)
Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಗುರುವಾರದ ಈ ದಿನ ವಿಶಾಖಾ ನಕ್ಷತ್ರ, ಆಯು ಯೋಗ, ಬಾಲವ ಕರಣ ಇರಲಿದೆ.
ಮೇಷ ರಾಶಿಯವರ ಭವಿಷ್ಯ (Aries Horoscope):
ವೈಯಕ್ತಿಕ ಜೀವನದಲ್ಲಿ ