Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಅಷ್ಟಮಿ ತಿಥಿ, ಶುಕ್ರವಾರದ ಈ ದಿನ ಮೃಗಶಿರಾ ನಕ್ಷತ್ರ ಪ್ರೀತಿ ಯೋಗ. ಇಂದು ಯಾವ ರಾಶಿಯವರಿಗೆ ಇರಲಿದೆ ಲಕ್ಷ್ಮಿ ಕೃಪೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಕೌಟುಂಬಿಕ ವಿಚಾರಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದೂ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಯೋಜನೆ ರೂಪಿಸುವುದು ಉತ್ತಮ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನಿಮ್ಮ ಪ್ರೀತಿಪಾತ್ರರ ಜೊತೆ ಪ್ರವಾಸಕ್ಕೆ ಹೋಗುವುದನ್ನು ಪರಿಗಣಿಸಿ. ಜೀವನದ ಜಂಜಾಟಗಳ ನಡುವೆ ಮನರಂಜನೆಯಲ್ಲಿ ತೊಡಗಿಸಿಕೊಳ್ಳಿ. ಪ್ರಮುಖ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದು ಲಾಭದಾಯಕ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ತಾರ್ಕಿಕವಾಗಿ ಕೆಲಸ ಮಾಡುವುದು ನಿಮಗೆ ಲಾಭದಾಯಕವಾಗಲಿದೆ. ವ್ಯವಹಾರದಲ್ಲಿ ಕಷ್ಟದ ಪರಿಸ್ಥಿತಿಗಳು ಕಳೆದು ಸ್ಥಿತಿ ಸುಧಾರಿಸಲಿದೆ. ಕಠಿಣ ಪರಿಶ್ರಮದ ಮೂಲಕ ಕೆಲಸದಲ್ಲಿ ಇಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಹಣಕಾಸಿನ ವ್ಯವಹಾರಗಳಲ್ಲಿ ಸಾಕ್ಷಾತ್ ಲಕ್ಷ್ಮಿ ಕೃಪೆ ತೋರಲಿದ್ದಾಳೆ. ಧೈರ್ಯ ಶೌರ್ಯದಿಂದ ವೃತ್ತಿ ರಂಗದಲ್ಲಿ ಅವಕಾಶಗಳು ಹೆಚ್ಚಾಗಲಿವೆ. ನಿಮಗೆ ನೀಡುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಕೆಲಸದ ಸ್ಥಳದಲ್ಲಿ ಇಂದು ತಾಳ್ಮೆಯಿಂದ ಮುಂದುವರೆಯುವುದು ಉತ್ತಮ. ನಿಮ್ಮ ಮಾತು ಮತ್ತು ನಡವಳಿಕೆಯಲ್ಲಿ ಗಮನವಿರಲಿ. ಯೋಜನೆಯ ಪ್ರಕಾರ ಕೆಲಸಗಳನ್ನು ಪೂರ್ಣಗೊಳಿಸುವುದರಿಂದ ಉತ್ತಮ ಫಲ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಅದೃಷ್ಟದ ಬೆಂಬಲ ನಿಮ್ಮೊಂದಿಗಿದ್ದು ಪ್ರಮುಖ ಕೆಲಸಗಳನ್ನು ಮಾಡಲು ಶುಭ ದಿನ. ವಾಣಿಜ್ಯ ವ್ಯವಹಾರಗಳಲ್ಲಿ ಪ್ರಭಾವಶಾಲಿಯಾಗಿ ಉಳಿಯುತ್ತೀರಿ. ಪ್ರೀತಿಪಾತ್ರರ ನಡುವೆ ಸಾಮರಸ್ಯ ಹೆಚ್ಚಾಗಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ದಿನ ನಿಮಗೆ ಮಿಶ್ರ ಫಲಗಳನ್ನು ನೀಡಲಿದೆ. ಹಣಕಾಸಿನ ಹರಿವು ಹೆಚ್ಚಾಗುತ್ತದೆ. ಆದರೂ, ನೀವು ಜಾಗರೂಕರಾಗಿಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಬಹುದು. ವೃತ್ತಿಯಲ್ಲಿ ಹೊಸ ಜವಾಬ್ದಾರಿ ಹೆಗಲೇರಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಲಕ್ಷ್ಮಿ ಕೃಪೆಯಿಂದ ಇಂದು ನಿಮ್ಮ ಆದಾಯದ ಮೂಲಗಳು ಹೆಚ್ಚಾಗುತ್ತದೆ. ಸಮಾಜದಲ್ಲಿ ಖ್ಯಾತಿ, ಗೌರವ ಹೆಚ್ಚಾಗಲಿದೆ. ವೈಯಕ್ತಿಕ ಜೀವನದಲ್ಲಿಯೂ ಸಂತೋಷವನ್ನು ಅನುಭವಿಸುವಿರಿ. ವ್ಯವಹಾರದಲ್ಲಿ ಬಂಪರ್ ಲಾಭ ಗಳಿಸುವಿರಿ.
