Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಬುಧವಾರದ ಈ ದಿನ ಪುಷ್ಯ ನಕ್ಷತ್ರ, ಸಾಧ್ಯ ಯೋಗ, ವಣಿಜ ಕರಣ ಇರಲಿದೆ. ಇಂದಿನ ರಾಶಿ ಭವಿಷ್ಯ ಯಾರಿಗೆ ಹೇಗಿದೆ ತಿಳಿಯೋಣ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮ್ಮ ಜೀವನಶೈಲಿಯನ್ನು ಸುಧಾರಿಸಿಕೊಳ್ಳಲು ಪ್ರಯತ್ನಿಸಿ. ವ್ಯವಹಾರದಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ಹಿರಿಯರೊಂದಿಗೆ ಉತ್ತಮ ಸಂಬಂಧ ಕಾಪಾಡಿಕೊಳ್ಳಿ. ಆಪ್ತರೊಂದಿಗೆ ಮಧುರ ಕ್ಷಣಗಳನ್ನು ಆನಂದಿಸುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ನೀವು ಆಕರ್ಷಕ ವ್ಯಕ್ತಿಯೊಬ್ಬರನ್ನು ಭೇಟಿಯಾಗುವಿರಿ. ಇದರಿಂದ ವ್ಯಾವಹಾರಿಕವಾಗಿ ಲಾಭವಾಗಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದೆ. ಪ್ರೀತಿ-ವಾತ್ಸಲ್ಯ ಬಲಗೊಳ್ಳುತ್ತದೆ. ಒಡಹುಟ್ಟಿದವರೊಂದಿಗೆ ಬಾಂಧವ್ಯ ಬಲಗೊಳ್ಳುತ್ತದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ವೈಯಕ್ತಿಕ ಸಂಬಂಧಗಳಲ್ಲಿ ಪ್ರಗತಿಯನ್ನು ಕಾಣುವಿರಿ. ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಕಾಣುವಿರಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವೃತ್ತಿಪರ ಕೆಲಸಗಳಲ್ಲಿ ಪ್ರಗತಿಯನ್ನು ಕಾಣುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ವೃತ್ತಿ ಬದುಕಿನಲ್ಲಿ ಪ್ರತಿ ಹೆಜ್ಜೆಗೂ ಯಶಸ್ಸು ಪಡೆಯುವಿರಿ. ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳು ನಿಮ್ಮ ಹಾದಿಗೆ ಬರಬಹುದು. ಬಯಸಿದ ಕಾರ್ಯಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಿರಿ. ನಿಮ್ಮ ಕನಸಿನ ಪ್ರೀತಿ ಇಂದು ನಿಮ್ಮನ್ನು ಹರಸಿ ಬರಲಿದೆ.
ಇದನ್ನೂ ಓದಿ- ಕನ್ಯಾ ರಾಶಿಗೆ ಶುಕ್ರ: ಕೆಲವರಿಗೆ ಲಕ್ ಚೇಂಜ್, ಆದರೀ ರಾಶಿಯವರಿಗೆ ಭಾರೀ ನಷ್ಟ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಹೂಡಿಕೆ ವ್ಯವಹಾರಗಳಲ್ಲಿ ಇಂದು ಕೈ ಹಾಕುವುದನ್ನು ತಪ್ಪಿಸಿ. ದೂರರ ಸಂಬಂಧಿಗಳು ಮನೆಗೆ ಬರುವುದರಿಂದ ಖರ್ಚುಗಳು ಹೆಚ್ಚಾಗಬಹುದು. ಆದಾಗ್ಯೂ, ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಸಮಯ ಅತ್ಯುತ್ತಮವಾಗಿದ್ದು ವಿದೇಶ ಉದ್ಯೋಗದ ಕನಸು ನನಸಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಬಂಪರ್ ಆರ್ಥಿಕ ಲಾಭವನ್ನು ಕಾಣುವಿರಿ. ವ್ಯವಹಾರದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಪ್ರತಿಫಲ ದೊರೆಯಲಿದೆ. ಕುಟುಂಬದಲ್ಲಿ ಅನುಕೂಲಕರ ವಾತಾವರಣ ಇರಲಿದೆ. ವೃತ್ತಿಪರರಿಗೆ ಬಡ್ತಿ ಸಾಧ್ಯತೆ ಇದ್ದು ಉನ್ನತ ಹುದ್ದೆಯನ್ನು ಅಲಂಕರಿಸುವಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಉದ್ಯೋಗ ರಂಗದಲ್ಲಿ ನೀವು ನಿರ್ವಹಣಾ ಅಂಶಗಳನ್ನು ಸುಧಾರಿಸುವಲ್ಲಿ ಯಶಸ್ಸು ಕಾಣುವಿರಿ. ನಿಮ್ಮ ಸ್ಮಾರ್ಟ್ ವರ್ಕ್ ಎಲ್ಲರನ್ನೂ ಬೆರಗುಗೊಳಿಸಲಿದೆ. ಹಣಕಾಸಿನ ವಿಷಯವೂ ಉತ್ತಮವಾಗಿರಲಿದ್ದು, ಸುಖ-ಸಂತೋಷ ಹೆಚ್ಚಾಗಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಈ ದಿನ ಅದೃಷ್ಟದ ಬೆಂಬಲ ನಿಮಗಿದ್ದು ವೃತ್ತಿ-ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಹಣಕಾಸಿನ ಪ್ರಯತ್ನಗಳನ್ನು ಹೆಚ್ಚಿಸುವಿರಿ. ಇದರಿಂದ ಬಂಪರ್ ಲಾಭವನ್ನು ಪಡೆಯುವಿರಿ. ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಪ್ರೀತಿಪಾತ್ರರೊಂದಿಗೆ ಸಂತೋಷದ ಸಮಯ ಆನಂದಿಸುವಿರಿ.
