ದಿನಭವಿಷ್ಯ 10-03-2025: ಸೋಮವಾರ ಪುಷ್ಯ ನಕ್ಷತ್ರ, ಶೋಭನ ಯೋಗ, ಈ ರಾಶಿಯವರಿಗೆ ವಾಹನ ಖರೀದಿ ಭಾಗ್ಯ

Today Horoscope 10th March 2025: ಈ ದಿನ ಸೋಮವಾರ ಪುಷ್ಯ ನಕ್ಷತ್ರ ಶೋಭನ ಯೋಗ ಬವ ಕರಣ.  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.   

Written by - Yashaswini V | Last Updated : Mar 10, 2025, 07:58 AM IST
  • ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ
  • ಏಕಾದಶಿ ತಿಥಿಯ ಈ ದಿನ ಸೋಮವಾರ ಪುಷ್ಯ ನಕ್ಷತ್ರ ಶೋಭನ ಯೋಗ ಬವ ಕರಣ.
  • ಇಂದು ಎಲ್ಲಾ 12 ರಾಶಿಯವರಿಗೆ ಯಾರಿಗೆ ಹೇಗಿದೆ ತಿಳಿಯಿರಿ.
ದಿನಭವಿಷ್ಯ 10-03-2025:  ಸೋಮವಾರ ಪುಷ್ಯ ನಕ್ಷತ್ರ, ಶೋಭನ ಯೋಗ, ಈ ರಾಶಿಯವರಿಗೆ ವಾಹನ ಖರೀದಿ ಭಾಗ್ಯ

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿಯ ಈ ದಿನ ಸೋಮವಾರ ಪುಷ್ಯ ನಕ್ಷತ್ರ ಶೋಭನ ಯೋಗ ಬವ ಕರಣ. ಎಲ್ಲಾ 12 ರಾಶಿಯವರಿಗೆ ಯಾರಿಗೆ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಕೌಟುಂಬಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ಸಂತೋಷ. ಪ್ರೀತಿಪಾತ್ರರಿಗೆ ಸಮಯ ನೀಡಿ. ವೈಯಕ್ತಿಕ ವಿಚಾರಗಳ ಬಗ್ಗೆ ಗಮನ ಕೇಂದ್ರೀಕರಿಸಿ. ವ್ಯವಹಾರದಲ್ಲಿ ಹಿರಿಯರ ಸಲಹೆಗಳನ್ನು ಅನುಸರಿಸಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ನಿಮ್ಮ ಬದುಕಿನಲ್ಲಿ ಧನಾತ್ಮಕತೆ ಮೇಲುಗೈ ಸಾಧಿಸಲಿದೆ. ಪ್ರೀತಿಪಾತ್ರರಿಂದ ಆಹ್ಲಾದಕರ ಸುದ್ದಿಯನ್ನು ಸ್ವೀಕರಿಸುವಿರಿ. ಸಾಮಾಜಿಕ ಕಾರ್ಯಗಳಲ್ಲಿ ಮುಂದಾಳತ್ವ ವಹಿಸುವಿರಿ. ಸಂಬಂಧಿಕರ ಬೆಲೆ ಅರಿಯುವಿರಿ. ವಾಹನ ಖರೀದಿ ಯೋಗವಿದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನೀವಿಂದು ಕುಟುಂಬದೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ. ಆಹಾರ ಪಾನೀಯಗಳ ಬಗ್ಗೆ ನಿಗಾವಹಿಸಿ. ಇಲ್ಲವೇ, ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಿಯಾಣಬಹುದು. ವೈಯಕ್ತಿಕ ವಿಚಾರಗಳಲ್ಲಿ ಶುಭ ಸುದ್ದಿ ನಿರೀಕ್ಷಿಸಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಸೃಜನಶೀಲ ಚಟುವಟಿಕೆಗಳ ಮೂಲಕ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಧೈರ್ಯ ಮತ್ತು ಶೌರ್ಯದಿಂದ ಪ್ರಗತಿ ಕಾಣುವಿರಿ. ದಾಂಪತ್ಯದಲ್ಲಿ ಸುಖ-ಸಂತೋಷ ಇರಲಿದೆ. ನಿಮ್ಮ ಕೆಲಸದಲ್ಲಿ ನಾವೀನ್ಯತೆ ಕಾಪಾಡಿಕೊಳ್ಳಿ. 

