ದಿನಭವಿಷ್ಯ 07-11-2025: ಶುಕ್ರವಾರ ಪರಿಘ ಯೋಗ, ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆ

Today Horoscope 07th November 2025: ನವೆಂಬರ್ 07, 2025ರ ಇಂದು ಶುಕ್ರವಾರದಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯೋಣ... 

Written by - Yashaswini V | Last Updated : Nov 7, 2025, 08:13 AM IST
  • ಇಂದು ಕಾರ್ತಿಕ ಮಾಸದ ಕೃಷ್ಣ ಪಕ್ಷದ ಈ ದಿನ ಶುಕ್ರವಾರ
  • ದ್ವಿತೀಯಾ ತಿಥಿ ರೋಹಿಣಿ ನಕ್ಷತ್ರ ಪರಿಘ ಯೋಗ
  • ಇಂದು ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 07-11-2025: ಶುಕ್ರವಾರ ಪರಿಘ ಯೋಗ, ಇಂದು ಈ ರಾಶಿಯವರಿಗೆ ಕೆಲಸದಲ್ಲಿ ಅಡೆತಡೆ

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ದ್ವಿತೀಯಾ ತಿಥಿ, ಶುಕ್ರವಾರದ ಈ ದಿನ ರೋಹಿಣಿ ನಕ್ಷತ್ರ, ಪರಿಘ ಯೋಗ, ವಣಿಜ ಕರಣ ಇರಲಿದೆ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಪ್ರೀತಿ ಪ್ರೇಮ ವಿಚಾರಗಳು ನಿಮ್ಮ ಪರವಾಗಿ ಉಳಿಯಲಿವೆ. ನಿಮ್ಮ ಮಾತು ಮತ್ತು ನಡವಳಿಕೆಯ ಮೂಲಕ ಎಂತಹವರ ಹೃದಯವನ್ನಾದರೂ ಗೆಲ್ಲುತ್ತದೆ. ಮನೆಗೆ ಅತಿಥಿಗಳ ಆಗಮನವು ಸಂತೋಷದ ವಾತಾವರಣವನ್ನು ತರಲಿದೆ. ಕಷ್ಟದಲ್ಲಿರುವವರಿಗೆ ಉದಾರ ಮನೋಭಾವವನ್ನು ಕಾಪಾಡಿಕೊಳ್ಳಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನೀವಿಂದು ವಿವಿಧ ವಿಷಯಗಳ ಬಗೆ ಹೆಚ್ಚಿನ ಗಮನ ಹರಿಸುವುದರಿಂದ ಹೆಚ್ಚಿನ ಲಾಭವಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ಕೆಲಸದಲ್ಲಿ ನಾವೀನ್ಯತೆ ಹೆಚ್ಚಾಗುತ್ತದೆ. ಪ್ರಮುಖ ಕಾರ್ಯಗಳು ವೇಗ ಪಡೆಯಲಿವೆ. ವ್ಯಕ್ತಿತ್ವ ಪ್ರಬಲಗೊಳ್ಳಲಿದೆ. ದೀರ್ಘಾವಧಿಯ ಯೋಜನೆಗಳಲ್ಲಿ ಕೆಲಸ ಮಾಡುವಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಕಾನೂನಾತ್ಮಕ ವಿಚಾರಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಈ ದಿನ ಯಾರಿಗೂ ಸಾಲ ನೀಡಬೇಡಿ. ಸಾಧ್ಯವಾದಷ್ಟು ಬೇರೆಯವರಿಗೆ  ಹಣವನ್ನು ಎರವಲು ಪಡೆಯುವುದನ್ನು ಕೊಡ ತಪ್ಪಿಸಿ. ಅಪರಿಚಿತರನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಪ್ರಮುಖ ಕೆಲಸಗಳಲ್ಲಿ ಸಂಬಂಧಿಕರಿಂದ ಬೆಂಬಲ ಉಳಿಯಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ವೃತ್ತಿಪರರು ಆಕರ್ಷಕ ಕೊಡುಗೆಗಳನ್ನು ಪಡೆಯುವಿರಿ. ಈ ದಿನ ಪ್ರಭಾವಿ ಜನರಿಂದ ಬೆಂಬಲ ದೊರೆಯಲಿದೆ. ನಿಮ್ಮ ಪ್ರತಿಭೆಯನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲು ವ್ಯವಹಾರ ವಿಸ್ತರಿಸಲು ಅತ್ಯುತ್ತಮ ದಿನ. ಆಡಳಿತಾತ್ಮಕ ವಿಷಯಗಳು ಬಲಗೊಳ್ಳುತ್ತವೆ. ಉದ್ಯೋಗ ರಂಗದಲ್ಲಿ ಸಹಕಾರಿ ಮನೋಭಾವವನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ.  

