)
Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ಪ್ರತಿಪದಾ ತಿಥಿ, ಸೋಮವಾರದ ಈ ದಿನ ಉತ್ತರಾ ನಕ್ಷತ್ರ, ಶುಕ್ಲ ಯೋಗ, ಕಿಂಸ್ತುಘ್ನ ಕರಣ ಇರಲಿದೆ. ಇಂದಿನಿಂದ ನವರಾತ್ರಿ ಆರಂಭವಾಗಲಿದ್ದು, ನವರಾತ್ರಿಯ ಮೊದಲ ದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯೋಣ...
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಅನುಭವಿಸುವಿರಿ. ವೃತ್ತಿ-ವ್ಯವಹಾರದಲ್ಲಿ ವಿವೇಕಯುತವಾಗಿ ನಡೆದುಕೊಳ್ಳುವುದರಿಂದ ನಿಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತೀರಿ. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಯಾವುದೇ ಕೆಲಸ ಮಾಡಿದರೂ ಜಯ ಶತಸಿದ್ಧ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ನೀವಿಂದು ನಿಮ್ಮ ಸ್ನೇಹಿತರೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಕೆಲಸದ ವಿಷಯಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವಿರಿ.
ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ. ಆಪ್ತರನ್ನು ಭೇಟಿಯಾಗುತ್ತೀರಿ ಮತ್ತು ಅವರೊಂದಿಗೆ ವಿಹಾರಗಳನ್ನು ಆನಂದಿಸುತ್ತೀರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಸರಿದೂಗಿಸಲು ಇಂದು ಕುಟುಂಬ ಸದಸ್ಯರೊಂದಿಗೆ ನಿಮ್ಮ ಸಂವಹನವನ್ನು ಸುಧಾರಿಸುವ ಅವಶ್ಯಕತೆ ಇದೆ. ಇದರನ್ನು ಅರಿತು ಮಾತನಾಡಿ. ವೈಯಕ್ತಿಕ ವಿಷಯಗಳು ನಿಮಗೆ ಅನುಕೂಲಕರವಾಗುತ್ತವೆ. ಆಸ್ತಿ ಮತ್ತು ವಾಹನಗಳಿಗೆ ಸಂಬಂಧಿಸಿದಂತೆ ನಿಮ್ಮ ಕನಸು ನನಸಾಗುವ ಸಮಯ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವವರಿಗೆ ಇಂದು ಫಲಪ್ರದವಾದ ದಿನ. ನಿಮ್ಮ ಸಂವಹನ ಸುಧಾರಿಸಲಿದ್ದು ವ್ಯವಹಾರದಲ್ಲಿ ಆಕರ್ಷಕ ಪ್ರಸ್ತಾಪಗಳು ನಿಮ್ಮ ಹಾದಿಗೆ ಬರಲಿವೆ. ಸಂಬಂಧಗಳಲ್ಲಿ ಸಕಾರಾತ್ಮಕತೆಯನ್ನು ಕಾಣುವಿರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಮನೆಯಲ್ಲಿಂದು ಸಂತೋಷದ ವಾತಾವರಣ ಇರುತ್ತದೆ. ನಿಮ್ಮ ಹೊಸ ಪ್ರಯತ್ನಗಳಲ್ಲಿ ಕುಟುಂಬ ಸದಸ್ಯರ ಬೆಂಬಲ ಇರಲಿದೆ. ವ್ಯವಹಾರದಲ್ಲಿ ಯೋಜಿತ ರೀತಿಯಲ್ಲಿ ಮುಂದುವರೆಯುವುದರಿಂದ ಭರ್ಜರಿ ಲಾಭವನ್ನು ಗಳಿಸುವಿರಿ. ಹಣಕಾಸಿನ ವಿಷಯಗಳಲ್ಲಿ ಉತ್ತಮ ಸಮಯ ಇದಾಗಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಸೃಜನಶೀಲ ಪ್ರಯತ್ನಗಳಲ್ಲಿ ಇಂದು ಮುನ್ನಡೆಯನ್ನು ಕಾಯ್ದುಕೊಳ್ಳುವಿರಿ. ವೃತ್ತಿ ಮತ್ತು ವ್ಯವಹಾರವನ್ನು ಸಂಘಟಿಸಿ ಮುಂದುವರೆದರೆ ಜಯ ದೊರೆಯಲಿದೆ. ವ್ಯವಹಾರ ವಿಷಯಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸುತ್ತೀರಿ. ವೈಯಕ್ತಿಕ ವಿಷಯಗಳಲ್ಲಿ ಶುಭ ವಾರ್ತೆ ನಿರೀಕ್ಷಿಸಬಹುದು.