ದಿನಭವಿಷ್ಯ 12-04-2025: ಚೈತ್ರ ಹುಣ್ಣಿಮೆಯ ದಿನವೇ ವ್ಯಾಘಾತ ಯೋಗ, ಈ ರಾಶಿಯವರಿಗೆ ಮನಸ್ಸಿಗೆ ಕಿರಿಕಿರಿ

Today Horoscope 12th April 2025: ಈ ದಿನ ಶನಿವಾರ, ಹಸ್ತ ನಕ್ಷತ್ರ, ವ್ಯಾಘಾತ ಯೋಗ, ವಿಷ್ಟಿ ಕರಣ. ಇಂದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 12, 2025, 06:54 AM IST
  • ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿ
  • ಈ ದಿನ ಶನಿವಾರ, ಹಸ್ತ ನಕ್ಷತ್ರ, ವ್ಯಾಘಾತ ಯೋಗ, ವಿಷ್ಟಿ ಕರಣ.
  • ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ.
ದಿನಭವಿಷ್ಯ 12-04-2025:  ಚೈತ್ರ ಹುಣ್ಣಿಮೆಯ ದಿನವೇ ವ್ಯಾಘಾತ ಯೋಗ, ಈ ರಾಶಿಯವರಿಗೆ ಮನಸ್ಸಿಗೆ ಕಿರಿಕಿರಿ

Shanivara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ಹುಣ್ಣಿಮೆ ತಿಥಿಯ ಈ ದಿನ ಶನಿವಾರ, ಹಸ್ತ ನಕ್ಷತ್ರ, ವ್ಯಾಘಾತ ಯೋಗ, ವಿಷ್ಟಿ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಪ್ರಮುಖ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಹೆಚ್ಚಾಗಬಹುದು. ಆದರೆ, ನಿಮ್ಮ ಮನೋಬಲ ಗಟ್ಟಿಯಾಗಿದ್ದರೆ ನಿಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ. ವೈಯಕ್ತಿಕ ಸಂಬಂಧಗಳಲ್ಲಿ ಪ್ರಾಮಾಣಿಕತೆಯಿಂದ ಇರಿ. ಸಕಾರಾತ್ಮಕ ದೃಷ್ಟಿಕೋನದಿಂದ ಮುಂದುವರೆಯಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕೆಲಸದಲ್ಲಿ ನಿಮ್ಮ ಸಮರ್ಪಣ ಮನೋಭಾವದಿಂದ ನಿರೀಕ್ಷಿತ ಫಲಿತಾಂಶ ಪಡೆಯುವಿರಿ. ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯವನ್ನು ಸರಿಸಲು ಅವರೊಂದಿಗೆ ಪ್ರೀತಿಯಿಂದ ಮಾತನಾಡಿ. ದುಡ್ಡು ಎಲ್ಲವನ್ನೂ ನೀಡುವುದಿಲ್ಲ. ಹಣದ ಅಹಂಕಾರವನ್ನು ಬದಿಗಿಟ್ಟು ಮುಂದೆ ಸಾಗಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ಕೆಲವು ಯೋಜಿತ ಚಟುವಟಿಕೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಆದಾಗ್ಯೂ, ದಿನವು ಫಲಪ್ರದವಾಗಿರುತ್ತದೆ. ಮನೆಯಲ್ಲಿ ಸವಾಲಿನ ಸಂದರ್ಭಗಳು ಎದುರಾಗಬಹುದು. ನೀವು ತಾಳ್ಮೆಯಿಂದ ಇದ್ದರೆ ಎಲ್ಲವೂ ಸರಿಹೋಗಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ಪ್ರಗತಿಪರ ಚಿಂತನೆಗಳಿಗೆ ಇಂದು ರೆಕ್ಕೆ ದೊರೆಯಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಗೋಚರಿಸಲಿದೆ. ಹೂಡಿಕೆಯ ವಿಚಾರದಲ್ಲಿ ಸುರಕ್ಷತೆ ಬಗ್ಗೆ ಗಮನಹರಿಸಿ. ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಹಲವು ಬಾರಿ ಯೋಚಿಸುವುದು ಒಳಿತು. 

