Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ ಪ್ರತಿಪದಾ ತಿಥಿಯ ಈ ದಿನ ಸೋಮವಾರ ಸ್ವಾತಿ ನಕ್ಷತ್ರ ವಜ್ರಯೋಗ ತೈತಿಲ ಕರಣ. ಮೇಷದಿಂದ ಮೀನ ರಾಶಿಯವರೆಗೆ ಇಂದಿನ ರಾಶಿ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ವೃತ್ತಿಪರ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ನಿಮ್ಮ ಪ್ರಯತ್ನಗಳಲ್ಲಿ ಸಂಪೂರ್ಣ ಯಶಸ್ಸನ್ನು ನಿರೀಕ್ಷಿಸಬಹ್ದು. ವೈವಾಹಿಕ ಜೀವನವೂ ಆಹ್ಲಾದಕರವಾಗಿರುತ್ತದೆ. ಕೌಟುಂಬಿಕ ವಾತಾವರಣ ಸಾಮರಸ್ಯದಿಂದ ಕೂಡಿರಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಉದ್ಯೋಗದಲ್ಲಿ ಪ್ರಮುಖ ವಿಚಾರಗಳಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯ ಮೂಲಕ ನಿಮ್ಮದೇ ಆದ ಛಾಪು ಮೂಡಿಸುವಿರಿ. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. ವ್ಯವಹಾರವು ಸ್ಥಿರವಾಗಿರುತ್ತದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನಿಮ್ಮ ಧೈರ್ಯ ಮತ್ತು ಕ್ರಿಯಾಶೀಲತೆ ಎಲ್ಲರನ್ನೂ ಮೆಚ್ಚಿಸುತ್ತದೆ. ವೃತ್ತಿ ಬದುಕಿನಲ್ಲಿ ಪ್ರಗತಿ ಕಾಣಲು ನಿಮ್ಮ ಗುರಿಗಳಿಗೆ ಬಡ್ಡರಾಗಿ ಮುಂದುವರೆಯಿರಿ. ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ವೈಯಕ್ತಿಕ ಪ್ರಯತ್ನಗಳಲ್ಲಿ ವೇಗವನ್ನು ಕಾಯ್ದುಕೊಳ್ಳುವಿರಿ. ನಿರ್ವಹಣಾ ವಿಷಯಗಳು ಪರಿಣಾಮಕಾರಿಯಾಗಿ ಇರುತ್ತವೆ. ಕಲಾತ್ಮಕ ಮತ್ತು ಸೃಜನಶೀಲ ಕೌಶಲ್ಯಗಳ ಮೇಲೆ ಗಮನ ಕೇಂದ್ರೀಕರಿಸಿ. ವೈಯಕ್ತಿಕ ವಿಚಾರಗಳಲ್ಲಿ ಸಕಾರಾತ್ಮಕತೆ ಇರಲಿದೆ.
ಇದನ್ನೂ ಓದಿ- ರಾಹು ನಕ್ಷತ್ರಪುಂಜದಲ್ಲಿ ಚಂದ್ರ: ಈ ರಾಶಿಯವರಿಗೆ ತೆರೆಯಲಿದೆ ಸುರಿಯಲಿದೆ ಹಣದ ಮಳೆ, ಪ್ರಗತಿಯ ಹಾದಿ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಎಲ್ಲರ ಬೆಂಬಲ ಮತ್ತು ಸಹಕಾರದಿಂದ ಯಶಸ್ಸನ್ನು ಸಾಧಿಸುವಿರಿ. ಹಿರಿಯರ ಬಗ್ಗೆ ಪ್ರೀತಿ-ಗೌರವವನ್ನು ಕಾಯ್ದುಕೊಳ್ಳಿ. ವೃತ್ತಿಪರ ಹೊಂದಾಣಿಕೆಗಳು ಅನುಕೂಲಕರ ಫಲಿತಾಂಶಗಳನ್ನು ತರಲಿದೆ. ಕೆಲಸದಲ್ಲಿ ಗಂಭೀರತೆ ಹೆಚ್ಚಾಗುತ್ತದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಕುಟುಂಬದಲ್ಲಿ ಸಂತೋಷ ಮತ್ತು ನೆಮ್ಮದಿಯ ವಾತಾವರಣ ಇರುತ್ತದೆ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಮಾತು ನಡವಳಿಕೆ ಸಿಹಿಯಾಗಿದ್ದಾರೆ ಜೀವನ ಮತ್ತವೂ ಸುಧಾರಿಸುತ್ತದೆ. ರಕ್ತ ಸಂಬಂಧಿಗಳಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ವೈಯಕ್ತಿಕ ಚಟುವಟಿಕೆಗಳಲ್ಲಿ ಶುಭ ಫಲವಿದೆ. ಸೃಜನಾತ್ಮಕ ಕೆಲಸದಲ್ಲಿರುವವರಿಗೆ ಬಡ್ತಿ ಸಂಭವವಿದೆ. ವ್ಯವಹಾರದಲ್ಲಿ ವೃದ್ಧಿಯಾಗಲಿದೆ. ಹೊಸ ಕೆಲಸ ಆರಂಭಿಸಲು ಶುಭ ಸಮಯ. ಮನೆಗೆ ಅತಿಥಿಗಳು ಭೇಟಿ ನೀಡಬಹುದು.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಕೆಲಸವನ್ನು ಸುಲಭವಾಗಿ ನಿರ್ವಹಿಸುವಿರಿ. ಆದಾಗ್ಯೂ, ಅಗತ್ಯ ಕೆಲಸಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಸಹೋದ್ಯೋಗಿಗಳೊಂದಿಗೆ ಸಮಾನತೆ ಮತ್ತು ನ್ಯಾಯಯುತವಾಗಿ ನಡೆದುಕೊಳ್ಳಿ ವಿದೇಶ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದೆ.
