Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಚತುರ್ಥಿ ತಿಥಿ, ಶುಕ್ರವಾರದ ಈ ದಿನ ಕೃತ್ತಿಕಾ ನಕ್ಷತ್ರ, ಸಿದ್ಧಿ ಯೋಗ, ಬವ ಕರಣ ಇರಲಿದೆ. ಇಂದು ಯಾವ ರಾಶಿಯವರಿಗೆ ಲಕ್ಷ್ಮಿ ಕೃಪೆ ಇರಲಿದೆ. ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಉದ್ಯೋಗ ರಂಗದಲ್ಲಿ ನಿಮ್ಮ ಕಾರ್ಯವೈಖರಿ ಇಂದು ಅಧಿಕಾರಿಗಳ ಮೆಚ್ಚುಗೆ ಗಳಿಸಲಿದೆ. ವೃತ್ತಿಯಲ್ಲಿ ಉತ್ತಮ ಅವಕಾಶಗಳನ್ನು ನೀಡುತ್ತದೆ. ಆರೋಗ್ಯ ಸಮಸ್ಯೆಗಳಿಂದ ಪರಿಹಾರ ಪಡೆಯುವ ಸುದಿನ. ಆಸ್ತಿ ವ್ಯವಹಾರಗಳಲ್ಲಿ ಕೈ ಹಾಕುವ ಮೊದಲು ಸಂಗಾತಿಯೊಂದಿಗೆ ಕುಳಿತು ಚರ್ಚಿಸಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ನಿಮ್ಮ ಕೆಲಸಕ್ಕೆ ಅಗತ್ಯ ಬೆಂಬಲ ಸಹಕಾರವನ್ನು ಪಡೆಯುವಿರಿ. ವೃತ್ತಿ ಬದುಕಿನ ಒತ್ತಡದ ನಡುವೆ ವೈಯಕ್ತಿಕ ಬದುಕಿಗಾಗಿ ಸಮಯ ಮೀಸಲಿಡಿ. ನಿರುದ್ಯೋಗಿಗಳಿಗೆ ಹೊಸ ಕೆಲಸ ಸಿಗಬಹುದು. ಪ್ರೇಮ ಸಂಬಂಧದಲ್ಲಿರುವವರಿಗೆ ಮದುವೆಗಾಗಿ ಮನೆಯವರ ಒಪ್ಪಿಗೆ ದೊರೆಯಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಸಾಕ್ಷಾತ್ ಲಕ್ಷ್ಮಿ ದಯೆಯಿಂದ ನಿಮ್ಮ ಕನಸು ನನಸಾಗುವ ಸಮಯ. ಯೋಜಿತ ಕೆಲಸಗಳು ಸಮಯಕ್ಕೂ ಮುಂಚಿತವಾಗಿ ಮುಗಿಯುವುದರಿಂದ ಭಾರೀ ಲಾಭವನ್ನು ಕಾಣಬಹುದು. ವೇತನ, ಭತ್ಯೆ ಹೆಚ್ಚಳ ಸಾಧ್ಯತೆಯೂ ಇದೆ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಹಿರಿಯರೊಂದಿಗೆ ಕುಳಿತು ಮಾತನಾಡುವುದರಿಂದ ಹಲವು ಕೌಟುಂಬಿಕ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಆರೋಗ್ಯದ ವಿಷಯದಲ್ಲಿ ಎಚ್ಚರ.