ಇದನ್ನೂ ಓದಿ- ಹೊಸ ವರ್ಷದಲ್ಲಿ ಮೂರು ರಾಶಿಯವರಿಗೆ ಶುಕ್ರದೆಸೆ: ಧನಕಾರಕನಿಂದ ಕೋಟ್ಯಾಧಿಪತಿ ಯೋಗ, ರಾಜವೈಭೋಗದ ಜೀವನ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನೀವು ವೃತ್ತಿ ವ್ಯವಹಾರದಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತೀರಿ. ನಿಮ್ಮ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಪೂರೈಸುವಿರಿ. ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ನಿಮ್ಮ ಗುರಿಗಳನ್ನು  ಸಾಧಿಸಲು ಕಠಿಣ ಪರಿಶ್ರಮ ಮತ್ತು ದೃಢಸಂಕಲ್ಪ ಅಗತ್ಯ.  

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಅದೃಷ್ಟದ ಬಲ ಇರಲಿದ್ದು ಪ್ರಮುಖ ವಿಷಯಗಳಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.  ನಂಬಿಕೆ ಮತ್ತು ದೃಢನಿಶ್ಚಯದಿಂದ ಮುಂದುವರೆದರೆ ನಿಮ್ಮ ಗುರಿ ಸಾಧಿಸುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಪ್ರಮುಖ ಕೆಲಸಗಳು ಪೂರ್ಣಗೊಳ್ಳುತ್ತವೆ. ರಾಜಕಾರಣಿಗಳು ಜನರೊಂದಿಗೆ ಸಂಪರ್ಕ ಸಾಧಿಸುವಿರಿ.  

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ವಿವಿಧ ವಿಷಯಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದರಿಂದ ಅನಗತ್ಯ ಅಪಾಯಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಕೆಲಸದಲ್ಲಿ ಸ್ಪಷ್ಟತೆ ಕಾಯ್ದುಕೊಳ್ಳಿ. ಯಾವುದೇ ಸಂದರ್ಭದಲ್ಲಿ ನಿಮ್ಮ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ವ್ಯವಹಾರಗಳಲ್ಲಿ ಬುದ್ದಿವಂತಿಕೆಯಿಂದ ಮುಂದುವರೆಯಿರಿ.  

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಅಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತಮ ದಿನ. ನಿಮ್ಮ ನಾಯಕತ್ವ ಗುಣ ಹೊಳೆಯುತ್ತದೆ. ವೃತ್ತಿ ಬದುಕಿನಲ್ಲಿ ಗಮನಾರ್ಹ ಸಾಧನೆ ಮಾಡುವಿರಿ. ಆತ್ಮವಿಶ್ವಾಸ ಹೆಚ್ಚಾಗಲಿದ್ದು ವೈಯಕ್ತಿಕ ವಿಚಾರಗಳಲ್ಲೂ ಕೂಡ ಅತ್ಯುತ್ತಮವಾದ ಸಮಯವನ್ನು ಕಾಣುವಿರಿ.  

ಇದನ್ನೂ ಓದಿ- 138ದಿನಗಳ ಬಳಿಕ ಸಹಜ ಸ್ಥಿತಿಗೆ ಮರಳಲಿರುವ ಶನಿ: ಐದು ರಾಶಿಯವರಿಗೆ ಜಾಕ್‌ಪಾಟ್, ಹೆಜ್ಜೆ ಹೆಜ್ಜೆಗೂ ಯಶಸ್ಸು, ಕೀರ್ತಿ 