ಇದನ್ನೂ ಓದಿ- ಮೀನ ರಾಶಿಯಲ್ಲಿ ಶುಕ್ರನ ಸಂಚಾರ: ಈ ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸುಖ-ಸಂಪತ್ತು ದೊರೆಯಲಿದೆ!!
ಧನು ರಾಶಿಯವರ ಭವಿಷ್ಯ (Sagittarius Horoscope):
ಹಣಕಾಸು ಮತ್ತು ವ್ಯವಹಾರ ಪ್ರಯತ್ನಗಳು ಯಶಸ್ವಿಯಾಗುತ್ತವೆ. ವೃತ್ತಿ ವಿಸ್ತರಣೆಗೆ ಸುಸಮಯ. ವಿವಿಧ ಪ್ರಯತ್ನಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲವಿದ್ದು ಯಶಸ್ಸು, ಲಾಭವನ್ನು ಗಳಿಸುವಿರಿ. ವೃತ್ತಿ-ವ್ಯವಹಾರದಲ್ಲಿ ವೇಗ ಕಂಡು ಬರಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ನಿರ್ವಹಣೆ ಮತ್ತು ಆಡಳಿತಾತ್ಮಕ ವಿಷಯಗಳು ನಿಮ್ಮ ಪರವಾಗಿರುತ್ತವೆ. ಸೃಜನಶೀಲ ಮತ್ತು ಕೌಶಲ್ಯ ಆಧಾರಿತ ಪ್ರಯತ್ನಗಳಲ್ಲಿ ಪ್ರಗತಿ ಕಂಡು ಬರಲಿದೆ. ಗೆಳೆಯರ ವಿಶ್ವಾಸವನ್ನು ಗಳಿಸುವಿರ್. ವ್ಯಾಪಾರ-ವಾಣಿಜ್ಯ ವಿಚಾರಗಳಲ್ಲಿ ಗಮನವಿರಲಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಅದೃಷ್ಟದ ಬಲವಾದ ಪ್ರಭಾವವು ನಿಮ್ಮ ಪ್ರಗತಿಗೆ ವೇಗವನ್ನು ನೀಡಲಿದೆ. ಲಾಭದಾಯಕ ಯೋಜನೆಗಳೊಂದಿಗೆ ಮುಂದುವರೆಯುವುದು ಶುಭ. ಕೆಲಸಗಳು ನಿಮ್ಮ ನಿರೀಕ್ಷೆಗಿಂತಲೂ ಉತ್ತಮವಾಗಿ ನಡೆಯುತ್ತವೆ. ನಿಮ್ಮಲ್ಲಿ ನಿಮಗೆ ಆತ್ಮವಿಶ್ವಾಸ, ನಂಬಿಕೆ ಬೆಳೆಯಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕೆಲಸದ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಿ. ಸಮಯ ಮತ್ತು ಸ್ಥಳಕ್ಕೆ ಅನುಗುಣವಾಗಿಯೇ ಮುಂದುವರೆಯಿರಿ. ಯಾವುದೇ ವಿಷಯದಲ್ಲಿ ಅತಿಯಾದ ಉತ್ಸಾಹವನ್ನೂ ತಪ್ಪಿಸಿ. ನಿಮ್ಮ ಪ್ರಮುಖ ವ್ಯವಹಾರಗಳಲ್ಲಿ ಕುಟುಂಬ ಮತ್ತು ಸ್ನೇಹಿತರ ಬೆಂಬಲ ದೊರೆಯಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









