ದಿನಭವಿಷ್ಯ 10-04-2025: ಗುರುವಾರದಂದು ಪೂರ್ವಾ ನಕ್ಷತ್ರ ವೃದ್ಧಿ ಯೋಗ, ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ

Today Horoscope 10th April 2025: ಗುರುವಾರದ ಈ ದಿನ ಪೂರ್ವಾ ನಕ್ಷತ್ರ ವೃದ್ಧಿ ಯೋಗ ಕೌಲವ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Yashaswini V | Last Updated : Apr 10, 2025, 07:01 AM IST
  • ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ
  • ಗುರುವಾರದ ಈ ದಿನ ಪೂರ್ವಾ ನಕ್ಷತ್ರ ವೃದ್ಧಿ ಯೋಗ ಕೌಲವ ಕರಣ.
  • ಇಂದು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ದಿನಭವಿಷ್ಯ 10-04-2025: ಗುರುವಾರದಂದು ಪೂರ್ವಾ ನಕ್ಷತ್ರ ವೃದ್ಧಿ ಯೋಗ, ಈ ರಾಶಿಯವರಿಗೆ ಅಷ್ಟೈಶ್ವರ್ಯ ಪ್ರಾಪ್ತಿ

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಗುರುವಾರದ ಈ ದಿನ ಪೂರ್ವಾ ನಕ್ಷತ್ರ ವೃದ್ಧಿ ಯೋಗ ಕೌಲವ ಕರಣ. ಇಂದು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.  

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ವೃತ್ತಿ-ವ್ಯವಹಾರದಲ್ಲಿ ವೈಯಕ್ತಿಕ ಪ್ರಯತ್ನಗಳು ವೇಗ ಪಡೆಯಲಿವೆ. ಸ್ನೇಹಿತರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ಪ್ರೀತಿಪಾತ್ರರಿಂದ ಶುಭ ಸುದ್ದಿಯು ನಿಮ್ಮ ದಿನವನ್ನು ಬೆಳಗಲಿದೆ. ಕುಟುಂಬದೊಂದಿಗೆ ಪ್ರವಾಸಕ್ಕೆ ಯೋಜಿಸಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮ್ಮ ಮನೆ-ಕುಟುಂಬದ ಮೇಲೆ ಗಮನಹರಿಸುವಿರಿ. ಕೆಲಸದಲ್ಲಿ ಯಶಸ್ಸನ್ನು ಗಳಿಸುವಿರಿ. ಭೌತಿಕ ವಿಷಯಗಳಲ್ಲಿ ಗಮನ ಹೆಚ್ಚಾಗ್ಲೈದೆ. ನಿರ್ವಹಣಾ ಸಾಮರ್ಥ್ಯ ಸುಧಾರಿಸಲಿದೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳ ವಿಷಯದಲ್ಲಿ ತಾಳ್ಮೆಯಿಂದಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ವೃತ್ತಿ ಸಂಬಂಧಿತ ಪ್ರವಾಸಗಳಿಂದ ಭರ್ಜರಿ ಲಾಭವಾಗಲಿದೆ. ಸಹಕಾರಿ ಪ್ರಯತ್ನಗಳಲ್ಲಿ ನಿರೀಕ್ಷೆಗಿಂತ ಉತ್ತಮ ಫಲ ದೊರೆಯಲಿದೆ. ಒಡಹುಟ್ಟಿದವರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸು ನಿರಾಳವಾಗುತ್ತದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಕೌಟುಂಬಿಕ ಚಟುವಟಿಕೆಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ವೈಯಕ್ತಿಕ ಸಂವಹಣಕ್ಕೆ ಹೆಚ್ಚಿನ ಆದ್ಯತೆ ನೀಡಿ. ಪ್ರೀತಿಪಾತ್ರರೊಂದಿಗೆ ಆತ್ಮವಿಶ್ವಾಸ, ನೈತಿಕತೆಯಿಂದ ಇರಿ. ಸಂಪತ್ತು-ಸಮೃದ್ಧಿ ಹೆಚ್ಚಾಗಲಿದೆ. ಮನೆಯಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. 

