Today Horoscope 20th August 2025: ಬುಧವಾರದಂದು ಸಿದ್ಧಿ ಯೋಗವು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ.

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿ, ಬುಧವಾರದ ಈ ದಿನ ಪುನರ್ವಸು ನಕ್ಷತ್ರ ಸಿದ್ಧಿ ಯೋಗ, ಗರಜ ಕರಣ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ದಿನ ಒಡಹುಟ್ಟಿದವರೊಂದಿಗಿನ ಸಂಪರ್ಕಗಳು ಬಲಗೊಳ್ಳುತ್ತವೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಲಾಭ ಸ್ಥಿರವಾಗಿರಲಿದೆ. ಸಂವಹಣವು ಸಕಾರಾತ್ಮಕ ಪರಿಣಾಮ ಬೀರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಶ್ರೇಷ್ಠತೆಯನ್ನು ಕಾಣುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಕುಟುಂಬದಲ್ಲಿ ಇಂದು ಹಬ್ಬದ ವಾತಾವರಣ ಇರಲಿದೆ. ಪ್ರೀತಿಪಾತ್ರರೊಂದಿಗೆ ಪರಿಣಾಮಕಾರಿ ಸಂವಹನವನ್ನು ಕಾಪಾಡಿಕೊಳ್ಳುತ್ತೀರಿ. ಹಣಕಾಸಿನ ವಿಷಯಗಳಲ್ಲಿ ಹೆಚ್ಚಿನ ಕಾರ್ಯಕ್ಷಮತೆ ಇರಲಿದೆ. ವೈಯಕ್ತಿಕ ಸಂಬಂಧಗಳು ಸುಧಾರಿಸುತ್ತವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಹಣಕಾಸಿನ ಅವಕಾಶಗಳನ್ನು ಬಳಸಿಕೊಳ್ಳುವಿರಿ. ವಿವಿಧ ಕಾರ್ಯಗಳಲ್ಲಿ ಆವೇಗ ಇರಲಿದೆ. ಆಹ್ಲಾದಕರ ಸಮಯವನ್ನು ಕಳೆಯುವಿರಿ. ಹೊಸ ವಿಷಯಗಳಿಗೆ ಉತ್ಸಾಹ ಹೆಚ್ಚಾಗಲಿದೆ. ಕಲಾತ್ಮಕ ಕೌಶಲ್ಯಗಳನ್ನು ಹೆಚ್ಚಿಸುವ ಪ್ರಯತ್ನ ಲಾಭದಾಯಕವಾಗಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ದಿನ ಹೂಡಿಕೆಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಆತುರವನ್ನು ತಪ್ಪಿಸದಿದ್ದರೆ ಭಾರೀ ನಷ್ಟ ಅನುಭವಿಸಬೇಕಾಗಬಹುದು. ವಿದೇಶಿ ವ್ಯವಹಾರಗಳಲ್ಲಿ ಸಕಾರಾತ್ಮಕ ಫಲಗಳನ್ನು ಪಡೆಯುವಿರಿ. ಕೆಲಸ ಕಾರ್ಯಗಳು ಎಂದಿನಂತೆ ಮುಂದುವರೆಯಲಿದೆ.
ಇದನ್ನೂ ಓದಿ-
ಸಿಂಹ ರಾಶಿಯವರ ಭವಿಷ್ಯ (Leo Horoscope):
ವೃತ್ತಿ ಬದುಕಿನಲ್ಲಿ ಇಂದು ನೀವು ಹೊಸ ಎತ್ತರಕ್ಕೆ ಏರುವಿರಿ. ಹೊಸ ವಿಷಯಗಳನ್ನು ಸುಲಭವಾಗಿ ನಿಭಾಯಿಸುವಿರಿ. ವಿವಿಧ ಕಾರ್ಯಗಳಲ್ಲಿ ಪ್ರಗತಿ ಕಂಡು ಬರಲಿದೆ. ಉತ್ತಮ ಆರ್ಥಿಕ ಲಾಭಗಳನ್ನು ನಿರೀಕ್ಷಿಸಬಹುದು. ದೊಡ್ಡ ಗುರಿಗಳನ್ನು ಸಾಧಿಸುವ ನಿಮ್ಮ ಕನಸು ನನಸಾಗುವ ಸಮಯ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಈ ದಿನ ನಿಮ್ಮ ನಿರ್ವಹಣಾ ಕೌಶಲ್ಯಗಳು ಬಲವಾಗಿ ಉಳಿಯಲಿವೆ. ವಿವಿಧ ವಿಷಯಗಳು ಅನುಕೂಲಕರವಾಗಿರುತ್ತವೆ. ಇಂದು ನಿಮ್ಮ ಪ್ರಮುಖ ಪ್ರಯತ್ನಗಳಿಗೆ ಬಶ್ಲ ದೊರೆಯಲಿದೆ. ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳು ಮನ್ನಣೆ ನೀಡುವರು.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಅದೃಷ್ಟದ ದಿನ. ನಿಮ್ಮ ಗುರಿಗಳನ್ನು ಸಾಧಿಸುವಿರಿ. ನಿಮ್ಮ ಪ್ರೀತಿಪಾತ್ರರೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಶುಭ ದಿನ. ನಿಮ್ಮ ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸುವಿರಿ. ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳು ನಿಮ್ಮ ದಾರಿಗೆ ಬರುತ್ತವೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಪ್ರಮುಖ ವಿಷಯಗಳಲ್ಲಿ ಅದರಲ್ಲೂ ಹಣಕಾಸು ವಹಿವಾಟಿನ ವಿಷಯಗಳಲ್ಲಿ ತಾಳ್ಮೆ ಕಾಪಾಡಿಕೊಳ್ಳಿ. ವಿವೇಕಯುತವಾಗಿ ಪ್ರಯತ್ನ ಮುಂದುವರೆಸಿದರೆ ಒಳ್ಳೆಯದು. ಸಭೆಗಳು ಮತ್ತು ಸಾಮಾಜಿಕ ಸಂವಹನಗಳಿಗೆ ಸಮಯ ತೆಗೆದುಕೊಳ್ಳಿ. ಕುಟುಂಬವು ಸಾಮರಸ್ಯದಿಂದ ಕೂಡಿರುತ್ತದೆ.
