Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ನವಮಿ ತಿಥಿ, ಮಂಗಳವಾರದ ಈ ದಿನ ಶ್ರವಣ ನಕ್ಷತ್ರ, ಶುಭ ಯೋಗ, ವಣಿಜ ಕರಣ. ಇಂದಿನ ದ್ವಾದಶ ರಾಶಿಗಳ ದಿನ ಭವಿಷ್ಯ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಯಾವುದೇ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಮುಂದಾಳತ್ವ ವಹಿಸುವುದು ಭವಿಷ್ಯದಲ್ಲಿ ಲಾಭದಾಯಕವಾಗಿರಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಆಷ್ಟ ದಿಕ್ಕುಗಳಿಂದಲೂ ಪ್ರಯೋಜನವನ್ನು ಪಡೆಯಲಿದ್ದೀರಿ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಕೆಲಸಗಳಲ್ಲಿ ಜಯ ಪ್ರಾಪ್ತಿಯಾಗಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನಿಮ್ಮ ನಡತೆಯಲ್ಲಿ ನಿರಾಳತೆ, ಜಾಗರೂಕತೆಯನ್ನು ಹೆಚ್ಚಿಸಿಕೊಳ್ಳುವುದು ಪ್ರಯೋಯಜನಕಾರಿ ಆಗಿದೆ. ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಮುಂದುವರೆಯಿರಿ. ಗಂಭೀರ ವಿಷಯಗಳಲ್ಲಿ ತಾಳ್ಮೆಯನ್ನು ಕಾಯ್ದುಕೊಳ್ಳಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಸಂಘಟನಾತ್ಮಕ ವಿಷಯಗಳಲ್ಲಿ ಗಮನ ಕೇಂದ್ರೀಕರಿಸಿ. ವೈಯಕ್ತಿಕ ಜೀವನದಲ್ಲಿ ಶುಭ ಸುದ್ದಿಗಳನ್ನು ಕೇಳಬಹುದು. ಪರಸ್ಪರ ಸಹಕಾರದ ಮನೋಭಾವದಿಂದ ಮುಂದುವರೆಯುವುದು ಹೆಚ್ಚು ಪ್ರಯೋಜನಕಾರಿ ಆಗಿದೆ.
ಇದನ್ನೂ ಓದಿ- Weekly Horoscope: ಏಪ್ರಿಲ್ ಕೊನೆ ವಾರ ವಸುಮತಿ ಯೋಗದಿಂದ ಈ ರಾಶಿಯವರಿಗೆ ದಿಢೀರ್ ಧನಲಾಭ, ಸಂಪತ್ತಿನ ಸುರಿಮಳೆ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ಆದಾಗ್ಯೂ, ಯಾವುದೇ ವಿಚಾರದಲ್ಲಿ ಅತಿಯಾದ ಉತ್ಸಾಹವನ್ನು ತಪ್ಪಿಸಿ. ಯಾರಿಗಾದರೂ ಸಾಲ ನೀಡುವುದನ್ನು ಅಥವಾ ಹಣವನ್ನು ಎರವಲು ಪಡೆಯದಿದ್ದರೆ ಒಳ್ಳೆಯದು.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸಂಬಂಧಗಳಲ್ಲಿ ಸಾಮರಸ್ಯ, ಪರಸ್ಪರ ಗೌರವವನ್ನು ಕಾಪಾಡಿಕೊಳ್ಳಿ. ಪ್ರಮುಖ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದರಿಂದ ಬಂಪರ್ ಆದಾಯ ಗಳಿಸುವಿರಿ. ಹೊಸ ವ್ಯವಹಾರವನ್ನು ಆರಂಭಿಸಲು ಶುಭ ದಿನ.
ತುಲಾ ರಾಶಿಯವರ ಭವಿಷ್ಯ (Libra Horoscope):
ಕಲಾತ್ಮಕ ಕ್ಷೇತ್ರದಲ್ಲಿರುವವರಿಗೆ ಇಂದು ಫಲಪ್ರದವಾದ ದಿನ. ಹಿರಿಯರ ಸಲಹೆ ಸೂಚನೆಯಂತೆ ಮುಂದುವರೆಯುವುದು ಲಾಭದಾಯಕವಾಗಿದೆ. ಮಧುರವಾದ ಮಾತಿನಿಂದ ಸಂಬಂಧಗಳು ಸುಧಾರಿಸುತ್ತವೆ. ವೈಯಕ್ತಿಕ ವಿಚಾರಗಳಲ್ಲಿ ಹೆಚ್ಚು ಗಮನ ಅಗತ್ಯ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವೃತ್ತಿಪರ ವಿಷಯಗಳು ಇಂದು ನಿಮ್ಮ ಪರವಾಗಿವೆ. ಭೂಮಿ, ಮನೆ ಖರೀದಿ ವಿಚಾರಗಳಲ್ಲಿ ಪ್ರಗತಿ ಕಂಡು ಬರಲಿದೆ. ಸಹಕಾರದಿಂದ ಮುಂದುವರೆಯುವುದರಿಂದ ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ.
ಇದನ್ನೂ ಓದಿ- ಅಕ್ಷಯ ತೃತೀಯದಂದೇ ಲಕ್ಷ್ಮೀ ನಾರಾಯಣ ಯೋಗ: ಈ ರಾಶಿಯವರಿಗೆ ಸರ್ವಾರ್ಥ ಸಿದ್ಧಿ, ಸಾಕ್ಷಾತ್ ಮಹಾಲಕ್ಷ್ಮೀ ಕೃಪಾಕಟಾಕ್ಷ
ಧನು ರಾಶಿಯವರ ಭವಿಷ್ಯ (Sagittarius Horoscope):
ಕುಟುಂಬದಲ್ಲಿ ನಂಬಿಕೆ ಬಲವಾಗಿರಲಿದೆ. ಯಾವುದೇ ವಿಚಾರದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ. ಅನಗತ್ಯವಾಗಿ ಯಾರೊಂದಿಗಾದರೂ ಮಾತನಾಡುವುದನ್ನು ತಪ್ಪಿಸಿದರೆ ಒಳಿತು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಸೃಜನಶೀಲ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವುದರಿಂದ ಪ್ರಗತಿ ಕಂಡು ಬರಲಿದೆ. ಮನೆಯಲ್ಲಿ ಅನುಕೂಲಕರ ವಾತಾವರಣ ಇರಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನ, ಪ್ರತಿಷ್ಠೆ ಹೆಚ್ಚಾಗಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ವ್ಯವಹಾರವನ್ನು ಬುದ್ದಿವಂತಿಕೆಯಿಂದ ಮುನ್ನಡೆಸುವಿರಿ. ವೃತ್ತಿಪರರು ಶ್ರಮವಹಿಸಿ ಕೆಲಸ ಮಾಡುವುದು ಲಾಭದಾಯಕವಾಗಿದೆ. ಯಾವುದೇ ವಿಚಾರಗಳಲ್ಲಿ ಕಾನೂನನ್ನು ಉಲ್ಲಂಘಿಸುವುದನ್ನು ತಪ್ಪಿಸಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ವಾಣಿಜ್ಯ ವ್ಯವಹಾರಗಳಲ್ಲಿ ಭರ್ಜರಿ ಆದಾಯವನ್ನು ಗಳಿಸುವಿರಿ. ಯಾವುದೇ ಕೆಲಸಗಳಲ್ಲಿ ದೂರದೃಷ್ಟಿಯನ್ನು ಕಾಪಾಡಿಕೊಳ್ಳುವುದು ಒಳ್ಳೆಯದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