ಇದನ್ನೂ ಓದಿ- ದೀಪಾವಳಿ ಬೆನ್ನಲ್ಲೇ ಈ ರಾಶಿಯವರಿಗೆ ಬುಧ ಭುಕ್ತಿ: ಹೊಳೆಯಲಿದೆ 4 ರಾಶಿಯವರ ಅದೃಷ್ಟ, ವೃತ್ತಿ-ವ್ಯವಹಾರದಲ್ಲಿ ಸಂಪತ್ತಿನ ಸುಯೋಗ
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ವೃತ್ತಿ-ವ್ಯವಹಾರದಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ. ಉದ್ಯೋಗದಲ್ಲಿ ಸಹಕಾರಿ ಮನೋಭಾವವು ಉತ್ತಮ ಫಲ ನೀಡಲಿದೆ. ಅಪರಿಚಿತರೊಂದಿಗೆ ವ್ಯವಹರಿಸುವಾಗ ತುಂಬಾ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಕಾಳಜಿ ಅಗತ್ಯ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಈ ದಿನ ಸಾಧ್ಯ ಯೋಗವು ನಿಮ್ಮ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ, ಕುಟುಂಬದಲ್ಲಿ ಸಾಮರಸ್ಯವನ್ನು ಕಾಪಾಡಿಕೊಳ್ಳುವಲ್ಲಿ ನಿಮಗೆ ಸಹಕಾರಿ ಆಗಲಿದೆ. ಧನಾಗಮನ ಹೆಚ್ಚಾಗಲಿದ್ದು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಾಧ್ಯವಾಗುತ್ತದೆ. ಕೆಲವು ಕೆಲಸಗಳಲ್ಲಿ ತಾಳ್ಮೆ ಕಾಪಾಡಿಕೊಳ್ಳಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಕೆಲಸ ಮಾಡುವಾಗ ಕೆಲಸ ಪೂರ್ಣಗೊಳಿಸಲು ಒಂದು ಸೀಮೆಯನ್ನು ರೂಪಿಸಿ. ಶಿಸ್ತು ಮತ್ತು ಕಠಿಣ ಪರಿಶ್ರಮವು ವ್ಯವಹಾರದಲ್ಲಿ ಲಾಭ ಗಳಿಸಲು ಸಹಕಾರಿ ಆಗಲಿದೆ. ಯಾವುದೇ ವ್ಯವಹಾರದಲ್ಲಿ ನೀತಿ-ನಿಯಮಗಳನ್ನು ತಪ್ಪದೇ ಪಾಲಿಸಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ವೃತ್ತಿಪರ ಕ್ಷೇತ್ರದಲ್ಲಿ ಧನಾತ್ಮಕ ವಾತಾವರಣ ಇರಲಿದೆ. ಹಣಕಾಸಿನ ಪ್ರಯತ್ನಗಳು ಲಾಭವನ್ನು ಹೆಚ್ಚಿಸಲಿವೆ. ಆಧುನಿಕ ವಿಷಯಗಳಲ್ಲಿ ಆಸಕ್ತಿ ವಹಿಸುವಿರಿ. ಕೆಲಸದಲ್ಲಿ ನಿಮ್ಮ ಕಾರ್ಯಕ್ಷಮತೆ ಸುಧಾರಿಸಲಿದೆ. ನಿಮ್ಮ ಮಾತು ನಡವಳಿಕೆಯಲ್ಲಿ ಮಧುರತೆಯನ್ನು ಕಾಪಾಡಿಕೊಳ್ಳಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