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಅಪರಿಚಿತರನ್ನು ನಂಬುವ ತಪ್ಪನ್ನು ಮಾಡಬೇಡಿ. ಹೂಡಿಕೆ ವಿಚಾರಗಳಲ್ಲಿ ಆತುರತೆಯನ್ನು ತಪ್ಪಿಸಿ. ಬೇರೆಯವರೊಂದಿಗೆ ಮಾತನಾಡುವಾಗ ಮೊಂಡುತನ ಮತ್ತು ಅಹಂಕಾರದಿಂದ ವರ್ತಿಸಬೇಡಿ. ಪ್ರಮುಖ ವಿಚಾರಗಳಲ್ಲಿ ಇಂದು ಯಾವುದೇ ನಿರ್ಧಾರ ಕೈಗೊಳ್ಳದೆ ಇರುವುದು ಒಳ್ಳೆಯದು.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ನಿಮ್ಮ ವೃತ್ತಿಪರ ಪ್ರಯತ್ನಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಪರಿಚಯಸ್ಥರಲ್ಲಿ ಸಹಕಾರ ಮನೋಭಾವ ಬೆಳೆಯಲಿದೆ. ಆರ್ಥಿಕ ವಿಷಯಗಳು ವೇಗ ಪಡೆಯಲಿದ್ದು, ಜೀವನಮಟ್ಟ ಸುಧಾರಿಸಲಿದೆ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಎಲ್ಲರಿಂದ ಗೌರವವನ್ನು ಕಾಪಾಡಿಕೊಳ್ಳುತ್ತೀರಿ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಪೂರ್ವಿಕರ ಆಸ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಸ್ವೀಕರಿಸುವಿರಿ. ನಿಮ್ಮ ಕಲಾತ್ಮಕ ಕೌಶಲ್ಯಗಳು ಮೆಚ್ಚುಗೆಗೆ ಪಾತ್ರವಾಗಲಿವೆ. ವೃತ್ತಿ ರಂಗದಲ್ಲಿ ಬಲವಾಗಿ ಉಳಿಯುವಿರಿ. ಸ್ಪರ್ಧಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುತ್ತೀರಿ. ಇದು ನಿಮ್ಮ ಕಾರ್ಯಕ್ಷಮತೆಯನ್ನು ಸುಧಾರಿಸುವಲ್ಲಿ ಪರಿಣಾಮಕಾರಿ ಆಗಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದ್ದು ವಿವಿಧ ಪ್ರಯತ್ನಗಳಲ್ಲಿ ಲಾಭಾಂಶಗಳು ಹೆಚ್ಚಾಗಲಿವೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ಸಮಾಜದಲ್ಲಿ ನಿಮ್ಮ ಖ್ಯಾತಿ, ಗೌರವ ಹೆಚ್ಚಾಗಲಿದೆ. ವ್ಯವಹಾರ ವಿಸ್ತರಣೆ ಬಗ್ಗೆ ಯೋಜಿಸಲು ಇಂದು ತುಂಬಾ ಪ್ರಾಶಸ್ತ್ಯವಾಗಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ತಾಳ್ಮೆಯಿಂದ, ನ್ಯಾಯಯುತವಾಗಿ ಕೆಲಸ ಮಾಡಿ. ಇದು ನಿಮಗೆ ಭವಿಷ್ಯದಲ್ಲಿ ಲಾಭವನ್ನು ಹೆಚ್ಚಿಸಲಿದೆ. ಕೆಲಸದ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಿ. ಅನವಶ್ಯಕ ವಾದ-ವಿವಾದಗಳಲ್ಲಿ ಸಿಲುಕುವುದನ್ನು ತಪ್ಪಿಸಿ. ವಿವಿಧ ಯೋಜನೆಗಳಲ್ಲಿ ಪ್ರಗತಿ ಕಂಡು ಬರಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಜಂಟಿ ವ್ಯವಹಾರಗಳಲ್ಲಿ ಇಂದು ಬಂಪರ್ ಲಾಭವಾಗಲಿದೆ. ವೃತ್ತಿ ಬದುಕಿನಲ್ಲಿ ಸಿಹಿ ಸುದ್ದಿಗಳನ್ನು ಪಡೆಯುವಿರಿ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವತ್ತ ಗಮನ ಹರಿಸುವುದು ಲಾಭಾಂಶವನ್ನು ಹೆಚ್ಚಿಸಲಿದೆ. ಆರೋಗ್ಯದ ವಿಚಾರದಲ್ಲಿ ಕಾಳಜಿ ಅಗತ್ಯವಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.