Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ದಶಮಿ ತಿಥಿ, ಗುರುವಾರದ ಈ ದಿನ ಆಶ್ಲೇಷಾ ನಕ್ಷತ್ರ, ಶುಭ ಯೋಗ, ಬವ ಕರಣ ಇರಲಿದೆ. ಇಂದಿನ ನಿಮ್ಮ ಭವಿಷ್ಯ ಹೇಗಿದೆ ತಿಳಿಯೋಣ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನೀವು ಭಾವನಾತ್ಮಕವಾಗಿ ನಿರಾಳತೆಯನ್ನು ಅನುಭವಿಸುವಿರಿ. ಪ್ರೀತಿಪಾತ್ರರೊಂದಿಗೆ ಸ್ಮರಣೀಯ ಕ್ಷಣಗಳನ್ನು ಅನುಭವಿಸುವಿರಿ. ವ್ಯವಹಾರದಲ್ಲಿ ಶೇಕಡಾವಾರು ಲಾಭ ಹೆಚ್ಚಾಗಲಿದೆ. ಸ್ಪರ್ಧೆಗಳಲ್ಲಿ ಉತ್ತಮ ಫಲಗಳನ್ನು ನಿರೀಕ್ಷಿಸಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನೀವಿಂದು ನಿಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಹೆಚ್ಚು ಗಮನಹರಿಸುವಿರಿ. ಬೇರೆಯವರ ವಿಷಯಗಳಲ್ಲಿ ಮೂಗು ತೂರಿಸುವುದನ್ನು ಬಿಡಿ. ಇಲ್ಲವೇ, ನಿಮ್ಮ ಗೌರವಕ್ಕೆ ಧಕ್ಕೆ ಉಂಟಾಗಬಹುದು. ವೃತ್ತಿಯಲ್ಲಿ ಸ್ಥಿರತೆ ಮುಂದುವರೆಯಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ನೀವು ಕುಟುಂಬದೊಂದಿಗೆ ಹೆಚ್ಚು ಆನಂದದಾಯಕ ಸಮಯವನ್ನು ಕಳೆಯುವಿರಿ. ಪ್ರಯಾಣವು ಲಾಭದಾಯಕವಾಗಿದೆ. ವ್ಯವಹಾರದಲ್ಲಿ ತಾಳ್ಮೆಯಿಂದ ಮುಂದುವರೆಯುವುದು ಉತ್ತಮ. ನಿಮ್ಮ ಉತ್ತಮ ನಡವಳಿಕೆಗೆ ಬೇರೆಯವರು ತಲೆಬಾಗುತ್ತಾರೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ದಿನ ನೀವು ಮನೆಯ ಅಲಂಕಾರಕ್ಕಾಗಿ ಹೆಚ್ಚು ಖರ್ಚು ಮಾಡಬಹುದು. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ಮಧುರವಾದ ಮಾತು, ನಡವಳಿಕೆ ಎಲ್ಲರ ಹೃದಯವನ್ನು ಗೆಲ್ಲಲಿದೆ. ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳನ್ನು ಪಡೆಯುವಿರಿ.
ಇದನ್ನೂ ಓದಿ- ಗುರು-ಚಂದ್ರರಿಂದ ಅಪರೂಪದ ಗಜಕೇಸರಿ ಯೋಗ: ಮೇಷದಿಂದ ಮೀನದವರೆಗೆ ನಿಮ್ಮ ರಾಶಿಗೆ ಏನು ಫಲ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ವೃತ್ತಿ ರಂಗದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗಲಿದೆ. ಇದರಿಂದ ಎಂತಹ ಕೆಟ್ಟ ಸನ್ನಿವೇಶವನ್ನೂ ಕೂಡ ನೀವು ನಿಮ್ಮ ಕಡೆಗೆ ತಿರುಗಿಸುವ ಸಾಮರ್ಥ್ಯವನ್ನು ಹೊಂದುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಪ್ರಮುಖ ಕೆಲಸಗಳನ್ನು ಸಮಯಕ್ಕೂ ಮೊದಲೇ ಪೂರ್ಣಗೊಳಿಸಿ. ಇದು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ವೃತ್ತಿ ಬದುಕಿನಲ್ಲಿ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ. ಹೊರಹೋದಾಗ ನಿಮ್ಮ ಬಜೆಟ್ ಗೆ ಅಂಟಿಕೊಳ್ಳಿ. ಇಲ್ಲವೇ, ಭವಿಷ್ಯದಲ್ಲಿ ತೊಂದರೆಗೆ ಹೆಚ್ಚಾಗಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಈ ದಿನ ಅಷ್ಟ ದಿಕ್ಕುಗಳಿಂದಲೂ ಸಂತೋಷ ಸಮೃದ್ಧಿ ನಿಮ್ಮನ್ನು ಹರಸಿ ಬರಲಿದೆ. ಆರ್ಥಿಕ ಬೆಳವಣಿಗೆಯು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಲಿದೆ. ಹೊಸ ವ್ಯವಹಾರ ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಅದೃಷ್ಟದ ಬೆಂಬಲ ಹಾಗೂ ನಿಮ್ಮ ಕಠಿಣ ಪರಿಶ್ರಮದಿಂದ ಬಹುದಿನಗಳ ಕನಸು ನನಸಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಸ್ಥಾನ ಬಲಗೊಳ್ಳಲಿದೆ. ಕೆಲಸದಲ್ಲಿ ಉತ್ತಮ ನಿಯಂತ್ರಣವನ್ನು ಸಾಧಿಸುವಿರಿ. ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿದಂತೆ ಸಹಕಾರಿ ಮನೋಭಾವವನ್ನು ಕಾಪಾಡಿಕೊಳ್ಳಿ.
