ದಿನಭವಿಷ್ಯ 21-04-2025: ಸೋಮವಾರ ಸಾಧ್ಯ ಯೋಗ, ಈ ರಾಶಿಯವರಿಗೆ ಕೈಗೂಡುವುದು ಕೆಲಸ

Today Horoscope 21st April 2025: ಸೋಮವಾರದ ದಿನ ಸಾಧ್ಯ ಯೋಗ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 21, 2025, 09:01 AM IST
  • ಸೋಮವಾರದ ಈ ದಿನ ಸಾಧ್ಯ ಯೋಗ
  • ಸಾಧ್ಯ ಯೋಗದಿಂದ ಕೆಲವರಿಗೆ ಭಾರೀ ಅದೃಷ್ಟ
  • ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 21-04-2025: ಸೋಮವಾರ ಸಾಧ್ಯ ಯೋಗ, ಈ ರಾಶಿಯವರಿಗೆ ಕೈಗೂಡುವುದು ಕೆಲಸ

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಷ್ಟಮಿ ತಿಥಿಯ ಈ ದಿನ ಸೋಮವಾರ, ಉ.ಷಾ. ನಕ್ಷತ್ರ, ಸಾಧ್ಯ ಯೋಗ, ಬಾಲವ ಕರಣ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ನೀವಿಂದು ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತೀರಿ. ಪ್ರಮುಖ ಒಪ್ಪಂದಗಳು ಕೈಗೂಡಲಿದ್ದು ಹಣದ ಹರಿವು ಹೆಚ್ಚಾಗಲಿದೆ. ಜೀವನದಲ್ಲಿ ಪ್ರಣಯವನ್ನು ಅನುಭವಿಸುವಿರಿ. ನಿಮ್ಮ ಕೆಲಸಕ್ಕಾಗಿ ಮೆಚ್ಚುಗೆಗೆ ಪಾತ್ರರಾಗುವಿರಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಬಾಧಿಸಬಹುದು. ಇದು ನಿಮ್ಮ ಜೀವನದಲ್ಲಿ ಕೆಲವು ಪ್ರಮುಖ ಕೆಲಸಗಳು ಕೈಗೂಡುವುದನ್ನು ತಪ್ಪಿಸಬಹುದು. ವ್ಯವಹಾರದಲ್ಲಿ ಕಾಗದ ಪತ್ರಗಳಿಗೆ ಸಹಿ ಹಾಕುವಾಗ ಜಾಗರೂಕರಾಗಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಹಣಕಾಸಿನ ಮೂಲಗಳು ಹೆಚ್ಚಾಗಲಿವೆ. ಆದಾಗ್ಯೂ, ಈ ವಿಚಾರದಲ್ಲಿ ನಿಮ್ಮ ಸ್ವಭಾವವು ಕುಟುಂಬಸ್ಥರು ಮತ್ತು ಸಹಚರರ ನಡುವೆ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ನಿಮ್ಮ ಇಷ್ಟು ದಿನಗಳ ಕಠಿಣ ಪರಿಶ್ರಮಕ್ಕೆ ಇಂದು ಫಲ ದೊರೆಯಲಿದೆ. ಗ್ರಹಗಳ ಸ್ಥಾನಮಾನವು ನಿಮಗೆ ಅನುಕೂಲಕರವಾಗಿದ್ದು ವ್ಯವಹಾರವನ್ನು ಕುದುರಿಸಲಿದೆ. ಜನರೊಂದಿಗೆ ಸಂವಹನ ನಡೆಸುವಾಗ ಮಾತಿನ ಬಗ್ಗೆ ನಿಗಾ ಇರಲಿ. 