ಇದನ್ನೂ ಓದಿ- ಪ್ರಬಲ ಗ್ರಹಗಳ ವಿಶೇಷ ಸಂಯೋಗ: ಶುಕ್ರಾದಿತ್ಯ ರಾಜಯೋಗದಿಂದ ಈ ರಾಶಿಯವರ ಲಕ್ ಚೇಂಜ್, ರಾಜವೈಭೋಗದ ಜೀವನ
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿ-ವ್ಯವಹಾರದಲ್ಲಿ ಗಮನಾರ್ಹವಾಗಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು. ಪ್ರಮೋಷನ್ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ. ವ್ಯವಹಾರದಲ್ಲಿ ದೊಡ್ಡ ಆರ್ಡರ್ ಸಿಗಬಹುದು. ವೈಯಕ್ತಿಕ ಬದುಕಿನಲ್ಲೂ ಲಕ್ಷ್ಮಿ ಕೃಪಾಕಟಾಕ್ಷ ಇರಲಿದ್ದು ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ದಿನ ನೀವು ಬೇಡವೆಂದರೂ ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲೇಬೇಕಾಗುತ್ತದೆ. ಪ್ರತಿಭಾನ್ವಿತ ಜನರಿಗೆ ಉತ್ತಮ ಗೌರವ, ಮನ್ನಣೆ ದೊರೆಯಲಿದೆ. ಆದಾಯದಲ್ಲಿ ಏರಿಕೆಯು ನಿಮ್ಮ ದಿನವನ್ನು ಬೆಳಗಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಉದ್ಯೋಗ ಕ್ಷೇತ್ರದಲ್ಲಿ ಇಂದು ನಿರೀಕ್ಷಿತ ಬದಲಾವಣೆಗಳು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ. ಇಂದು ನಿಮ್ಮ ವೈಯಕ್ತಿಕ ಬದುಕಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬೇಕಾಗಬಹುದು. ಈ ಸಂದರ್ಭದಲ್ಲಿ ಮನಸ್ಸಿನ ಮಾತಿಗಿಂತ ತಾರ್ಕಿಕವಾಗಿ ಯೋಚಿಸಿ ನಿರ್ಧರಿಸುವುದು ಸೂಕ್ತ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಕೆಲಸದಲ್ಲಿ ನಿಮ್ಮ ಸಾಮರ್ಥ್ಯವನ್ನು ಸಾಬೀತುಪದಿಸುವಿರಿ. ಮೇಲಾಧಿಕಾರಿಗಳು ನಿಮ್ಮ ಕಾರ್ಯಕ್ಷಮತೆಯನ್ನು ಮೆಚ್ಚಲಿದ್ದಾರೆ. ವ್ಯವಹಾರಗಳು ಸುಗಮವಾಗಿ ನಡೆಯಲಿದ್ದು ಆದಾಯ ಹೆಚ್ಚಾಗಲಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ.
ಇದನ್ನೂ ಓದಿ- ದೀಪಾವಳಿ ಬೆನ್ನಲ್ಲೇ ಈ ರಾಶಿಯವರಿಗೆ ಬುಧ ಭುಕ್ತಿ: ಹೊಳೆಯಲಿದೆ 4 ರಾಶಿಯವರ ಅದೃಷ್ಟ, ವೃತ್ತಿ-ವ್ಯವಹಾರದಲ್ಲಿ ಸಂಪತ್ತಿನ ಸುಯೋಗ
ಧನು ರಾಶಿಯವರ ಭವಿಷ್ಯ (Sagittarius Horoscope):
ವೃತ್ತಯಲ್ಲಿ ಸ್ಥಿರತೆ ಮುಂದುವರೆಯಲಿದೆ. ಸರ್ಕಾರಿ ನೌಕರಿಯಲ್ಲಿರುವವರಿಗೆ ಭತ್ಯೆ ಕೈ ಸೇರಲಿದೆ. ವ್ಯವಹಾರದಲ್ಲಿ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಸಂಜೆ ವೇಳೆಗೆ ಮನೆಗೆ ಅತಿಥಿಗಳ ಆಗಮನವು ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ. ಹಠಾತ್ ಧನ ಲಾಭ ಸಾಧ್ಯತೆಯೂ ಇದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಗಳಿಸುವಿರಿ. ವೈಯಕ್ತಿಕ ಸಮಸ್ಯೆಗಳಿಂದ ಪರಿಹಾರ ಪಡೆಯಲು ಹಿರಿಯರ ಮಾರ್ಗದರ್ಶನವನ್ನು ಅನುಸರಿಸಿ. ನಿಮ್ಮ ಆರ್ಥಿಕ ಪರಿಸ್ಥಿತಿ ಹದಗೆಡುವುದನ್ನು ತಪ್ಪಿಸಲು ಖರ್ಚುಗಳನ್ನು ನಿಯಂತ್ರಿಸಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಉದ್ಯೋಗದಲ್ಲಿ ಆಶಾದಾಯಕವಾಗಿ ಮುಂದುವರೆಯುವುದರಿಂದ ನಿಮ್ಮ ಯಶಸ್ಸನ್ನು ತಡೆಯಲು ಯಾರಿಗೂ ಸಾಧ್ಯವಾಗುವುದಿಲ್ಲ. ಅನಿರೀಕ್ಷಿತ ಲಾಭಗಳೊಂದಿಗೆ ಶುಭ ಸುದ್ದಿಯೊಂದು ನಿಮ್ಮ ದಿನವನ್ನು ಉತ್ಸಾಹಭರಿತವಾಗಿಸಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಉದ್ಯೋಗ ಕ್ಷೇತ್ರದಲ್ಲಿ ಇಂದು ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸುತ್ತಮುತ್ತಲಿನವರು ನಿಮ್ಮ ಮಾತಿನಿಂದ ಆಕರ್ಷಿತರಾಗುತ್ತಾರೆ. ಹೆಚ್ಚುವರಿ ಆದಾಯ ಗಳಿಸುವ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯಲಿದೆ. ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ ಸಿಗಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