ಧನು ರಾಶಿಯವರ ಭವಿಷ್ಯ (Sagittarius Horoscope):
ನೀವಿಂದು ಸಮರ್ಪಣಾ ಮನೋಭಾವದಿಂದ ಕೆಲಸ ಮಾದುವುದರಿಂದ ಅದೃಷ್ಟ ಕೈ ಹಿಡಿಯಲಿದೆ. ಮಾಡುವ ಕೆಲಸದಲ್ಲಿ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ. ವ್ಯವಹಾರದಲ್ಲಿ ಸಣ್ಣ ನಿರ್ಲಕ್ಷ್ಯವೂ ಭಾರೀ ಸಂಕಷ್ಟಕ್ಕೆ ಸಿಲುಕಿಸಬಹುದು. ಹೊಸ ಜನರ ಪರಿಚಯವಾಗಬಹುದು. ಮನೆಯಲ್ಲಿ ಮಾತಿನ ಬಗ್ಗೆ ಜಾಗರೂಕರಾಗಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನಿಮ್ಮ ಕೆಲಸಕ್ಕೆ ಸಂಬಂಧಿಸಿದ ಗುರಿಗಳತ್ತ ಹೆಚ್ಚಿನ ಗಮನಹರಿಸಿ. ಆಧ್ಯಾತ್ಮಿಕ ನಂಬಿಕೆಗಳು ಬಲಗೊಳ್ಳುತ್ತವೆ. ಪ್ರಯಾಣವು ಯಶಸ್ಸಿನಿಂದ ಕೂಡಿರಲಿದೆ. ವ್ಯವಹಾರದಲ್ಲಿ ವಿಶಾಲ ದೃಷ್ಟಿಕೋನವನ್ನು ಇಟ್ಟುಕೊಳ್ಳಿ, ಸಾಮೂಹಿಕವಾಗಿ ಕೆಲಸ ಮಾಡುವುದು ಲಾಭದಾಯಕವಾಗಿರುತ್ತದೆ.  

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಕೌಟುಂಬಿಕ ವಿಷಯಗಳಲ್ಲಿ ಹಿರಿಯರ ಸಲಹೆಯನ್ನು ನಿರ್ಲಕ್ಷಿಸಬೇಡಿ. ಬೇರೆಯವರ ವಿಚಾರದಲ್ಲಿ ಅನವಶ್ಯಕ ಹಸ್ತಕ್ಷೇಪ ಮಾಡುವುದನ್ನು ತಪ್ಪಿಸಿ. ಪ್ರೀತಿಪಾತ್ರರೊಂದಿಗಿನ ಆತ್ಮೀಯತೆ ಹೆಚ್ಚಾಗಳಿದೆ. ಯಾವುದೇ ವಿಚಾರದಲ್ಲೂ ಬೇರೆಯವರೊಂದಿಗೆ ಪ್ರತಿಕ್ರಿಯಿಸುವಾಗ ತಾಳ್ಮೆಯಿಂದಿರಿ. ಬಲಹೀನರೊಂದಿಗೆ ಉದಾರತೆಯಿಂದ ವರ್ತಿಸಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಸಾಹಸಮಯ ಚಟುವಟಿಕೆಗಳಲ್ಲಿ ಧೈರ್ಯ ಮತ್ತು ಉತ್ಸಾಹವನ್ನು ಕಾಪಾಡಿಕೊಳ್ಳುತ್ತೀರಿ. ಪ್ರಮುಖ ಕೆಲಸಗಳಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುವುದು ಲಾಭವನ್ನು ತಂದುಕೊಡಲಿದೆ. ಒಡಹುಟ್ಟಿದವರೊಂದಿಗಿನ ನಿಕಟತೆ ಹೆಚ್ಚಾಗಲಿದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ.  

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

About the Author

Yashaswini V

Yashaswini V

ಯಶಸ್ವಿನಿ ವಿ. Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017ರಿಂದ Zee ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ರಾಜಕೀಯ, ಎಂಟರ್ಟೈನ್ಮೆಂಟ್, ಬ್ಯುಸಿನೆಸ್, ಲೈಫ್ ಸ್ಟೈಲ್, ವರ್ಲ್ಡ್, ಸೈನ್ಸ್ ಅಂಡ್ ಟೆಕ್ನಾಲಜಿ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಅನುಭವ ಹೊಂದಿದ್ದಾರೆ. ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿರುವ ಇವರು ಸದ್ಯ ಅಸಿಸ್ಟೆಂಟ್ ನ್ಯೂಸ್ ಎಡಿಟರ್ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.

...Read More

Trending News