ಇದನ್ನೂ ಓದಿ- Weekly Horoscope: ಏಪ್ರಿಲ್ ಕೊನೆ ವಾರ ವಸುಮತಿ ಯೋಗದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಸಂಪತ್ತಿನ ಸುರಿಮಳೆ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ಸಂಗಾತಿಯಿಂದ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ಸಾಮಾಜಿಕವಾಗಿ ಹೆಚ್ಚು ಸಮಯ ಕಳೆಯುವಿರಿ. ಬಹಳ ದಿನಗಳ ಬಳಿಕ ಪ್ರೇಯಸಿಯನ್ನು ಭೇಟಿಯಾಗುವುದು ಮನಸ್ಸಿಗೆ ಮುದ ನೀಡಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ವೃತ್ತಿಪರರಿಗೆ ಶುಭ ದಿನ. ಶ್ರು ಮಾರುಕಟ್ಟೆಯಲ್ಲಿ ಯಾವುದೇ ರೀತಿಯ ಹೂಡಿಕೆಯು ನಷ್ಟ ಉಂಟುಮಾಡಬಹೂಡು. ಪ್ರೇಮ ಜೀವನವು ನೀವು ನಿರೀಕ್ಷಿಸಿದಕ್ಕಿಂತಲೂ ರೊಮ್ಯಾಂಟಿಕ್ ಆಗಿರುತ್ತದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ನಿಮ್ಮ ಭಾವನೆಗಳಿಗೆ ಹೆಚ್ಚು ಘಾಸಿಯಾಗಬಹುದು. ಆದರೆ, ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ. ಇಂದಲ್ಲಾ ನಾಳೆ ಉತ್ತಮ ಸಮಯ ನಿಮಗಾಗಿ ಕಾದಿದೆ. ಆರೋಗ್ಯ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ಉದ್ಯೋಗಿಗಳಿಗೆ ಸಹೋದ್ಯೋಗಿಗಳೊಂದಿಗೆ ಸಂಬಂಧಗಳು ಸುಧಾರಿಸಬಹುದು. ಅನಿರೀಕ್ಷಿತ ಮೂಲಗಳಿಂದ ಆದಾಯ ಹೆಚ್ಚಾಗಲಿದೆ. ಮನೆ ಖರೀದಿ ಯೋಗವಿದೆ. ಸಂಗಾತಿಗೆ ಹೆಚ್ಚಿನ ಸಮಯ ನೀಡಿ. 

ಇದನ್ನೂ ಓದಿ- Guru Gochar:ಈ ರಾಶಿಯವರಿಗೆ ಗುರು ಬಲ, ಭೂಮಿ ಖರೀದಿ, ವಿವಾಹ ಯೋಗ ಸಕಲವೂ ಕೈಗೂಡುವ ಪರ್ವಕಾಲ

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ಆಲೋಚನೆಗಳು ನಿಮ್ಮನ್ನು ಸಂಪೂರ್ಣವಾಗಿ ಬೇರೆ ಹಾದಿಗೆ ಕೊಂಡೊಯ್ಯಬಹುದು. ಅದೃಷ್ಟ ನಿಮ್ಮ ಪರವಾಗಿದೆ. ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣುವ ಸಮಯ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಗ್ರಹಗಳ ಸ್ಥಾನಮಾನವು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಶುಭ ಸಮಾಚಾರಗಳನ್ನು ತರಬಹುದು. ಪ್ರೇಮ ಜೀವನದಲ್ಲಿ ಸಮಸ್ಯೆಗಳು ಬಗೆಹರಿಯಲಿವೆ. ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಧೈರ್ಯಂ ಸರ್ವರ್ತ ಸಾಧನಂ ಎಂಬುದನ್ನು ನೆನಪಿನಲ್ಲಿಡಿ. ಭಯಬಿಟ್ಟು ಮುಂದುವರೆದರೆ ಮಾತ್ರ ಯತ್ನ ಕಾರ್ಯಗಳಲ್ಲಿ ಯಶಸ್ಸು. ಕೆಲವು ಆರೋಗ್ಯ ಸಮಸ್ಯೆಗಳು ಇಂದು ನಿಮ್ಮನ್ನು ಬಾಧಿಸಬಹುದು ಎಚ್ಚರ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ನಿಮಗೆ ಕಾರ್ಯನಿರತವಾದ ದಿನ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಸಂಬಂಧಿಕರಿಂದ ಅಶುಭ ವಾರ್ತೆ ಕೇಳಬಹುದು. ಕೆಲಸದಲ್ಲಿ ಹಿರಿಯರ ಮಾರ್ಗದರ್ಶನದಂತೆ ಮುಂದುವರೆದರೆ ಮುಂದಾಗುವ ಅನಾಹುತವನ್ನು ತಪ್ಪಿಸಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News