ಇದನ್ನೂ ಓದಿ- ಉಚ್ಚ ರಾಶಿಯಲ್ಲಿ ಗ್ರಹಗಳ ಅಧಿಪತಿ: ಮೂರು ರಾಶಿಯವರಿಗೆ ಭಾಗ್ಯೋದಯ, ಕೀರ್ತಿ, ಯಶಸ್ಸು, ಸೂರ್ಯನಂತೆ ಕಂಗೊಳಿಸಲಿದೆ ಬದುಕು! 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ವೃತ್ತಿ ವ್ಯವಹಾರದಲ್ಲಿ ನಿಮ್ಮ ಸೋಮಾರಿತನವೇ ನಿಮ್ಮ ದೊಡ್ಡ ಶತ್ರು. ಇದನ್ನು ತಪ್ಪಿಸಿ. ಯಾವುದೇ ಪ್ರಮುಖ ವ್ಯವಹಾರಗಳಲ್ಲಿ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ವಿಶಾಲ ದೃಷ್ಟಿಕೋನದಿಂದ ಕೆಲಸ ಮಾಡಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಕೆಲಸವನ್ನು ವೇಗಗೊಳಿಸುವುದರಿಂದ ಶುಭ ಫಲ. ಸಮಯಕ್ಕೆ ಸರಿಯಾಗಿ ಹಿಡಿದ ಕೆಲಸ ಪೂರ್ಣಗೊಳಿಸುವುದರಿಂದ ಮನಸ್ಸಿಗೆ ನೆಮ್ಮದಿ. ವೃತ್ತಿಯಲ್ಲಿ ಪ್ರಗತಿ. ಜೀವನದ ಪ್ರಮುಖ ವಿಚಾರಗಳ ಬಗ್ಗೆ ದೊಡ್ಡ ನಿರ್ಧಾರ ಕೈಗೊಳ್ಳುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಅಧಿಕಾರ ಮತ್ತು ನಿರ್ವಹಣೆಯ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ. ಹಣಕಾಸಿನ ವಿಚಾರಗಳಲ್ಲಿ ನಿರ್ದಿಷ್ಟ ಗುರಿ ಸಾಧಿಸುವಿರಿ. ಕಾರ್ಯಕ್ಷಮತೆಗೆ ತಕ್ಕ ಪ್ರತಿಫಲ ದೊರೆಯಲಿದೆ. ಸ್ಪರ್ಧೆಗಳಲ್ಲಿ ಜಯ ಸಾಧಿಸುವಿರಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ದೈವಿಕ ಆಶೀರ್ವಾದ ನಿಮ್ಮ ಮೇಲಿರಲಿದೆ. ಇದರಿಂದಾಗಿ, ಕೆಲಸ ಕಾರ್ಯಗಳಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುವಿರಿ. ನಂಬಿಕೆ ಮತ್ತು ವಿಶ್ವಾಸವು ನಿಮ್ಮ ಅದೃಷ್ಟವನ್ನು ಬಳಪಡಿಸುತ್ತದೆ. ಹಣಕಾಸಿನ ವಹಿವಾಟು ಸರಾಗವಾಗಿರುತ್ತದೆ. 

ಇದನ್ನೂ ಓದಿ- ಚಂದ್ರ ಗ್ರಹಣ- ಶಶ ರಾಜಯೋಗ; ಈ ನಾಲ್ಕು ರಾಶಿಯವರಿಗೆ ಅದೃಷ್ಟದ ಬೆಂಬಲದಿಂದ ಹೊಡೆಯಲಿದೆ ಜಾಕ್‌ಪಾಟ್!!

ಧನು ರಾಶಿಯವರ ಭವಿಷ್ಯ (Sagittarius Horoscope):  
ಪ್ರಮುಖ ಕೆಲಸಗಳಲ್ಲಿ ನಿರ್ಲಕ್ಷ್ಯ ತೋರಬೇಡಿ. ಕೆಲಸದಲ್ಲಿ ಬುದ್ದಿವಂತಿಕೆಯು ನಿಮ್ಮ ಪ್ರಗತಿಯ ಹಾದಿಯನ್ನು ತೆರೆಯಲಿವೆ. ಕೆಲವು ಅನಿರೀಕ್ಷಿತ ಘಟನೆಗಳು ಜರುಗಬಹುದು. ಇದಕ್ಕಾಗಿ ಮಾನಸಿಕವಾಗಿ ಸಿದ್ದರಾಗಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ನಾಯಕತ್ವ ಜವಾಬ್ದಾರಿಯನ್ನು ಸುಲಭವಾಗಿ ನಿರ್ವಹಿಸುವಿರಿ. ಆಡಳಿತಾತ್ಮಕ ವಿಚಾರಗಳಲ್ಲಿ ಕೀರ್ತಿ, ಯಶಸ್ಸು ಲಭಿಸಲಿದೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಭಾರೀ ಲಾಭ. ಹೊಸ ವಾಹನ ಖರೀದಿಸುವ ಕನಸು ನನಸಾಗಲಿದೆ.  

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಯಾವುದೇ ವಿಚಾರಗಳಲ್ಲಿ ಇಂದು ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕಠಿಣ ಪರಿಶ್ರಮ ಮತ್ತು ಬುದ್ದಿವಂತಿಕೆಯಿಂದ ಉದ್ಯೋಗ ಸ್ಥಳದಲ್ಲಿ ನಿಮಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಪ್ರಮುಖ ಕೆಲಸಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಆದಾಗ್ಯೂ, ವ್ಯವಹಾರದಲ್ಲಿ ಹಿರಿಯರ ಸಲಹೆ ಸೂಚನೆಗಳನ್ನು ಪರಿಗಣಿಸಿ. ಹಣಕಾಸಿನ ವಹಿವಾಟುಗಳಲ್ಲಿ ಜಾಗರೂಕರಾಗಿರಿ. ವೈಯಕ್ತಿಕ ವಿಷಯಗಳಲ್ಲಿ ಸಕಾರಾತ್ಮಕ ದೃಷ್ಟಿಕೋನವನ್ನು ಇರಿಸಿಕೊಳ್ಳಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News