)
Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆಯ ಈ ದಿನ ಮಂಗಳವಾರ ಚಿತ್ರಾ ನಕ್ಷತ್ರ, ವಿಷ್ಕಂಭ ಯೋಗ, ಕಿಂಸ್ತುಘ್ನ ಕರಣ ಇರಲಿದೆ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಮನೆಯ ಅಲಂಕಾರದಲ್ಲಿ ನೀವು ನಿಮ್ಮನ್ನು ತೊಡಗಿಸಿಕೊಳ್ಳುವಿರಿ. ಜೀಇವನದಲ್ಲಿ ಸಂತೋಷದ ಅಲೆ ಹೆಚ್ಚಾಗಲಿದೆ. ವ್ಯಾಪಾರದಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ವ್ಯವಹಾರ ವಿಸ್ತರಣೆಗೆ ಯೋಚಿಸಲು ಇದು ಅತ್ಯುತ್ತಮವಾದ ದಿನ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ನಿಮ್ಮ ಪ್ರಮುಖ ಕೆಲಸಗಳಲ್ಲಿ ಸಹೋದ್ಯೋಗಿಗಳು ನಿಮಗೆ ಸಹಾಯ ಮಾಡಲಿದ್ದಾರೆ. ವೃತ್ತಿ ಬದುಕಿನಲ್ಲಿ ನಿರೀಕ್ಷಿತ ಫಲ ದೊರ್ಯೇಅಲಿದೆ. ಹಣಕಾಸು ವಿಚಾರದಲ್ಲಿ ಸಕಾರಾತ್ಮಕ ಫಲ ದೊರೆಯಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ವ್ಯವಹಾರದಲ್ಲಿ ನಿಮ್ಮ ದಕ್ಷತೆ ಹೆಚ್ಚಾಗಲಿದೆ. ವೃತ್ತಿಪರ ಬದುಕಿನಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಸಂಬಂಧಗಳಲ್ಲಿ ಗೌರವ ಪ್ರೀತಿ ಹೆಚ್ಚಾಗಲಿದೆ. ಕೆಲಸದಲ್ಲಿ ನಿರೀಕ್ಷಿತ ಫಲ ದೊರೆಯಲಿದೆ. ವೈಯಕ್ತಿಕ ಸಂಬಂಧಗಳು ಸುಧಾರಿಸುತ್ತವೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಹಿರಿಯರ ಆಶೀರ್ವಾದದಿಂದ ಮಾಡುವ ಯಾವುದೇ ಕೆಲಸದಲ್ಲಿ ನಿಮಗಿಂದು ಜಯ ಪ್ರಾಪ್ತಿಯಾಗಲಿದೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳ ಬೆಂಬಲ ದೊರೆಯಲಿದೆ. ಆಡಳಿತಾತ್ಮಕ ವಿಚಾರದಲ್ಲಿ ಸ್ವಲ್ಪ ಜಾಗರೂಕರಾಗಿರಿ. ಮಧುರ ಮಾತಿನಿಂದ ಸಂಬಂಧಗಳು ಸುಧಾರಿಸಲಿವೆ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಸಾಮಾಜಿಕ ಜೀವನದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವಿರಿ. ದೀರ್ಘಾವಧಿ ಯೋಜನೆಗಳಲ್ಲಿ ಯಶಸ್ವಿಯಾಗುವಿರಿ. ಪ್ರೀತಿಪಾತ್ರರೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ. ಸಹೋದರರ ನಡುವೆ ಬಾಂಧವ್ಯ ಹೆಚ್ಚಾಗಲಿದೆ. ಉನ್ನತ ಶಿಕ್ಷಣಕ್ಕೆ ವಿದೇಶ ಪ್ರವಾಸ ಕೈಗೊಳ್ಳಲು ಯೋಚಿಸುವವರಿಗೆ ಶುಭ ದಿನ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ಆಕರ್ಷಕ ಕೊಡುಗೆಗಳು ನಿಮ್ಮ ಪಾಲಿಗಿವೆ. ಕೆಲಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದರಿಂದ ಶುಭ ಫಲಗಳನ್ನು ನಿರೀಕ್ಷಿಸಬಹುದು. ಆಡಳಿತಾತ್ಮಕ ವಿಚಾರಗಳು ಸುಧಾರಿಸಲಿವೆ. ಕುಟುಂಬದಲ್ಲಿ ಸಂತೋಷ ದುಪ್ಪಟ್ಟಾಗಳಿದೆ. ಮನೆಯಲ್ಲಿ ಮಂಗಳ ಕಾರ್ಯಗಳ ಮಾತುಕತೆ ನಡೆಯಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಸೃಜನಶೀಲ ಚಟುವಟಿಕೆಯಿಂದ ಇರುವವರಿಗೆ ಇಂದು ಉತ್ತಮ ದಿನ. ವ್ಯವಹಾರದಲ್ಲಿ ವೇಗ ಪಡೆಯುವಿರಿ. ಕಲಾತ್ಮಕ ಕೌಶಲ್ಯ ಬಲಗೊಳ್ಳಲಿದ್ದು ಇದರಿಂದ ಭಾರೀ ಆದಾಯವನ್ನು ನಿರೀಕ್ಷಿಸಬಹುದು. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ.ಭೂಮಿ ವ್ಯವಹಾರದಿಂದ ಲಾಭ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮ್ಮ ವಹಿವಾಟುಗಳ ಮೇಲೆ ನಿಗಾ ಇರಿಸಿ. ಇಲ್ಲವೇ, ವೆಚ್ಚಗಳು ನಿಮ್ಮ ಬಜೆಟ್ ಮೀರಿ ಹೋಗಬಹುದು. ಯೋಜಿತ ಹೂಡಿಕೆಗಳಿಂದ ಲಾಭವಾಗಲಿದೆ. ಯಾವುದೇ ವಿಚಾರಗಳಲ್ಲಿ ನೀತಿ ನಿಯಮಗಳನ್ನು ಮೀರಬೇಡಿ. ಕುಟುಂಬದಲ್ಲಿ ಸಾಮರಸ್ಯ ಇರಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಆರ್ಥಿಕ ಸಮೃದ್ಧಿಯ ಅವಕಾಶಗಳು ಹೆಚ್ಚಾಗುತ್ತವೆ. ಪ್ರಗತಿಯ ಹಾದಿ ತೆರೆಯಲಿದೆ. ವ್ಯವಹಾರದಲ್ಲಿ ಹಿಂಜರಿಕೆಯಿಲ್ಲದೆ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಬಹುದು. ಭವಿಷ್ಯದಲ್ಲಿ ಇದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ವೃತ್ತಿ ಬದುಕಿನಲ್ಲಿ ಉತ್ಸಾಹ ಇಮ್ಮಡಿಗೊಳ್ಳಲಿದೆ. ನಿಮ್ಮ ಧೈರ್ಯ, ಸಾಹಸಕ್ಕೆ ಪ್ರತಿಫಲ ದೊರೆಯುವ ಸಮಯ. ಕೆಲಸದ ಸ್ಥಳದಲ್ಲಿ ಲಕ್ ಚೇಂಜ್ ಆಗಲಿದ್ದು ಉತ್ತಮ ಫಲಗಳನ್ನು ಪಡೆಯುವಿರಿ. ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಗುಡ್ ನ್ಯೂಸ್ ಕೇಳುವಿರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಅದೃಷ್ಟದ ಬೆಂಬಲದಿಂದ ಇಂದು ನಿಮ್ಮ ಬಾಳೇ ಬೆಳಗಲಿದೆ. ನಿರ್ದಿಷ್ಟ ಗುರಿಗಳನ್ನು ಪೂರ್ಣಗೊಳಿಸುವುದು ನಿಮ್ಮ ಮನಸ್ಸಿನ ಸಂತೋಷವನ್ನು ಹೆಚ್ಚಿಸಲಿದೆ. ವ್ಯಾವಹಾರಿಕವಾಗಿ ಆತಂಕಗಳಿಂದ ಮುಕ್ತರಾಗುವಿರಿ. ಎಲ್ಲರೊಂದಿಗೆ ಸೌಹಾರ್ದಯುತ ಸಂಬಂಧವನ್ನು ಕಾಪಾಡಿಕೊಳ್ಳಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಭಾವನಾತ್ಮಕವಾಗಿ ಇಂದು ನಿಮ್ಮನ್ನು ನೀವು ಕಂಟ್ರೋಲ್ ಮಾಡಿಕೊಳ್ಳಿ. ಇಲ್ಲವೇ, ಸಮಸ್ಯೆಗಳು ಹೆಚ್ಚಾಗಬಹುದು. ಬದಲಿಗೆ, ಸೌಮ್ಯವಾಗಿ ಮಾತನಾಡುವುದರಿಂದ ಕೆಲವು ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳುವಿರಿ. ಕುಟುಂಬದಲ್ಲಿ ನಿಮ್ಮ ಜವಾಬ್ದಾರಿಗಳು ಹೆಚ್ಚಾಗಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.