ಇದನ್ನೂ ಓದಿ- ಹೋಳಿಕಾ ದಹನದಂದು ಶತಂಕ ಯೋಗ: ಈ ಮೂರು ರಾಶಿಯ ಜನರಿಗೆ ಶುಕ್ರ ದೆಸೆ, ಅದೃಷ್ಟದ ಯೋಗ!
ಧನು ರಾಶಿಯವರ ಭವಿಷ್ಯ (Sagittarius Horoscope):
ಹಣಕಾಸಿನ ವಹಿವಾಟುಗಳಲ್ಲಿ ಸಣ್ಣ ನಿರ್ಲಕ್ಷ್ಯವೂ ನಿಮ್ಮ ತೊಂದರೆಗಳನ್ನು ಹೆಚ್ಚಿಸಬಹುದು. ಆಡಳಿತ ಪ್ರಯತ್ನಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಕುಟುಂಬದಲ್ಲಿ ಮಾತನಾಡುವಾಗ ನಿಮ್ಮ ಪದಬಳಕೆಯ ಬಗ್ಗೆ ವಿಶೇಷ ನಿಗಾ ಇರಲಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಎಲ್ಲಾ ಕ್ಷೇತ್ರಗಳಲ್ಲೂ ಇಂದು ಸಕಾರಾತ್ಮಕತೆ ಇರಲಿದೆ. ಸಾಮಾಜಿಕ ಸಂವಹನ ಹೆಚ್ಚಿಸುವತ್ತ ಗಮನವಹಿಸಿ. ಕೆಲಸದಲ್ಲಿ ವೇಗ ಹೆಚ್ಚಾಗ್ಲೈದೆ. ನಿಮ್ಮ ಕಾರ್ಯಕ್ಷಮತೆ ಎಲ್ಲಾ ಕ್ಷೇತ್ರಗಳಲ್ಲೂ ಪ್ರಭಾವಶಾಲಿಯಾಗಿ ಉಳಿಯಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ವೈಯಕ್ತಿಕ ಸಾಧನೆಗಳತ್ತ ಗಮನಹರಿಸುವುದು ಲಾಭದಾಯಕವಾಗಿದೆ. ಆಸ್ತಿ ಮತ್ತು ವಾಹನಕೆಕೆ ಸಂಬಂಧಿಸಿದಂತೆ ವಿಚಾರಗಳು ಲಾಭದಾಯಕವಾಗಿರಲಿದೆ. ಪ್ರೀತಿಪಾತ್ರರೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕೆಲಸದಲ್ಲಿ ಇಂದು ನಿಮ್ಮ ದಕ್ಷತೆ ಸುಧಾರಿಸ್ಲೈದೆ. ಪ್ರೀತಿಪಾತ್ರರ ವಿಶ್ವಾ ಗಳಿಸುವಿರಿ. ವ್ಯವಹಾರದಲ್ಲಿ ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಬಹುದು. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.









