ದಿನಭವಿಷ್ಯ 21-06-2025: ಮಂಗಳವಾರದಂದು ಶೂಲ ಯೋಗ, ಈ ರಾಶಿಯವರಿಗೆ ಲಕ್ಷ್ಮಿ ಕೃಪಾಕಟಾಕ್ಷ

Today Horoscope 21st June 2025: ಮಂಗಳವಾರ ರೋಹಿಣಿ ನಕ್ಷತ್ರದಲ್ಲಿ ಶೂಲ ಯೋಗ ಇರಲಿದ್ದು ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Jun 24, 2025, 08:25 AM IST
  • ಕೃಷ್ಣ ಪಕ್ಷದ ಮಂಗಳವಾರದ ಈ ದಿನ ಚತುರ್ದಶಿ ತಿಥಿ
  • ಈ ದಿನ ರೋಹಿಣಿ ನಕ್ಷತ್ರದಲ್ಲಿ ಶೂಲ ಯೋಗ
  • ಮೇಷದಿಂದ ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ ಹೇಗಿದೆ ತಿಳಿಯಿರಿ
ದಿನಭವಿಷ್ಯ 21-06-2025:  ಮಂಗಳವಾರದಂದು ಶೂಲ ಯೋಗ, ಈ ರಾಶಿಯವರಿಗೆ ಲಕ್ಷ್ಮಿ ಕೃಪಾಕಟಾಕ್ಷ

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಸೌರ ವರ್ಷಾ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಮಂಗಳವಾರ, ರೋಹಿಣಿ ನಕ್ಷತ್ರ ಶೂಲ ಯೋಗ, ವಿಷ್ಟಿ ಕರಣ. ಇಂದು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ಮನೆಯಲ್ಲಿ ಉತ್ಸಾಹಭರಿತ ಹಬ್ಬದ ವಾತಾವರಣ ಇರುತ್ತದೆ. ಅತಿಥಿಗಳ ಆಗಮನದಿಂದ ಸಂತಸ ತುಂಬಲಿದೆ. ಭಾವನಾತ್ಮಕವಾಗಿ ಹೆಚ್ಚು ಬಲಗೊಳ್ಳುವಿರಿ. ಸಂಬಂಧ, ನಡವಳಿಕೆಗಳಲ್ಲಿ ಮಾಧುರ್ಯತೆ ಹೆಚ್ಚಾಗಲಿದೆ.  ನಿಮ್ಮ ಸಂವಹನ ಕೌಶಲ್ಯ ಸುಧಾರಿಸಲಿದೆ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಹೊಸ ಆಲೋಚನೆಗಳು ನಿಮ್ಮ ಭವಿಷ್ಯವನ್ನು ಬದಲಾಯಿಸಲಿವೆ. ವಿಶೇಷವಾಗಿ ಸೃಜನಶೀಲ, ಭೌದ್ಧಿಕ ವಿಷಯಗಳಲ್ಲಿ ಪ್ರಬುದ್ಧತೆಯನ್ನು ಕಾಣುವಿರಿ. ಭಾವನಾತ್ಮಕವಾಗಿ ಸಮತೋಲಿತರಾಗಿರುವಿರಿ. ವೃತ್ತಿಯಲ್ಲಿ ಬೆಳವಣಿಗೆ ಕಂಡು ಬರಲಿದೆ. ದೀರ್ಘಕಾಲಿನ ಗುರಿಗಳತ್ತ ಗಮನ ಹರಿಸಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ತಾಳ್ಮೆ ಮತ್ತು ಭಾವನಾತ್ಮಕ ನಿಯಂತ್ರನಾದ ಅಗತ್ಯವಿದೆ. ವೈಯಕ್ತಿಕ ಮತ್ತು ವೃತ್ತಿಪರ ಸನ್ನಿವೇಶಗಳು ನಿರೀಕ್ಷೆಗಿಂತ ನಿಧಾನವಾಗಲಿದೆ. ನಿಮ್ಮ ಬುದ್ದಿವಂತಿಕೆಯಿಂದ ಸರಿಯಾದ ನಿರ್ಧಾರಗಳನ್ನು ತೆಗೆದುಕೊಲ್ಲ್ವಿರಿ. ಭಾವನಾತ್ಮಕ ವಿನಿಮಯಗಳಲ್ಲಿ ಸಂಯಮವನ್ನು ಕಾಯ್ದುಕೊಳ್ಳಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಪ್ರಗತಿಯ ದಿನ. ವೃತ್ತಿಪರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಿರಿ. ಹೊಸ ಯೋಜನೆಗಳನ್ನು ಕಾರ್ಯಗತಗೊಳಿಸಲು ಸರಿಯಾದ ಸಮಯ ವ್ಯವಹಾರ ವಿಸ್ತರಣೆಗೆ ಸದಾವಕಾಶ ದೊರೆಯಬಹುದು. 