ಇದನ್ನೂ ಓದಿ-
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಸ್ನೇಹಿತರೊಂದಿಗೆ ಆಹ್ಲಾದಕರ ಸಮಯ ಕಳೆಯುತ್ತೀರಿ. ನಿಮ್ಮ ಆಪ್ತರೊಂದಿಗೆ ಬಾಂಧವ್ಯ ಹೆಚ್ಚಾಗಲಿದೆ. ಕುಟುಂಬದ ಬೆಂಬಲ ನಿಮ್ಮ ನಿಮ್ಮ ಮನೋಸ್ಥೈರ್ಯವನ್ನು ಹೆಚ್ಚಿಸಲಿದೆ. ವೃತ್ತಿ-ವ್ಯವಹಾರದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಈ ದಿನ ವೃತ್ತಿ ಮತ್ತು ವ್ಯವಹಾರಗಳು ನಿಮ್ಮ ನಿರೀಕ್ಷೆಗಳಿಗೆ ಹೊಂದಿಕೆಯಾಗುತ್ತವೆ. ಕೆಲಸದಲ್ಲಿ ವೃತ್ತಿಪರತೆಯನ್ನು ಹೆಚ್ಚಿಸುವಿರಿ. ವಿವೇಕಯುತವಾಗಿ, ತಾಳ್ಮೆಯಿಂದ ಇರುವುದು ನಿಮ್ಮ ಪ್ರಗತಿಯ ಹಾದಿಯನ್ನು ಸುಗಮಗೊಳಿಸುತ್ತದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಪ್ರೀತಿಪಾತ್ರರೊಂದಿಗೆ ಸ್ಮರಣೀಯ ಕ್ಷಣಗಳನ್ನು ಸೃಷ್ಟಿಸುವಿರಿ. ಪ್ರಭಾವಿ ಜನರೊಂದಿಗೆ ಸಭೆ ನಡೆಯುವ ಸಂಭವವಿದೆ. ಸೃಜನಶೀಲತೆ ಬಲಗೊಳ್ಳುತ್ತದೆ. ವ್ಯವಹಾರ ಮತ್ತು ಉದ್ಯಮದಲ್ಲಿ ವಿಶ್ವಾಸ ಹೆಚ್ಚಾಗಲಿದ್ದು ಅನುಕೂಲಕರ ಪರಿಸ್ಥಿತಿಯಲ್ಲಿ ಲಾಭ ಹೆಚ್ಚಾಗಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕೌಟುಂಬಿಕ ವಿಷಯಗಳಲ್ಲಿ ನಿಮ್ಮ ಗಮನ ಹೆಚ್ಚಾಗಲಿದೆ. ನಿಮ್ಮ ಮಾತು, ನಡವಳಿಕೆಗಳು ಪ್ರಭಾವಶಾಲಿಯಾಗಿ ಉಳಿಯಲಿದೆ. ಭೌತಿಕ ಸಂಪತ್ತು ಮತ್ತು ಸೌಕರ್ಯಗಳು ಹೆಚ್ಚಾಗಲಿವೆ. ವೈಯಕ್ತಿಕ ವಿಷಯಗಳಲ್ಲಿ ಆಸಕ್ತಿ ಬೆಳೆಯಲಿದೆ. ಪ್ರೀತಿಪಾತ್ರರೊಂದಿಗಿನ ಬಾಂಧವ್ಯ ಬಲಗೊಳ್ಳುವ ದಿನ ಇದಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.