ಇದನ್ನೂ ಓದಿ- ಅನುರಾಧ ನಕ್ಷತ್ರಕ್ಕೆ ಮಂಗಳನ ಪ್ರವೇಶ: ದೀಪಾವಳಿಯ ನಂತರ ಈ 6 ರಾಶಿಯವರಿಗೆ ಸುವರ್ಣಯುಗ ಶುರುವಾಗಲಿದೆ
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಎಲ್ಲೆಡೆ ಧನಾತ್ಮಕ ಬದಲಾವಣೆಗಳು ನಿಮ್ಮ ಆನಂದವನ್ನು ಹೆಚ್ಚಿಸಲಿದೆ. ಉದ್ಯೋಗದಲ್ಲಿ ಅಪೇಕ್ಷಿತ ಫಲಿತಾಂಶದಿಂದ ಕೆಲಸದಲ್ಲಿ ಉತ್ಸಾಹ ಹೆಚ್ಚಾಗಲಿದೆ. ವ್ಯಾಪಾರ ಸಂಬಂಧಗಳು ಬಲಗೊಳ್ಳುವ ಅವಕಾಶಗಳಿವೆ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಜರುಗುವ ಸಂಭವವಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ದಿನದ ಮೊದಲಾರ್ಧ ವ್ಯಾವಹಾರಿಕವಾಗಿ ನಿಮಗೆ ಅತ್ಯುತ್ತಮ ಫಲಗಳನ್ನು ನೀಡಲಿದೆ. ಜಂಟಿ ವ್ಯವಹಾರಗಳಲ್ಲಿ ಒಪ್ಪಂದವನ್ನು ಅಂತಿಮಗೊಳಿಸಲು ಇದು ಸಕಾಲವಾಗಿದೆ. ಬೇರೆಯವರೊಂದಿಗೆ ಮಾತನಾಡುವಾಗ ಮಾತಿನ ಮೇಲೆ ಕಂಟ್ರೋಲ್ ಇದ್ದರೆ ಒಳಿತು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ವ್ಯಾವಹಾರಿಕ ಚಟುವಟಿಕೆಗಳಲ್ಲಿ ಯಾವುದೇ ರೀತಿಯ ಅಜಾಗರೂಕತೆಯನ್ನು ತಪ್ಪಿಸಿ. ಇಲ್ಲವೇ ಭಾರೀ ನಷ್ಟ ಅನುಭವಿಸಬೇಕಾಗಬಹುದು. ಅಗತ್ಯ ಕೆಲಸಗಳನ್ನು ಮುಗಿಸಲು ಒಟ್ಟು ನೀಡಿ. ಆಸ್ತಿ ಸಂಬಂಧಿತ ವ್ಯಾಜ್ಯಗಳಲ್ಲಿ ಪ್ರಗತಿ ಕಂಡುಬರಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನೀವು ನಿಮ್ಮ ಸ್ನೇಹಿತರೊಂದಿಗೆ ಉತ್ತಮ ಸಮಯ ಕಳೆಯುವಿರಿ. ವೃತ್ತಿ ಬದುಕಿನಲ್ಲಿ ಆವೇಗವನ್ನು ಕಾಯ್ದುಕೊಳ್ಳುವಿರಿ. ಉದ್ಯೋಗದಲ್ಲಿ ಸಹಕಾರ ಮನೋಭಾವ ಹೆಚ್ಚಾಗಲಿದೆ. ಹಣಕಾಸಿನ ವಿಷಯದಲ್ಲಿ ಪ್ರಗತಿ ಸಾಧಿಸುವಿರಿ. ಆದರೂ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