ಇದನ್ನೂ ಓದಿ- ಮೃಗಶಿರಾ ನಕ್ಷತ್ರದಲ್ಲಿ ಗುರು ಸಂಚಾರ: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯವಹಾರ ವೃದ್ಧಿ, ಬಂಗಾರದ ಸಮಯ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ಮಹತ್ವದ ಫಲಿತಾಂಶಗಳು ನಿಮ್ಮ ಪರವಾಗಿ ತಿರುಗಳಿವೆ. ಸೃಜನಶೀಲ ಅನ್ವೇಷಣೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವೈಯಕ್ತಿಕ ಸಾಧನೆಗಳು ವೇಗ ಪಡೆಯಲಿವೆ. ಪೂರ್ವಜರಾ ವ್ಯವಹಾರದಲ್ಲಿ ಯಶಸ್ಸು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope)
ಎಚ್ಚರಿಕೆಯಿಂದ ಕೆಲಸ ಮಾಡಿದರೆ ಸ್ಥಿರ ಫಲಿತಾಂಶವನ್ನು ಕಾಯ್ದುಕೊಳ್ಳುವಿರಿ. ವೈಯಕ್ತಿಕ ಸಂಬಂಧಗಳು ಬಲಗೊಳ್ಳುತ್ತವೆ. ಆದಾಗ್ಯೂ, ನಿಮ್ಮ ವೆಚ್ಚಗಳು ಮತ್ತು ಹೂಡಿಕೆಗಳ ಮೇಲೆ ನಿಯಂತ್ರಣ ಕಾಯ್ದುಕೊಳ್ಳಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ವ್ಯಾಪಾರ-ವಾಣಿಜ್ಯ ವಿಷಯಗಳು ಅನುಕೂಲಕರವಾಗಿರುತ್ತವೆ. ಆತ್ಮವಿಶ್ವಾಸದಿಂದ ಮುಂದುವರೆದರೆ ಕಾನೂನು ಸಮಸ್ಯೆಗಳು ಸುವ್ಯವಸ್ಥಿತವಾಗಿ ಬಗೆಹರಿಯಲಿವೆ. ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಭವಿಷ್ಯದಲ್ಲಿ ಲಾಭದಾಯಕ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಉದ್ಯೋಗ ಸ್ಥಳದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಆಡಳಿತಾತ್ಮಕ ವಿಷಯಗಳಲ್ಲಿ ವೇಗವನ್ನು ಕಾಣುವಿರಿ. ವ್ಯವಹಾರ ಸಂಬಂಧಿತ ಚರ್ಚೆಗಳು ಪ್ರಭಾವಶಾಲಿಯಾಗಿರುತ್ತವೆ. ಹಣಕಾಸಿನ ಮಾತುಕತೆಗಳಲ್ಲಿ ಜಯ ಸಾಧಿಸುವಿರಿ. ಸರ್ಕಾರಿ ಸಂಬಂಧಿತ ವ್ಯವಹಾರಗಳಲ್ಲಿ ಅನುಕೂಲಕರ ಫಲ. 

ಇದನ್ನೂ ಓದಿ- ಮುಂದಿನ ಮೂರು ದಿನದಲ್ಲಿ ಪುಷ್ಯಾ ನಕ್ಷತ್ರದಲ್ಲಿ ಮಂಗಳನ ಸಂಚಾರ.. ಈ ರಾಶಿಯ ಜನರು ಇನ್ನು ಮುಂದೆ  ಕೈಯಲ್ಲಿ ಕಸ ಹಿಡಿದರೂ ಚಿನ್ನ! ಬದುಕಾಗಲಿದೆ ಬಂಗಾರ  

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಪ್ರಮುಖ ಕಾರ್ಯಗಳಲ್ಲಿ ವೇಗ ಕಂಡು ಬರಲಿದೆ. ಗೆಲ್ಲುವ ಮನಸ್ಥಿತಿ ಕಾಯ್ದುಕೊಳ್ಳಿ. ವ್ಯವಹಾರದಲ್ಲಿ ಭಾರೀ ಲಾಭವು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ಉನ್ನತ ಶಿಕ್ಷಣದ ವಿಚಾರದಲ್ಲಿ ಪ್ರಗತಿಯನ್ನು ಸಾಧಿಸುವಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ವ್ಯಾಪಾರ ಚಟುವಟಿಕೆಗಳು ಹೆಚ್ಚಾಗಿರುತ್ತವೆ. ಆದರೆ, ಇದಕ್ಕಾಗಿ ನಿಮ್ಮ ಯೋಗಕ್ಷೇಮವನ್ನು ನಿರ್ಲಕ್ಷಿಸಬೇಡಿ. ಪ್ರಮುಖ ವಿಚಾರಗಳಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಶಿಸ್ತು ಮತ್ತು ಸಂಘಟನೆಗೆ ಒತ್ತು ನೀಡಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ವೃತ್ತಿಪರರು ಸಕಾರಾತ್ಮಕ ದೃಷ್ಟಿಕೋನವನ್ನು ಕಾಯ್ದುಕೊಂಡು ಮುಂದುವರೆಯುವುದರಿಂದ ಶುಭವಾಗಲಿದೆ. ಚಿಂತನಶೀಲರಾಗಿ ನಿರ್ಧಾರ ಕೈಗೊಳ್ಳುವುದು ಲಾಭದಾಯಕವಾಗಿದೆ. ವೈವಾಹಿಕ ಜೀವನದಲ್ಲಿ ಸಾಮರಸ್ಯ ಉಳಿಯಲಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಕಠಿಣ ಪರಿಶ್ರಮ ಮತ್ತು ಸಮರ್ಪಣೆಗೆ ಒತ್ತು ನೀಡಿ ಮುಂದುವರೆಯಿರಿ. ವೃತ್ತಿ ವ್ಯವಹಾರದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ. ವಾಣಿಜ್ಯ ಸಂಬಂಧಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ವಿರೋಧಿಗಳ ಬಗ್ಗೆ ಎಚ್ಚರಿಕೆಯಿಂದ ಇರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News