನುಕೂಲಕರವಾಗಿರುತ್ತದೆ. ಹಣಕಾಸಿನ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಜಂಟಿ ವ್ಯವಹಾರವು ಲಾಭದಾಯಕವಾಗಿರಲಿದೆ. ಗುರು ರಾಯರ ಆಶೀರ್ವಾದದಿಂದ ಪ್ರಮುಖ ಯೋಜನೆಗಳಲ್ಲಿ ಜಯ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನ್ಯಾಯಾಂಗ ಪ್ರಕರಣಗಳಲ್ಲಿ ಇಂದು ಜಾಗರೂಕರಾಗಿರಿ. ದಾನ ಮತ್ತು ದೇಣಿಗೆಗಳು ಹೆಚ್ಚಾಗಬಹುದು. ಹೂಡಿಕೆ ಮೇಲೆ ಗಮನವಿರಲಿ. ಇಲ್ಲವೇ ಭಾರೀ ನಷ್ಟ ಸಂಭವವಿದೆ. ವೃತ್ತಿಪರ ಕ್ಷೇತ್ರದಲ್ಲಿ ಗಮನ ಕೇಂದ್ರೀಕರಿಸುವುವು ಅಗತ್ಯ. ವಿದೇಶ ವ್ಯವಹಾರದಲ್ಲಿ ಮಿಶ್ರಫಲ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ವ್ಯವಹಾರ ವಿಸ್ತರಣಾ ಯೋಜನೆಗಳು ಪ್ರಗತಿ ಹೊಂದಲಿವೆ. ದೀರ್ಘಸಮಯದಿಂದ ಬಾಕಿ ಉಳಿದಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ಆತ್ಮವಿಶ್ವಾಸದಿನ ಮಾಡುವ ಕೆಲಸಗಳಲ್ಲಿ ಖಂಡಿತವಾಗಿಯೂ ಯಶಸ್ಸು ಸಾಧಿಸುವಿರಿ.
ಇದನ್ನೂ ಓದಿ- ಹೋಳಿ ಬಳಿಕ ಕಷ್ಟ ಕೊಡುವಾತನಿಂದಲೇ ಹಸನಾಗಲಿದೆ ಈ ರಾಶಿಯವರ ಬದುಕು, ಶನಿ ಮಹಾತ್ಮನ ದಯೆಯಿಂದ ಹೆಚ್ಚಾಗಲಿದೆ ಸಿರಿ-ಸಂಪತ್ತು..!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಆಡಳಿತ ಮತ್ತು ಅಧಿಕಾರಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಇಂದು ಶುಭ ದಿನ. ಹಣಕಾಸು ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಸುಗಮ ಸಂವಹಣವು ನಿಮ್ಮ ದಿನವನ್ನು ಬೆಳಗಲಿದೆ. ಕುಟುಂಬ, ವ್ಯವಹಾರದ, ವೃತ್ತಿ ಸಂಬಂಧಿತ ವಿವಿಧ ವಿಷಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತೀರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ನೀವಿಂದು ಅದೃಷ್ಟದ ಸಂಪೂರ್ಣ ಬೆಂಬಲ ಪಡೆಯಲಿದ್ದು ಅನುಕೂಲಕರ ಫಲ ಸಿಗಲಿದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರು ಆ ನಿಟ್ಟಿನಲ್ಲಿ ಪ್ರಯತ್ನಿಸಿ. ಬಾಕಿ ಇರುವ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ನಿಮಗೆ ಮಿಶ್ರ ಫಲಪ್ರದವಾದ ದಿನ. ತಂಡದೊಂದಿಗೆ ಸಾಮರಸದಿಂದ ಕೆಲಸ ಮಾಡಿ. ಕುಟುಂಬ ಸದಸ್ಯರ ಸಲಹೆಗಳಿಗೆ ಕಿವಿಗೋಡಿ. ಹಠಾತ್ ಧನಲಾಭ ಸಾಧ್ಯತೆ ಇದೆ. ಪ್ರಮುಖ ಕೆಲಸಗಳಲ್ಲಿ ಪ್ರೀತಿಪಾತ್ರರ ಬೆಂಬಲ ಸಹಕಾರವನ್ನು ಪಡೆಯುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಪ್ರಮುಖ ಕೆಲಸಗಳಲ್ಲಿ ಸಾಮೂಹಿಕ ಬಲ ದೊರೆಯಲಿದೆ. ಇದರಿಂದ ನಿಮ್ಮ ಮುಂದಾಳತ್ವದಲ್ಲಿ ಜಯ ಸಾಧಿಸುವಿರಿ. ನಿಮ್ಮ ಜವಾಬ್ದಾರಿಗಳನ್ನು ಅತ್ಯುತ್ತಮವಾಗಿ ಪೂರೈಸುತ್ತೀರಿ. ಗೌರವ ಹೆಚ್ಚಾಗುತ್ತದೆ. ಭೂಮಿ, ಆಸ್ತಿ ವಿಷಯಗಳಲ್ಲಿ ಪ್ರಗತಿ ಕಾಣಲಿದೆ.
