Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಸೋಮವಾರದ ಈ ದಿನ ಪುನರ್ವಸು ನಕ್ಷತ್ರ, ಸಾಧ್ಯ ಯೋಗ, ಗರಜ ಕರಣ ಇರಲಿದೆ. ಇಂದಿನ ದಿನ ಭವಿಷ್ಯ ಯಾರಿಗೆ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ರಾಶಿಯವರಿಗೆ ಇಂದು ವೈಯಕ್ತಿಕ ವಿಷಯಗಳಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ಕುಟುಂಬದಲ್ಲಿ ಆತ್ಮೀಯತೆ, ವಾತ್ಸಲ್ಯ ಇರುವುದರಿಂದ ಬೆಟ್ಟದಂತ ಸಮಸ್ಯೆಗಳು ಕೂಡ ಸುಲಭವಾಗಿ ಬಗೆಹರಿಯಲಿವೆ. ವ್ಯಕ್ತಿತ್ವ ವರ್ಧನೆಯತ್ತ ಗಮನಹರಿಸುವುದು ಹೆಚ್ಚು ಲಾಭದಾಯಕವಾಗಿದೆ. ಭಾವನಾತ್ಮಕವಾಗಿ ಅತ್ಯುತ್ತಮ ದಿನವನ್ನು ಕಾಣುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಮನೆಯಲ್ಲಿಂದು ಹಬ್ಬದ ವಾತಾವರಣ ಇರಲಿದೆ, ಪ್ರೀತಿಪಾತ್ರರೊಂದಿಗೆ ಶುಭ ಸುದ್ದಿಯನ್ನು ಹಂಚಿಕೊಳ್ಳುವಿರಿ. ಒಡಹುಟ್ಟಿದವರೊಂದಿಗಿನ ಬಾಂಧವ್ಯ ಬಲಗೊಳ್ಳಲಿದೆ. ಪ್ರಮುಖ ಕೆಲಸಗಳಲ್ಲಿ ಮನೆಯಲ್ಲಿ ಹಿರಿಯರ ಬೆಂಬಲ ದೊರೆಯಲಿದೆ. ಕೆಲಸದ ಕ್ಷೇತ್ರದಲ್ಲಿ ಸಹೋದ್ಯೋಗಿಗಳೊಂದಿಗೆ ಸಹಕಾರ ಮನೋಭಾವವನ್ನು ಕಾಪಾಡಿಕೊಳ್ಳಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ವ್ಯವಹಾರ ಸಂಬಂಧ ಪ್ರಯಾಣ ಕೈಗೊಳ್ಳಬೇಕಾಗಬಹುದು. ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವವರಿಗೆ ಆಹ್ಲಾದಕರ ದಿನ ಇದಾಗಿದೆ. ಉದ್ಯೋಗದಲ್ಲಿ ನಿರಂತರ ಪ್ರಯತ್ನವನ್ನು ಮುಂದುವರೆಸಿ. ವ್ಯಾಪಾರದಲ್ಲಿ ಹಣಕಾಸು ವಿಷಯಗಳ ಬಗ್ಗೆ ಜಾಗರೂಕರಾಗಿರಿ. ಪ್ರಮುಖ ಯೋಜನೆಗಳಲ್ಲಿ ಹಿಂಜರಿಕೆ ಬಿಟ್ಟು ಮುಂದುವರೆಯಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಎಲ್ಲರೊಂದಿಗೆ ಸಮನ್ವಯ ಕಾಯ್ದುಕೊಳ್ಳುವುದರಿಂದ ಇಷ್ಟಾರ್ಥ ಸಿದ್ಧಿಯಾಗಲಿದೆ. ಕೆಲಸದಲ್ಲಿ ನಿಮ್ಮ ಸೃಜನಶೀಲ ಪ್ರಯತ್ನಗಳಿಗೆ ಮನ್ನಣೆ ದೊರೆಯಲಿದೆ. ವ್ಯವಹಾರದಲ್ಲಿ ಅನುಕೂಲಕರ ಪರಿಸ್ಥಿತಿಗಳು ಹೆಚ್ಚಾಗಲಿದೆ. ಗುರಿ ಆಧಾರಿತ ಕಾರ್ಯಗಳಲ್ಲಿ ನಿಗಾವಹಿಸುವುದರಿಂದ ವೈಯಕ್ತಿಕ ಕಾರ್ಯಕ್ಷಮತೆ ಸುಧಾರಿಸಲಿದೆ.
ಇದನ್ನೂ ಓದಿ- ಶುಕ್ರ ಗೋಚಾರ ಫಲ: ಕೇಂದ್ರ ದೃಷ್ಟಿ ಯೋಗದಿಂದ 4 ರಾಶಿಯವರ ಲಕ್ ಚೇಂಜ್, ಭರ್ಜರಿ ಆದಾಯ, ರಾಜವೈಭೋಗದ ಜೀವನ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಈ ರಾಶಿಯವರು ಇಂದು ಆರ್ಥಿಕ ವಹಿವಾಟುಗಳಲ್ಲಿ ಅಜಾಗರೂಕತೆಯನ್ನು ತಪ್ಪಿಸಿದರೆ ಒಳಿತು. ನಿಮ್ಮ ಮಾತು ಸಂಭಾಷಣೆ ಬಗ್ಗೆ ಜಾಗರೂಕರಾಗಿರಿ. ಬೇರೆಯವರ ಮಾತಿಗೆ ಮರುಳಾಗಿ ಮೋಸ ಹೋಗಬೇಡಿ. ನಿಮ್ಮ ಪ್ರೀತಿಪಾತ್ರರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿದರೆ ಎಲ್ಲವೂ ಒಳ್ಳೆಯದೇ ಆಗಲಿದೆ. ಪ್ರಮುಖ ಕೆಲಸಗಳಲ್ಲಿ ಮುಂದಾಳತ್ವ ವಹಿಸುವುದರಿಂದ ಶುಭ ಫಲ ನಿರೀಕ್ಷಿಸಬಹುದು.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಅರ್ಥಿಕವಾಗಿ ಉತ್ತಮ ದಿನವಾಗಿದ್ದು, ನೀವು ಸಾಲಕ್ಕಾಗಿ ಪ್ರಯತ್ನಿಸುತ್ತಿದ್ದರೆ ನಿರೀಕ್ಷೆಯಷ್ಟು ಸಾಲ ದೊರೆಯಲಿದೆ. ಕೆಲಸದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸವನ್ನು ಗುರುತಿಸಿ ಮೆಚ್ಚುಗೆ ನೀಡಲಿದ್ದಾರೆ. ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ಉತ್ತಮ ಪ್ರಯೋಜನವನ್ನು ಪಡೆಯುವಿರಿ. ಸಂವಹನ ಮತ್ತು ಸಂಪರ್ಕ ಸುಧಾರಿಸಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ನಿಮಗಿದ್ದು ಪ್ರತಿ ಕೆಲಸದಲ್ಲೂ ಯಶಸ್ಸು ಕೈ ಹಿಡಿಯಲಿದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ನಿರೀಕ್ಷಿತ ಫಲ ದೊರೆಯಲಿದೆ. ನಿಮ್ಮ ವ್ಯಕ್ತಿತ್ವ ಪ್ರಭಾವಶಾಲಿಯಾಗಿ ಉಳಿಯಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಪ್ರಯಾಣವು ಲಾಭದಾಯಕವಾಗಿರಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಈ ರಾಶಿಯವರಿಗೆ ಕೆಲಸದಲ್ಲಿ ಎದುರಾಗಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಯಾವುದೇ ಕೆಲಸದಲ್ಲಿ ನಂಬಿಕೆ, ವಿಶ್ವಾಸದಿಂದ ಮುಂದುವರೆದರೆ ಇಷ್ಟಾರ್ಥ ಸಿದ್ಧಿಯಾಗುವುದು. ನಾನಾ ವಿಷಯಗಳಲ್ಲಿ ಅಪೇಕ್ಷಿತ ಫಲಿತಾಂಶಗಳನ್ನು ಪದೆಯುವಿರಿ. ಪ್ರತಿ ಹೆಜ್ಜೆಗೂ ಇಂದು ಅದೃಷ್ಟ ಕೈ ಹಿಡಿಯಲಿದೆ. ಒಟ್ಟಾರೆ ಅನುಕೂಲಕರ ಪರಿಸ್ಥಿತಿ ಇರಲಿದೆ.
