)
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ದ್ವಿತೀಯ ತಿಥಿ, ಬುಧವಾರದ ಈ ದಿನ ಅಶ್ವಿನಿ ನಕ್ಷತ್ರ, ಹರ್ಷಣ ಯೋಗ, ತೈತಿಲ ಕರಣ ಇರಲಿದೆ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಪ್ರತಿ ಕ್ಷೇತ್ರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ವೃತ್ತಿ ಬದುಕಿನಲ್ಲಿ ಹೊಸ ಉತ್ಸಾಹ ನಿಮ್ಮನ್ನು ಆವರಿಸಲಿದೆ. ನಿಮ್ಮ ಜವಾಬ್ದಾರಿಗಳನ್ನು ಶ್ರದ್ಧೆಯಿಂದ ನಿರ್ವಹಿಸುವುದು ಉತ್ತಮ ಲಾಭವನ್ನು ನೀಡಲಿದೆ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಯಾವುದೇ ಪ್ರಮುಖ ವಿಚಾರಗಳಲ್ಲಿ ಆತುರತೆಯನ್ನು ತಪ್ಪಿಸಿ. ಬದಲಿಗೆ ಯೋಚಿಸಿ ಬುದ್ದಿವಂತಿಕೆಯಿಂದ ನಿರ್ಧಾರಗಳನ್ನು ಕೈಗೊಳ್ಳಿ. ಖರ್ಚುಗಳನ್ನೂ ನಿಭಾಯಿಸುವಾಗ ಬಜೆಟ್ ಮೇಲೆ ವಿಶೇಷ ಗಮನವಿರಲಿ. ವಿದೇಶ ವ್ಯವಹಾರಗಳಲ್ಲಿ ಧನಾತ್ಮಕ ಫಲ ನಿರೀಕ್ಷಿಸಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಈ ದಿನ ಹಣಕಾಸು ಬೆಳವಣಿಗೆಗೆ ಸಂಬಂಧಿಸಿದಂತೆ ಹೆಚ್ಚು ಅವಕಾಶಗಳನ್ನು ಪಡೆಯುವಿರಿ. ಸಮಾಜದಲ್ಲಿ ನಿಮ್ಮ ಗೌರವ ಮನ್ನಣೆ ಹೆಚ್ಚಾಗಲಿದೆ. ಉದ್ಯೋಗ ರಂಗದಲ್ಲಿ ನಿಮ್ಮ ಕಾರ್ಯಕ್ಷಮತೆಯಿಂದಾಗಿ ಎಂತಹವರನ್ನೂ ತಲೆಬಾಗುವಂತೆ ಮಾಡುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಅದೃಷ್ಟದ ಫುಲ್ ಸಪೋರ್ಟ್ ನಿಮಗಿದ್ದು ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಇಚ್ಚಿಸುವವರಿಗೆ ಫಲಪ್ರದವಾದ ದಿನ. ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ನಿರ್ಧಾರಗಳು ಭವಿಷ್ಯದಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಸಾಬೀತುಪದಿಸಲಿವೆ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇದು ನಿಮಗೆ ಅನುಕೂಲಕರವಾದ ದಿನ. ನಿರ್ವಹಣಾ ಪ್ರಯತ್ನಗಳಲ್ಲಿ ವೇಗ ಪಡೆಯುವಿರಿ. ಭಾವನಾತ್ಮಕವಾಗಿ ಆಹ್ಲಾದಕರ ದಿನವನ್ನು ಅನುಭವಿಸುವಿರಿ. ವೃತ್ತಿಪರ ಬೆಳವಣಿಯ ಹೊಸ ಅವಕಾಶಗಳು ನಿಮ್ಮ ಹಾದಿಯಲ್ಲಿವೆ. ಮನೆಯವರೊಂದಿಗೆ ಉತ್ತಮ ಸಮಯ ಕಳೆಯುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ನೀವು ಯಾವುದೇ ಕೆಲಸಗಳಲ್ಲಿ ವಿಶೇಷ ಜಾಗರೂಕತೆಯನ್ನು ಅನುಸರಿಸಬೇಕು. ಪ್ರೀತಿಪಾತ್ರರರ ಮಾತುಗಳನ್ನು ನಿರ್ಲಕ್ಷಿಸಬೇಡಿ. ಕುಟುಂಬದಲ್ಲಿ ಸಾಮರಸ್ಯದಿಂದ ಇರುವುದನ್ನು ಖಚಿತಪಡಿಸಿಕೊಳ್ಳಿ. ಹಿರಿಯರ ಸಲಹೆಯಂತೆ ಮುಂದುವರೆಯುವುದು ಹೆಚ್ಚು ಲಾಭಾಂಶಗಳಿಗೆ ಎಡೆಮಾಡಿಕೊಡುತ್ತದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ದಿನ ನಿಮಗೆ ಆದಾಯದ ಹೊಸ ಮೂಲಗಳು ಹೊರಹೊಮ್ಮಲಿವೆ. ನಾಯಕತ್ವ ಗುಣ ಸುಧಾರಿಸಲಿದ್ದು ಸಂಘಟನೆಗಳಲ್ಲಿ ಜಯದ ಹಾದಿಯಲ್ಲಿ ಮುಂದುವರೆಯುವಿರಿ. ವೈವಾಹಿಕ ಬದುಕಿನಲ್ಲಿ ಮಧುರ ಕ್ಷಣಗಳನ್ನು ಅನುಭವಿಸುವಿರಿ. ಮಕ್ಕಳಿಂದ ಸಂತಸದ ಸುದ್ದಿ ಕೇಳುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮ್ಮ ಕಠಿಣ ಪರಿಶ್ರಮವೇ ನಿಮ್ಮ ಬಲ. ಯಾವುದಾದರೂ ವಿಚಾರಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸುವ ಬದಲಿಗೆ ತರ್ಕಕ್ಕೆ ಒತ್ತು ನೀಡುವುದು ಹೆಚ್ಚು ಸೂಕತವಾಗಿದೆ. ವೈಯಕ್ತಿಕ ಸಂಬಂಧಗಳು ಸುಧಾರಿಸುತ್ತವೆ. ನಿಮ್ಮ ಜೊತೆಗೇ ಇದ್ದು ವಂಚಿಸುವವರ ಬಗ್ಗೆ ಎಚ್ಚರಿಕೆ ಅಗತ್ಯ.
ಧನು ರಾಶಿಯವರ ಭವಿಷ್ಯ (Sagittarius Horoscope):
ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರಿಗೆ ಉತ್ತಮ ಸಮಯ. ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲಿದೆ. ಸ್ನೇಹಿತರ ಬೆಂಬಲ ಸಹಕಾರದಿಂದ ಕಠಿಣ ಕೆಲಸಗಳನ್ನು ಸುಲಭವಾಗಿ ನಿಭಾಯಿಸುವಿರಿ. ಆಪ್ತರೊಂದಿಗೆ ಸಂಜೆ ವಿಹಾರವು ಮನಸ್ಸನ್ನು ನಿರಾಳಗೊಳಿಸುತ್ತದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ವ್ಯವಹಾರದಲ್ಲಿ ಇಂದು ಭರ್ಜರಿ ಲಾಭವನ್ನು ಗಳಿಸುವಿರಿ. ವೈಯಕ್ತಿಕ ವಿಚಾರಗಳಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಕೆಲಸದಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳುವುದರಿಂದ ಉತ್ತಮ ಫಲ ನಿರೀಕ್ಷಿಸಬಹುದು. ಸ್ನೇಹಿತರೊಂದಿಗೆ ಆಹ್ಲಾದಕರ ಚರ್ಚೆ ನಿಮ್ಮ ದಿನವನ್ನು ಬೆಳಗಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ವೃತ್ತಿಪರ ಪ್ರಯತ್ನಗಳಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ನಿಮ್ಮ ಮಾತು ನಡವಳಿಕೆಯಿಂದ ಸಂಬಂಧಗಳು ಬಳಗೊಳ್ಳುತ್ತವೆ. ಹಣದ ಹರಿವು ಹೆಚ್ಚಾಗಲಿದ್ದು, ಆರ್ಥಿಕ ಸಂಕಷ್ಟದಿಂದ ಹೊರಬರಲು ನೆರವಾಗಲಿದೆ. ವಾಣಿಜ್ಯ ಪ್ರವಾಸವು ಲಾಭವನ್ನು ಹೆಚ್ಚಿಸಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಮನೆಯಲ್ಲಿಂದು ಮಂಗಳ ಕಾರ್ಯಗಳ ಬಗ್ಗೆ ಯೋಜನೆ ರೂಪಿಸಲು ಸಮಯ ಕೂಡಿಬರಲಿದೆ. ನಿಮ್ಮ ಆಲೋಚನೆಗಳಿಗೆ ಕುಟುಂಬಸ್ಥರು ಬೆಂಬಲ ನೀಡಲಿದ್ದಾರೆ. ವ್ಯವಹಾರದಲ್ಲಿ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಭವಿಷ್ಯಕ್ಕಾಗಿ ಉಳಿತಾಯದ ಬಗ್ಗೆ ಯೋಚಿಸಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.