ಇದನ್ನೂ ಓದಿ- ಮೀನ ರಾಶಿಯಲ್ಲಿ ಸೂರ್ಯ ಮತ್ತು ಶುಕ್ರನ ಸಂಯೋಗ; ಮಾರ್ಚ್ 14ರಿಂದ ಈ 3 ರಾಶಿಯವರ ಖಜಾನೆಯಲ್ಲಿ ಸಂಪತ್ತು ಹೆಚ್ಚಾಗುತ್ತೆ!!
ಧನು ರಾಶಿಯವರ ಭವಿಷ್ಯ (Sagittarius Horoscope):
ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಫಲವನ್ನು ಅನುಭವಿಸುವಿರಿ. ಯಾವುದೇ ವಿಷಯದಲ್ಲಿ ಗಾಳಿ ಸುದ್ದಿಯನ್ನು ನಂಬಬೇಡಿ. ವ್ಯವಹಾರದಲ್ಲಿ ಸರ್ಕಾರದ ನೀತಿ ನಿಯಮಗಳನ್ನು ಪಾಲಿಸಿ. ಹಣಕಾಸಿನ ವಿಷಯದಲ್ಲಿ ವಂಚಕರಿಂದ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ನಿಮ್ಮ ಪ್ರತಿಭೆಯನ್ನು ಅಗತ್ಯವಿರುವಲ್ಲಿ ಪ್ರದರ್ಶಿಸಿ. ಇದರಿಂದ ಸಿಗುವ ಉತ್ತಮ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಹಣಕಾಸಿನ ವಿಷಯಗಳಲ್ಲಿ ಪ್ರಭಾವಶಾಲಿಯಾಗಿ ಉಳಿಯುವಿರಿ. ಆಧುನಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ವೈಯಕ್ತಿಕ ವಿಷಯಗಳಲ್ಲಿ ಇಂದು ತಾಳ್ಮೆ ತುಂಬಾ ಅಗತ್ಯವಾಗಿದೆ. ನಿಮ್ಮ ಭಾವನೆಗಳನ್ನೂ ನಿಯಂತ್ರಣದಲ್ಲಿಡಿ. ವೃತ್ತಿ ವ್ಯವಹಾರದಲ್ಲಿ ಯಶಸ್ಸು. ಗುರು ರಾಯರ ಕೃಪೆಯಿಂದ ಕುಟುಂಬದೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ವಾಹನ ಖರೀದಿಸುವ ಬಹುದಿನಗಳ ನಿಮ್ಮ ಕನಸು ನನಸಾಗಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ನಿಮ್ಮ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ. ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಸಾಮರಸ್ಯ ಮತ್ತು ಸಹಕಾರ ಹೆಚ್ಚಾಗಲಿದೆ. ಶುದ್ಧ ಮನಸ್ಸಿನಿಂದ ಮಾಡುವ ಯಾವುದೇ ಪ್ರಯತ್ನದಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