ಇದನ್ನೂ ಓದಿ- ಹೊಸ ವರ್ಷದಲ್ಲಿ ಮೂರು ರಾಶಿಯವರಿಗೆ ಶುಕ್ರದೆಸೆ: ಧನಕಾರಕನಿಂದ ಕೋಟ್ಯಾಧಿಪತಿ ಯೋಗ, ರಾಜವೈಭೋಗದ ಜೀವನ
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಯಾವುದಾದರೂ ಪ್ರಮುಖ ಕೆಲಸಗಳಿದ್ದರೆ ದಿನದ ಮೊದಲಾರ್ಧವೇ ನಿಮ್ಮ ಕೆಲಸಗಳನ್ನು ಪೂರ್ಣಗೊಳಿಸಿ. ಮಧ್ಯಾಹ್ನದ ನಂತರ ದಿನ ಅಷ್ಟು ಉತ್ತಮವಾಗಿಲ್ಲ. ಅಪಾಯಕಾರಿ ಉದ್ಯಮಗಳಲ್ಲಿ ಕೈ ಹಾಕುವುದನ್ನು ತಪ್ಪಿಸಿ. ಅಪರಿಚಿತರೊಂದಿಗೆ ಯಾವುದೇ ವ್ಯವಹಾರವನ್ನು ತಪ್ಪಿಸಿ. ಕಾನೂನು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಕೆಲಸದಲ್ಲಿ ನಿಮ್ಮ ದಕ್ಷತೆಯು ಸುಧಾರಿಸಲಿದೆ. ವೃತ್ತಿಪರ ಗುರಿಗಳಲ್ಲಿ ಪ್ರಗತಿ ಕಾಣುವಿರಿ. ದೀರ್ಘ ಸಮಯದಿಂದ ಅಡೆತಡೆಯಾಗಿರುವ ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯಗಳು ಪೂರ್ಣಗೊಳ್ಳಲಿವೆ. ಪಾಲುದಾರಿಕೆ ವಿಷಯಗಳು ನಿಮ್ಮ ಪರವಾಗಿರುತ್ತವೆ. ಸ್ನೇಹ-ಸಂಬಂಧಗಳು ಆಳವಾಗುತ್ತವೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಒಳ್ಳೆಯ ದಿನ ಇದಾಗಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಈ ರಾಶಿಯವರು ಇಂದು ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ನಿಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳಬೇಕಾಗುತ್ತದೆ. ಸಂಬಂಧಗಳಲ್ಲಿ ವಾತ್ಸಲ್ಯ ಬಲಗೊಳ್ಳಲಿದೆ. ಹಣಕಾಸಿನ ಪರಿಸ್ಥಿತಿಗಳು ಸರಾಸರಿಗಿಂತ ಉತ್ತಮವಾಗಿ ಉಳಿಯುತ್ತವೆ. ಆದಾಗ್ಯೂ, ದುರಾಸೆಯನ್ನು ತಪ್ಪಿಸಿದರೆ ಒಳ್ಳೆಯದು. ವ್ಯವಹಾರದಲ್ಲಿ ಜಾಗರೂಕರಾಗಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಈ ರಾಶಿಯವರು ಇಂದು ಆರ್ಥಿಕ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ವೈಯಕ್ತಿಕ ಕಾರ್ಯಕ್ಷಮತೆ ಬಲಗೊಳ್ಳುತ್ತದೆ. ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಉಪಕ್ರಮಗಳನ್ನು ಕೈಗೊಳ್ಳುವುದರಿಂದ ಆಗಬಹುದಾದ ನಷ್ಟವನ್ನು ತಪ್ಪಿಸಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನಿರೀಕ್ಷಿತ ಯಶಸ್ಸು ದೊರೆಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









