Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ, ತ್ರಯೋದಶಿ ತಿಥಿ, ಬುಧವಾರದ ಈ ದಿನ ಮಘಾ ನಕ್ಷತ್ರ, ಸುಕರ್ಮಾ ಯೋಗ, ಗರಜ ಕರಣ. ಇಂದು ಯಾವ ರಾಶಿಗೆ ಏನು ಫಲ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮಗೆ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡರೆ ಜೀವನದಲ್ಲಿ ಪ್ರಗತಿಯನ್ನು ಕಾಣಬಹುದು. ಸ್ನೇಹದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ. ಪ್ರೀತಿಪಾತ್ರರೊಂದಿಗೆ ಮೂಡಿದ್ದ ಬಿರುಕು ಸರಿಹೋಗಿ ಸಾಮರಸ್ಯ ಸುಧಾರಿಸುತ್ತದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಗಡುವಿನೊಳಗೆ ಕೆಲಸ ಪೂರ್ಣಗೊಳಿಸುವುದು ಲಾಭದಾಯಕವಾಗಿದೆ. ವೃತ್ತಿ ಬದುಕಿನಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಿ. ವೈಯಕ್ತಿಕ ವ್ಯವಹಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹೊಸ ವಾಹನ ಖರೀದಿ ಯೋಗವಿದೆ. ವೈಯಕ್ತಿಕ ವಿಚಾರಗಳಲ್ಲಿ ಆತುರದ ನಿರ್ಧಾರ ತಪ್ಪಿಸಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಸಾಮಾಜಿಕ ಬದುಕಿನಲ್ಲಿ ಇರುವವರಿಗೆ ಇಂದು ಕೀರ್ತಿ ಹೆಚ್ಚಾಗಲಿದೆ. ನಿಮ್ಮ ಮಾತು ನಡವಳಿಕೆಯಲ್ಲಿ ಮಾಧುರ್ಯ ಕಾಪಾಡಿಕೊಳ್ಳುವುದರಿಂದ ಒಳ್ಳೆಯದಾಗಲಿದೆ. ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಯೋಚಿಸುತ್ತಿದ್ದರೆ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಸಮಾಜದಲ್ಲಿ ಇಂದು ನಿಮ್ಮ ಗೌರವ ಹೆಚ್ಚಾಗುತ್ತದೆ. ಪ್ರೀತಿಪಾತ್ರರೊಂದಿಗೆ ವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ಮಧುರವಾದ ಮಾತು ಮತ್ತು ನಡವಳಿಕೆ ಎಲ್ಲರ ಮೇಲೆ ಪ್ರಭಾವ ಬೀರುತ್ತದೆ. ಮನೆಗೆ ಅತಿಥಿಗಳ ಆಗಮನದಿಂದ ಸಂತೋಷವಾಗಲಿದೆ.
ಇದನ್ನೂ ಓದಿ- ಹೋಳಿ ಹಬ್ಬದ ದಿನವೇ ಅಶುಭಕರ 'ಗ್ರಹಣ ಯೋಗ': ಈ ರಾಶಿಯವರಿಗೆ ಬಂದೊದಗಲಿದೆ ಬೆಟ್ಟದಂತ ಸಮಸ್ಯೆ, ಹೆಜ್ಜೆ ಹೆಜ್ಜೆಗೂ ಸಂಕಷ್ಟ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಭಾವನಾತ್ಮಕ ಮತ್ತು ಸೃಜನಾತ್ಮಕ ಪ್ರಯತ್ನಗಳು ಪರಿಷ್ಕೃತಗೊಳ್ಳುವುವು. ಇದು ನಿಮ್ಮನ್ನು ಮನಸಿಕವಾಗಿ ಬಲಶಾಲಿಯನ್ನಾಗಿಸುತ್ತದೆ. ಕೆಲಸದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಬಹುದು. ವೃತ್ತಿ-ವ್ಯವಹಾರದಲ್ಲಿ ಸ್ಥಿರತೆ ಕಂಡು ಬರಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಯಾವುದೇ ಕಾನೂನಾತ್ಮಾಕ ವಿಚಾರಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಪ್ರಮುಖ ಕೆಲಸಗಳಲ್ಲಿ ಅಜಾಗರೂಕತೆಯನ್ನು ತಪ್ಪಿಸಿ. ಇಂದು ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು. ನಿಮ್ಮ ಕಠಿಣ ಪರಿಶ್ರಮದ ಮೇಲೆ ನಂಬಿಕೆಯಿಟ್ಟು ಮುಂದುವರೆಯಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ವ್ಯಾಪಾರಸ್ಥರು ಇಂದು ಭಾರೀ ಲಾಭವನ್ನು ನಿರೀಕ್ಷಿಸಬಹುದು. ಪ್ರೀತಿಪಾಗತ್ರರೊಂದಿಗೆ ಸಾಮರಸ್ಯವನ್ನು ಕಾಪಾಡಿಕೊಳ್ಳಿ. ಸ್ಪರ್ಧಾತ್ಮಕ ಜಗತ್ತಿಯಲ್ಲಿ ನಿಮ್ಮ ಅದೃಷ್ಟ ಪರೀಕ್ಷಿಸಲು ಶುಭ ದಿನ. ವ್ಯವಹಾರ-ಉದ್ಯಮದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಅಧಿಕಾರಿ ಮತ್ತು ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಗಳನ್ನು ಭೇಟಿಯಾಗುವ ಅವಕಾಶ ದೊರೆಯುತ್ತದೆ. ಸಮಾನದಲ್ಲಿ ನಿಮ್ಮ ಕೀರ್ತಿ, ಘನತೆ ಹೆಚ್ಚಾಗಲಿದೆ. ಆಡಳಿತಾತ್ಮಕ ಕಾರ್ಯಗಳು ವೇಗವನ್ನು ಪಡೆಯಲಿವೆ. ಉದ್ಯೋಗ ರಂಗದಲ್ಲಿ ನಿಮ್ಮ ಸ್ಥಾನ, ಖ್ಯಾತಿ ಬಲಗೊಳ್ಳಲಿದೆ.
ಇದನ್ನೂ ಓದಿ- ಕಟ್ಟಿ ಪೂಜೆ ಮಾಡಿದ್ರೆ ಹಣಕ್ಕೆಂದೂ ಕೊರತೆ ಬರಲ್ಲ! ಮನೆಯಲ್ಲಿ ಸಿರಿವಂತಿಕೆ ತುಂಬಿ ತುಳುಕುತ್ತೆ..
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಅದೃಷ್ಟದ ಸಂಪೂರ್ಣ ಫಲವನ್ನು ಪಡೆಯುವಿರಿ. ವ್ಯವಹಾರದಲ್ಲಿ ನಿಮ್ಮ ನಿರೀಕ್ಷೆಗಿಂತಲೂ ಹೆಚ್ಚಿನ ಲಾಭವನ್ನು ಗಳಿಸುವಿರಿ. ವೃತ್ತಿಪರವಾಗಿ ಬಲವಾಗಿ ಉಳಿಯುತ್ತೀರಿ. ಅನಾರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ಆಹ್ಲಾದಕರ ಸುದ್ದಿಯನ್ನು ಪಡೆಯುವಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ವೃತ್ತಿ-ವ್ಯವಹಾರಗಳು ಸಾಧಾರಣವಾಗಿರುತ್ತವೆ. ಹಣಕಾಸಿನ ವಹಿವಾಟುಗಳಲ್ಲಿ ಬುದ್ದಿವಂತಿಕೆಯಿಂದ ಇರಿ. ಇಲ್ಲವೇ, ನಿಮ್ಮನ್ನು ನಂಬಿಸಿ ಮೋಸ ಮಾಡಬಹುದು. ಅನಿರೀಕ್ಷಿತ ಸಂದರ್ಭಗಳು ಉದ್ಭವಿಸುವ ಸಂಭವವಿದೆ. ಇದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಬಲವಾದ ಕೆಲಸದ ದಿನಚರಿಯನ್ನು ಕಾಪಾಡಿಕೊಳ್ಳಿ. ವೃತ್ತಿ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ನಿಮ್ಮ ನಾಯಕತ್ವ ಕೌಶಲ್ಯಗಳು ಸುಧಾರಿಸುತ್ತವೆ. ಗುರಿ ಮುಟ್ಟಲು ವೈಯಕ್ತಿಕ ಪ್ರಯತ್ನಗ್ಲೌ ಹೆಚ್ಚಾಗುತ್ತವೆ. ನಿಕಟವರ್ತಿಗಳ ವಿಶ್ವಾಸ ಗಳಿಸುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ನಿಮ್ಮ ವೃತ್ತಿಪರ ಸಂಬಂಧ ಬಲಗೊಳ್ಳುತ್ತದೆ. ವೃತ್ತಿಪರರು ಉತ್ತಮವಾಗಿ ಕಾರ್ಯನಿರ್ವಹಿಸುವರು. ನಿಮಗೆ ವಹಿಸಲಾಗಿರುವ ಜವಾಬ್ದಾರಿಗಳನ್ನು ಪರಿಣಾಮಕಾರಿಯಾಗಿ ಪೂರೈಸುವಿರಿ. ಇದರಿಂದ ಮೇಲಾಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









