ದಿನಭವಿಷ್ಯ 19-05-2025: ಸೋಮವಾರದಂದು ಶ್ರವಣ ನಕ್ಷತ್ರದಲ್ಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟ

Today Horoscope 19th May 2025: ಇಂದು ಬ್ರಹ್ಮ ಯೋಗ ಇರಲಿದ್ದು ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : May 19, 2025, 09:00 AM IST
  • ಸೋಮವಾರದ ಈ ದಿನ ಷಷ್ಠಿ ತಿಥಿ
  • ಶ್ರವಣ ನಕ್ಷತ್ರದಲ್ಲಿ ಬ್ರಹ್ಮ ಯೋಗ
  • ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 19-05-2025: ಸೋಮವಾರದಂದು ಶ್ರವಣ ನಕ್ಷತ್ರದಲ್ಲಿ ಬ್ರಹ್ಮ ಯೋಗ, ಈ ರಾಶಿಯವರಿಗೆ ಭಾರೀ ಅದೃಷ್ಟ

Somavara Dina Bhavishya In Kannada: ಶ್ರೀ  ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ವೈಶಾಖ ಮಾಸ, ಕೃಷ್ಣ ಪಕ್ಷ, ಷಷ್ಠಿ ತಿಥಿ, ಸೋಮವಾರದಂದು ಶ್ರವಣ ನಕ್ಷತ್ರ ಬ್ರಹ್ಮ ಯೋಗ, ವಿಷ್ಟಿ ಕರಣ. ಇಂದಿನ ರಾಶಿ ಭವಿಷ್ಯ ಯಾರಿಗೆ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮ್ಮ ನಿರ್ವಹಣಾ ಪ್ರಯತ್ನಗಳು ವೇಗವನ್ನು ಪಡೆಯುತ್ತವೆ. ಮೇಲಾಧಿಕಾರಿಗಳ ಬೆಂಬಲದಿಂದ ಉನ್ನತ ಹುದ್ದೆ ಅಲಂಕರಿಸುವಿರಿ. ಪ್ರಮುಖ ವ್ಯವಹಾರಗಳಲ್ಲಿ ಎಲ್ಲರ ಸಹಕಾರ ದೊರೆಯಲಿದೆ. ನಂಬಿಕೆ ಮತ್ತು ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಕೆಲಸದಲ್ಲಿ ವ್ಯವಸ್ಥೆಯ ಮೇಲೆ ನಂಬಿಕೆ ಕಾಪಾಡಿಕೊಳ್ಳಿ. ನಿಮ್ಮ ಗುರಿಗಳನ್ನು ಕೇಂದ್ರೀಕರಿಸಿ ಸಮರ್ಪಿತರಾಗಿ ಕಾರ್ಯನಿರ್ವಹಿಸಿ. ಯಾವುದೇ ಚರ್ಚೆಗಳ ವಿಚಾರದಲ್ಲಿ ಜಾಗರೂಕರಾಗಿರಿ. ಆಡಳಿತಾತ್ಮಕ ಕಾರ್ಯಗಳನ್ನು ವೇಗಗೊಳಿಸಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಮಿಶ್ರ ಫಲಿತಾಂಶಗಳನ್ನು ಪಡೆಯುವಿರಿ. ನಿರೀಕ್ಷೆಯಂತೆ ವ್ಯಾಪಾ ಮತ್ತು ಉದ್ಯಮದಲ್ಲಿ ಪ್ರಗತಿಯನ್ನು ಕಾಣುವಿರಿ. ಜಂಟಿ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಬಾಕಿ ಇರುವ ಸಮಸ್ಯೆಗಳು ವೇಗವನ್ನು ಪಡೆಯುತ್ತವೆ. ಆರೋಗ್ಯದ ವಿಚಾರದಲ್ಲಿ ಜಾಗರೂಕರಾಗಿರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಸ್ಮಾರ್ಟ್ ತಂತ್ರಗಳೊಂದಿಗೆ ಉದ್ಯಮ ಮತ್ತು ವ್ಯಾಪಾರದಲ್ಲಿ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವಿರಿ. ಕೆಲಸಕ್ಕೆ ಸಂಬಂಧಿಸಿದವರಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ. ಸಕಾರಾತ್ಮಕ ಮನಸ್ಥಿತಿಯು ನಿಮ್ಮ ಕ್ರಿಯೆಗಳಿಗೆ ಮಾರ್ಗದರ್ಶನ ನೀಡುತ್ತದೆ. 

ಇದನ್ನೂ ಓದಿ- Weekly Horoscope: ಕಲಾನಿಧಿ ಯೋಗದಿಂದ ಈ ರಾಶಿಯವರಿಗೆ ಭಾಗ್ಯೋದಯ, ಮುಟ್ಟಿದ್ದೆಲ್ಲಾ ಬಂಗಾರವಾಗುವ ಕಾಲ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ವೃತ್ತಿಪರ ವಿಸಯಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುತ್ತೀರಿ. ಸೇವಾ ಮನೋಭಾವ ಹೊಂದಿರುವವರಿಗೆ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಗೈಯುವಿರಿ. ಪ್ರಮುಖ ಕಾರ್ಯಗಳು ವೇಗವನ್ನು ಪಡೆಯುತ್ತವೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಯೋಜಿಸಬಹುದು. ಮನೆಯಲ್ಲಿ ಪ್ರೀತಿಪಾತ್ರರ ಜೊತೆಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ. ವೈಯಕ್ತಿಕ ವಿಷಯಗಳು ನಿಮ್ಮ ಪರವಾಗಿ ಇರುತ್ತವೆ. ಸಂಬಂಧಗಳಲ್ಲಿ ಧನಾತ್ಮಕ ಫಲಗಳನ್ನು ಕಾಣುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಹಠಮಾರಿತನವನ್ನು ತಪ್ಪಿಸಿ. ಪ್ರೀತಿಪಾತ್ರರ ಜೊತೆ ಚರ್ಚಿಸುವಾಗ ಅಹಂಕಾರವನ್ನು ಬದಿಗಿಡಿ. ವೈಯಕ್ತಿಕ ವಿಚಾರಗಳಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ. ಸಂಬಂಧಿಕರಿಂದ ಬೆಂಬಲ ಹೆಚ್ಚಲಿದೆ. ವಾಣಿಜ್ಯ ವಿಷಯಗಳತ್ತ ಗಮನಹರಿಸಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಸ್ನೇಹಿತರು ಮತ್ತು ಕುಟುಂಬದವರು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಸಾಮಾಜಿಕ ಪ್ರಯತ್ನಗಳಲ್ಲಿ ವೇಗ ಪಡೆಯುವಿರಿ. ವ್ಯವಹಾರ ವಿಷಯಗಳು ಅನುಕೂಲಕರವಾಗಿರುತ್ತವೆ. ಹಣಕಾಸಿನ ವಿಷಯಗಳಲ್ಲಿ ಯಶಸ್ವಿಯಾಗುವಿರಿ. ಶುಭ ಸುದ್ದಿ ಕೇಳುವಿರಿ. 

ಇದನ್ನೂ ಓದಿ- ರೇವತಿ ನಕ್ಷತ್ರಕ್ಕೆ ಶುಕ್ರ: ಈ ರಾಶಿಯವರಿಗೆ ಶುಕ್ರ ದೆಸೆ, ಐಷಾರಾಮಿ ಬದುಕು, ಇಷ್ಟಪಟ್ಟಿದ್ದೆಲ್ಲಾ ಸಿಗುವ ಪರ್ವಕಾಲ 

ಧನು ರಾಶಿಯವರ ಭವಿಷ್ಯ (Sagittarius Horoscope):  
ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ನಿಮ್ಮ ನಡವಳಿಕೆಯಲ್ಲಿ ಸಿಹಿ ಮತ್ತು ಮಾಧುರ್ಯತೆಯನ್ನು ಕಾಪಾಡಿಕೊಳ್ಳಿ. ಆಹಾರ ಶೈಲಿಯಲ್ಲಿ ಸಮತೋಲನವಿರಲಿ. ರಕ್ತಸಂಬಂಧಿಗಳೊಂದಿರೆ ಬಾಂಧವ್ಯ ಬಿಗಿಗೊಳ್ಳಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಸ್ನೇಹಿತರು ಮತ್ತು ಆಪ್ತರೊಂದಿಗೆ ಸಹಕಾರವ ಭಾವನೆ ಬೆಳೆಸಿಕೊಳ್ಳಿ. ನಿಮ್ಮ ಜೀವನಶೈಲಿ ಸುಧಾರಿಸುತ್ತದೆ. ಹಣಕಾಸಿನ ವಿಚಾರದಲ್ಲಿ ವೇಗ ಪಡೆಯುವಿರಿ. ಅತಿಥಿಗಳ ಆಗಮನದಿಂದ ಸಂತಸದ ವಾತಾವರಣ ಇರುತ್ತದೆ. ನಾವೀನ್ಯತೆ ವ್ಯವಹಾರದಲ್ಲಿ ಪ್ರಗತಿಯನ್ನು ತರಲಿದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಯಾರನ್ನೆ ಆದರೂ ಕಣ್ಮುಚ್ಚಿ ನಂಬುವ ನಿಮ್ಮ ಅಭ್ಯಾಸದ ಬಗ್ಗೆ ಜಾಗರೂಕರಾಗಿರಿ. ವಿದೇಶ ವ್ಯವಹಾರಗಳಲ್ಲಿ ವೇಗವನ್ನು ಕಾಯ್ದುಕೊಳ್ಳುವಿರಿ. ಸಂಬಂಧಗಳನ್ನು ಸುಧಾರಿಸಲು ಪ್ರಯತ್ನಿಸಿ. ತ್ಯಾಗ ಮತ್ತು ಸಹಕಾರದ ಮನೋಭಾವವನ್ನು ಕಾಪಾಡಿಕೊಳ್ಳಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಹಣಕಾಸು ಮತ್ತು ವ್ಯಾಣಿಜ್ಯ ವ್ಯವಹಾರಗಳಲ್ಲಿ ಯಶಸ್ಸು ಸಾಧಿಸುವಿರಿ. ಸಂಪತ್ತು ಮತ್ತು ಸಂಪನ್ಮೂಲಗಳು ಹೆಚ್ಚಾಗಳಿವೆ. ಒಳ್ಳೆಯ ಸುದ್ದಿ ಸ್ವೀಕರಿಸುವಿರಿ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಇಂದು ಸಮಯ ಅತ್ಯುತ್ತಮವವಾಗಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

Trending News