ಇದನ್ನೂ ಓದಿ- ಪ್ರಬಲ ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಭಾರೀ ಅದೃಷ್ಟ, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ನಾಯಕತ್ವದ ಗುಣಗಳು ಇಂದು ಪೂರ್ಣ ಪರಿಣಾಮಕಾರಿಯಾಗುತ್ತವೆ. ಕೆಲಸದ ಸ್ಥಳದಲ್ಲಿ ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಸಮಾಜದಲ್ಲಿ ಗೌರವ, ಮನ್ನಣೆಗಳು ಹೆಚ್ಚಾಗಲಿವೆ. ಹೊಸ ಜನರೊಂದಿಗೆ ಬೆರೆಯುವಿರಿ. ಆಡಳಿತಾತ್ಮಕ ವಿಚಾರಗಳಲ್ಲಿ ಫಲಪ್ರದವಾದ ದಿನ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ನಿಮ್ಮ ಕೆಲಸ ಕಾರ್ಯಗಳಲ್ಲಿ ವಿಧಿಯ ಬೆಂಬಲ ದೊರೆಯಲಿದೆ. ಕೌಶಲ್ಯ, ಪ್ರತಿಭೆಗಳು ಪ್ರಕಾಶಿಸುತ್ತವೆ. ಕಲಾತ್ಮಕ ಅಥವಾ ಬೌದ್ಧಿಕ ಅನ್ವೇಷಣೆಗಳು ಪ್ರವರ್ಧಮಾನಕ್ಕೆ ಬರುತ್ತವೆ. ಹೊಸ ವಿಚಾರಗಳನ್ನು ಅನ್ವೇಷಿಸಲು ಪ್ರೇರಿತರಾಗುವಿರಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾದ ದಿನ. ಆರೋಗ್ಯ ಮತ್ತು ಭಾವನಾತ್ಮಕ ಸೂಕ್ಷ್ಮತೆಗೆ ಹೆಚ್ಚಿನ ಗಮನ ಬೇಕಾಗಬಹುದು. ಸಂಬಂಧಗಳ ವಿಚಾರದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ವೃತ್ತಿಪರ ಮತ್ತು ವೈಯಕ್ತಿಕ ಸನ್ನಿವೇಶಗಳಲ್ಲಿ ಸಂಯಮವನ್ನು ಕಾಪಾಡಿಕೊಳ್ಳಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ನಿಮ್ಮ ಕಾರ್ಯಕ್ಷಮತೆಯನ್ನು ಮೇಲಾಧಿಕಾರಿಗಳು ಗುರುತಿಸಲಿದ್ದಾರೆ. ದೀರ್ಘಾವಧಿಯ ಯೋಜನೆಗಳು ರೂಪುಗೊಳ್ಳಲು ಪ್ರಾರಂಭಿಸಬಹುದು. ವೃತ್ತಿಪರವಾಗಿ ಬಲಗೊಳ್ಳುತ್ತೀರಿ. ನಿಮ್ಮ ನಾಯಕತ್ವದ ಗುಣಗಳಿಗೆ ಬೇರೆಯವರು ತಲೆಬಾಗುತ್ತಾರೆ. 

ಇದನ್ನೂ ಓದಿ- ಮುಟ್ಟಾದ ಎಷ್ಟು ದಿನಗಳ ನಂತರ ದೇವಸ್ಥಾನಕ್ಕೆ ಹೋಗಬಹುದು? ಶಾಸ್ತ್ರದಲ್ಲಿ ನಿಜವಾಗಿಯೂ ಹೇಳಿರೋದೇನು?

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ನೀವು ಕಾರ್ಯಗಳನ್ನು ನಿರ್ವಹಿಸಲು ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಪ್ರಚೋದನೆಯನ್ನು ಪಡೆಯುವಿರಿ. ಚಿಂತನಶೀಲವಾಗಿ ಕಾರ್ಯನಿರ್ವಹಿಸಿ ಆತುರದ ಹೆಜ್ಜೆಗಳು ಇಂದು ನಿಮಗೆ ಉತ್ತಮ ಫಲಿತಾಂಶವನ್ನು ತರಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಉತ್ಸಾಹ ಮತ್ತು ಬೆಂಬಲದಿಂದ ಕೂಡಿದ ದಿನ. ಸಂವಹನವು  ಕ್ರಿಯಾತ್ಮಕವಾಗಿರುತ್ತದೆ. ಬೌದ್ಧಿಕ ಕಾರ್ಯಗಳು ಯಶಸ್ವಿಯಾಗುತ್ತವೆ. ವೈಯಕ್ತಿಕ  ಮತ್ತು ವೃತ್ತಿಪರ ಕ್ಷೇತ್ರಗಳಲ್ಲಿ ನಿಮ್ಮ ಆಲೋಚನೆಗಳು ಸಕರಾತ್ಮಕವಾಗಿರುತ್ತವೆ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಭಾವನಾತ್ಮಕ ಸಮತೋಲನ ಮತ್ತು ಕೌಟುಂಬಿಕ ಸೂಕ್ಷ್ಮತೆಯ ಬಗ್ಗೆ ಹೆಚ್ಚಿನ ಗಮನಹರಿಸುವಿರಿ. ಮುಕ್ತ ಹೃದಯದ ಸಂವಹನವು ವಿಶ್ವಾಸವನ್ನು ಬೆಳೆಸಲು ಸಹಾಯ ಮಾಡುತ್ತದೆ. ಪ್ರೀತಿಪಾತ್ರರ ಮಾತುಗಳನ್ನು ನಿರ್ಲಕ್ಷಿಸಬೇಡಿ. ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಪ್ರಗತಿಯನ್ನು ಕಾಣುವಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಭಾವನಾತ್ಮಕವಾಗಿ ಇಂದು ತೃಪ್ತಿಕರವಾದ ದಿನ. ಪ್ರೀತಿಪಾತ್ರರೊಂದಿಗಿನ ಸಂವಹನವು ಅರ್ಥಪೂರ್ಣವಾಗಿರುತ್ತದೆ. ವೃತ್ತಿಪರವಾಗಿ ಧನಾತ್ಮಕ ಫಲಗಳು ನಿಮ್ಮ ಪಾಲಿಗಿದೆ. ಸಹಕಾರಿ ಪ್ರಯತ್ನಗಳ ಮೂಲಕ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಸ್ಥಿರವಾದ ಪ್ರಗತಿಯನ್ನು ಕಾಣುವಿರಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ. 

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News