ಇದನ್ನೂ ಓದಿ- Shani Vakri: 138 ದಿನಗಳವರೆಗೆ ಈ ರಾಶಿಯವರಿಗೆ ಶನಿ ದಯೆ, ಧನ-ಸಂಪತ್ತು, ಕೀರ್ತಿ, ಗೌರವ ಶನಿಮಹಾತ್ಮನಿಂದ ಭಾಗ್ಯೋದಯ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ನೀವು ಭಾವನಾತ್ಮಕ ಬದ್ದತೆಯೊಂದಿಗೆ ಕೆಲಸ ಮಾಡಬೇಕಾಗುತ್ತದೆ. ಅಡೆತಡೆಗಳನ್ನು ನಿವಾರಿಸಿ ಮುಂದುವರೆಯಲು ಪ್ರಯತ್ನಿಸಿ. ಪ್ರೀತಿ ಮತ್ತು ಸ್ನೇಹ ಸಂಬಂಧಗಳಲ್ಲಿ ಸಣ್ಣ ತಪ್ಪು ಗ್ರಹಿಕೆಯನ್ನು ಮುಕ್ತ ಮಾತುಕತೆಯ ಮೂಲಕ ಪರಿಹರಿಸಿಕೊಳ್ಳಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಹೆಚ್ಚಿನ ಶಕ್ತಿಯು ನಿಮ್ಮ ಮನಸ್ಸನ್ನು ಆವರಿಸಲಿದೆ. ಇದರಿಂದ ನಿಮ್ಮ ಆತ್ಮವಿಶ್ವಾಸ, ಸ್ಥಿರತೆ ಹೆಚ್ಚಾಗಲಿದೆ. ನಿಮ್ಮೆಲ್ಲಾ ಚಟುವಟಿಕೆಗಳಲ್ಲಿ ಸಮರ್ಪಣೆ ಇದ್ದಲ್ಲಿ ನಿರೀಕ್ಷಿತ ಫಲವೂ ದೊರೆಯ್ತ್ತದೆ. ವೈಯಕ್ತಿಕ ಬದುಕು ಸುಂದರವಾಗಿರುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ಯಶಸ್ಸಿನ ಹಾದಿಯಲ್ಲಿ ಕಂಡುಬರುವ ಅಡೆತಡೆಗಳು ಉತ್ತಮ ಮಾರ್ಗದರ್ಶನವನ್ನು ನೀಡಲಿವೆ. ಇದರಿಂದ ಮನಸ್ಸಿಗೆ ಕಿರಿಕಿರಿ ಉಂಟಾಗಬಹುದು. ಆದರೆ, ಶಾಂತ ಚಿತ್ತತೆಯಿಂದ ಯೋಚಿಸಿ ಮುಂದುವರೆದರೆ ಯಶಸ್ಸು ಶತಸಿದ್ಧ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಭರವಸೆಯೇ ದಾರಿದೀಪ. ಇದು ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ವೃತ್ತಿಪರ ಬದುಕಿನಲ್ಲಿ ಮನ್ನಣೆ ದೊರೆಯುತ್ತದೆ. ನಿಮ್ಮ ಅರ್ಹತೆಗೆ ತಕ್ಕ ಪ್ರತಿಫಲವೇ ದೊರೆಯುತ್ತದೆ. 

ಇದನ್ನೂ ಓದಿ- Shani Vakri: 138 ದಿನಗಳವರೆಗೆ ಈ ರಾಶಿಯವರಿಗೆ ಶನಿ ದಯೆ, ಧನ-ಸಂಪತ್ತು, ಕೀರ್ತಿ, ಗೌರವ ಶನಿಮಹಾತ್ಮನಿಂದ ಭಾಗ್ಯೋದಯ

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಬಲವಾದ ಮನೋಭಾವವೇ ಇಂದು ನಿಮಗೆ ಎಲ್ಲವನ್ನೂ ಜಯಿಸುವ ಶಕ್ತಿ ನೀಡಲಿದೆ. ನಿಮ್ಮ ದೃಢನಿಶ್ಚಯವು ಯಶಸ್ಸನ್ನು ಗಟ್ಟಿಗೊಳಿಸುತ್ತದೆ. ಸ್ನೇಹಿತರೊಂದಿಗೆ ಹೊರಹೋಗಲು ಯೋಜಿಸಬಹುದು. ಪ್ರೀತಿ ವಿಚಾರದಲ್ಲಿ ಆಸಕ್ತಿ ಹೆಚ್ಚಾಗಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ನೀವು ಅಚಲವಾದ ಶಕ್ತಿಯ ಹರಿವನ್ನು ಹೊಂದಿದ್ದೀರಿ. ನಾಯಕತ್ವದಲ್ಲಿ ನಿಮ್ಮನ್ನು ಮೀರಿಸಲು ಯಾರಿಗೂ ಸಾಧ್ಯವಾಗುವುದಿಲ್ಲ ಇದು ವೃತ್ತಿ ಬದುಕಿನಲ್ಲಿ ನಿಮ್ಮ ಕೀರ್ತಿಯನ್ನು ಹೆಚ್ಚಿಸಲಿದೆ. ಪ್ರಾಮಾಣಿಕವಾದ ಸಂವಾಹನದ ಮೂಲಕ ಒತ್ತಡ ಮುಕ್ತರಾಗುವಿರಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಉಸಿರಾಟದ ಅಭ್ಯಾಸಗಳನ್ನು ಮಾಡುವುದರಿಂದ ಒತ್ತಡದಿಂದ ಪರಿಹಾರ ಪಡೆಯಬಹುದು. ಕೆಲಸದಲ್ಲಿ ತಾತ್ಕಾಲಿಕ ವಿಳಂಬವು ನಿಮ್ಮ ಮನಸ್ಸಿಗೆ ಕಿರಿಕಿರಿ ಉಂಟು ಮಾಡಬಹುದು. ಶಾಂತಿಯುತ ಮಾತುಕತೆಯ ಮೂಲಕ ಎಲ್ಲವನ್ನೂ ಸರಿಪಡಿಸಬಹುದು. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಹೊಸ ಸಂವೇದನೆಯು ವೈಯಕ್ತಿಕ ಬೆಳವಣಿಗೆ ಮತ್ತು ಯಶಸ್ಸಿಗೆ ಅವಕಾಶವನ್ನು ಸೃಷ್ಟಿಸುತ್ತದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲವನ್ನು ಪಡೆಯಬಹುದು. ಮನೆಯಲ್ಲಿ ಸಂತೋಷ ತುಂಬಿರಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News