ದಿನಭವಿಷ್ಯ 20-03-2025: ಗುರುವಾರದಂದು ಅನುರಾಧಾ ನಕ್ಷತ್ರದಲ್ಲಿ ವಜ್ರ ಯೋಗ: ಈ ರಾಶಿಯವರಿಗೆ ಶುಭ ಸುದ್ದಿ

Today Horoscope 20th March 2025: ಗುರುವಾರದಂದು ಅನುರಾಧಾ ನಕ್ಷತ್ರ ವಜ್ರ ಯೋಗ, ಗರಜ ಕರಣ.  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Mar 20, 2025, 08:00 AM IST
  • ಕ್ರೋಧಿ ನಾಮ ಸಂವತ್ಸರ, ಸೌರ ವಸಂತ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ
  • ಈ ದಿನ ಗುರುವಾರ ಅನುರಾಧಾ ನಕ್ಷತ್ರ ವಜ್ರ ಯೋಗ, ಗರಜ ಕರಣ.
  • ಇಂದು ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 20-03-2025: ಗುರುವಾರದಂದು ಅನುರಾಧಾ ನಕ್ಷತ್ರದಲ್ಲಿ ವಜ್ರ ಯೋಗ: ಈ ರಾಶಿಯವರಿಗೆ ಶುಭ ಸುದ್ದಿ

Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಸೌರ ವಸಂತ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಗುರುವಾರ ಅನುರಾಧಾ ನಕ್ಷತ್ರ ವಜ್ರ ಯೋಗ, ಗರಜ ಕರಣ. ಇಂದು ಎಲ್ಲಾ 12 ರಾಶಿಯವರ ಭವಿಷ್ಯ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ವಿಶೇಷವಾದ ದಿನ. ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಹೊಸ ಸಾಧನೆ ಮಾಡುವಿರಿ. ಮನೆಗೆ ಅತಿಥಿಗಳ ಆಗಮನವು ಸಂತೋಷದ ವಾತಾವರಣವನ್ನು ತರಲಿದೆ. ಆದಾಗ್ಯೂ, ಖರ್ಚು ಅಧಿಕವಾಗುವುದರಿಂದ ಬಜೆಟ್ ಹಾಳಾಗಬಹುದು. ಈ ಬಗ್ಗೆ ಜಾಗರೂಕರಾಗಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮಗಿಂದು ಶುಭ ದಿನ. ಬಾಕಿ ಇರುವ ಕೆಲಸಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುತ್ತೀರಿ. ನಿಮ್ಮ ಕೆಲಸದ ಶೈಲಿಯಲ್ಲಿ ಪ್ರಭಾವಿತರಗುವಿರಿ. ಆಸ್ತಿಗೆ ಸಂಬಂಧಿಸಿದ ಕೆಲಸಗಳು ಶೀಘ್ರದಲ್ಲೇ ಪೂರ್ಣಗೊಳ್ಳುವುವು. ಸಮಯದ ಮೌಲ್ಯ ಗುರುತಿಸುವುದು ಅವಶ್ಯಕ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಕುಟುಂಬದೊಂದಿಗೆ ಸಂತೋಷದಾಯಕ ಸಮಯವನ್ನು ಕಳೆಯುವಿರಿ. ದಕ್ಷತೆಯಿಂದ ಹಿಡಿದ ಕೆಲಸಗಳಲ್ಲಿ ಸಾಧನೆ ಮಾಡುವಿರಿ. ಇದು ನಿಮ್ಮ ಕೀರ್ತಿಯನ್ನು ಹೆಚ್ಚಿಸಲಿದೆ. ಕೆಲವು ವಿಚಾರಗಳಲ್ಲಿ ಅನುಭವಿ ವ್ಯಕ್ತಿಗಳ ಮಾರ್ಗದರ್ಶನವು ಸಹಕಾರಿ ಆಗಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ನಿಮಗೆ ಅನುಕೂಲಕರವಾದ ದಿನವಾಗಿದೆ. ಸಾಕಷ್ಟು ಜವಾಬ್ದಾರಿಗಳು ಹೆಗಲೇರುತ್ತವೆ ಎಂದು ನೀವು ಭಾವಿಸಿದರೂ ಎಲ್ಲವನ್ನೂ ಸುಸೂತ್ರವಾಗಿ ಮುಂದುವರೆಸಿಕೊಂಡು ಹೋಗುವ ಸ್ಥೈರ್ಯ ನಿಮ್ಮಲ್ಲಿ ಇರಲಿದೆ. ಕುಟುಂಬದೊಂದಿಗೆ ಪ್ರವಾಸವು ಮೋಜು ಮಸ್ತಿಯಿಂದ ಕೂಡಿರಲಿದೆ. 

ಇದನ್ನೂ ಓದಿ- ಶುಕ್ರನ ನೇರ ನಡೆಯಿಂದ ಈ ರಾಶಿಯವರಿಗೆ ಜಾಕ್‌ಪಾಟ್..! ದುಪ್ಪಟ್ಟು ಲಾಭ, ಸ್ವಂತ ಮನೆ ಖರೀದಿ, ಇನ್ನೆನಿದ್ದರೂ ಸುಖ-ನೆಮ್ಮದಿಯ ಜೀವನ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ದಿನ ನೀವು ಅನೇಕ ರೀತಿಯ ಚಟುವಟಿಕೆಗಳ ಕಡೆಗೆ ಒಲವು ತೋರುತ್ತೀರಿ. ಉದ್ಯೋಗದಲ್ಲಿ ಸಕಾರಾತ್ಮಕತೆಯ ಅಂಶಗಳನ್ನು ಹೆಚ್ಚು ಪರಿಗಣಿಸುವುದು ಒಳ್ಳೆಯದು. ಪರಿಸ್ಥಿತಿ ಹೇಗೇ ಇರಲಿ ತಾಳ್ಮೆಯಿಂದ ಇರುವುದರಿಂದ ಶುಭ ಫಲ ನಿರೀಕ್ಷಿಸಬಹುದು. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವಿವಾಹಿತರು ಇಂದು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಕೆಲಸದಲ್ಲಿ ದೀರ್ಘ ಕಾಲದಿಂದ ಪ್ರಯತ್ನಿಸುತ್ತಿದ್ದ ಪ್ರಮುಖ ಯೋಜನೆಯಲ್ಲಿ ಜಯ ಸಾಧಿಸಲಿದ್ದೀರಿ. ಕೋಪದಿಂದ ಪರಿಸ್ಥಿತಿ ಹದಗೆಡುವ ಸಂಭವವಿದೆ. ಹಾಗಾಗಿ, ಕೋಪದ ಕೈಗೆ ಬುದ್ದಿ ನೀಡುವುದನ್ನು ತಪ್ಪಿಸಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಕೆಲವು ಕೆಲಸಗಳಲ್ಲಿ ಯಶಸ್ಸು ನಿಮ್ಮ ಉತ್ಸಾಹವನ್ನೂ ಹೆಚ್ಚಿಸಲಿದೆ. ವೈಯಕ್ತಿಕ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಪ್ರೀತಿ ಜೀವನವು ಆಹ್ಲಾದಕರವಾಗಿರುತ್ತದೆ. ಸಂಗಾತಿಯಿಂದ ವಿಶೇಷ ಉಡುಗೊರೆ ಸ್ವೀಕರಿಸಬಹುದು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನೀವು ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ಕೇಳುವಿರಿ. ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಬದಲಿಗೆ ಇಂದು ಆತ್ಮಾವಲೋಕನಕ್ಕೆ ಸಮಯ ನೀಡಿ. ವ್ಯವಹಾರದ ವಿಷಯದಲ್ಲಿ ಹೆಚ್ಚು ಗಮನಹರಿಸುವುದು ಅಗತ್ಯವಾಗಿದೆ. ಒಟ್ಟಾರೆಯಾಗಿ ಇದು ನಿಮಗೆ ಶುಭ ದಿನ. 

ಇದನ್ನೂ ಓದಿ- ಇಫ್ತಾರ್ ಮತ್ತು ಶಿವಪೂಜೆ ಒಟ್ಟಿಗೆ ನಡೆಯುವ ಏಕೈಕ ಸ್ಥಳ ಇದುವೇ! ದ್ವೇಷ ಹರಡುವವರ ಮಧ್ಯೆ ಸಾಮರಸ್ಯ...

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಅದೃಷ್ಟ ನಿಮ್ಮ ಪಾಲಿಗಿದ್ದು ಯಶಸ್ಸು ಗಳಿಸುವಿರಿ. ನಿಮ್ಮ ಮನಸ್ಸಿನ ಗೊಂದಲಗಳು ಬಗೆಹರಿಯಲಿವೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ನಿಮ್ಮ ಯೋಜನೆಗಳನ್ನು ಸಾರ್ವಜನಿಕಗೊಳಿಸದೆ ಗುಟ್ಟಾಗಿ ಇರುವುದು ಒಳ್ಳೆಯದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಕೆಲವು ಹೊಸ ಸಾಧನೆಗಳು ನಿಮಗಾಗಿ ಕಾಯುತ್ತಿವೆ. ಈ ಅದ್ಭುತ ಸಮಯದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವುದರಿಂದ ಅಪಾರ ಹಣ ಕೈ ಸೇರಲಿದೆ. ಅಷ್ಟೇ ಅಲ್ಲದೆ, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗಲಿದೆ. ದೈನಂದಿನ ಆದಾಯದಲ್ಲಿ ಭಾರೀ ಏರಿಕೆ ನಿರೀಕ್ಷಿಸಬಹುದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಹಿರಿಯರ ಆಶೀರ್ವಾದ, ಮಾರ್ಗದರ್ಶನದೊಂದಿಗೆ ಹೊಸ ಕೆಲಸ ಆರಂಭಿಸುವುದು ನಿಮಗೆ ಲಾಭದಾಯಕವಾಗಿದೆ. ಕುಟುಂಬ ಸದಸ್ಯರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ಸಮಯ ವ್ಯರ್ಥ ಮಾಡದೆ ನಿಮ್ಮ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸುವುದು ಲಾಭದಾಯಕವಾಗಿದೆ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಹೊಸ ಉತ್ಸಾಹ ತುಂಬಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಪರಿಹಾರವನ್ನು ಪಡೆಯುವಿರಿ. ಅತಿಥಿಗಳ ಆಗಮನದಿಂದ ಮನೆಯಲ್ಲಿ ಹಬ್ಬದ ವಾತಾವರಣ ಇರುತ್ತದೆ. ನಿಮ್ಮ ವೈಯಕ್ತಿಕ ವಿಚಾರಗಳಲ್ಲಿ ಬೇರೆಯವರ ಅಸ್ತಕ್ಷೇಪವನ್ನು ತಪ್ಪಿಸಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News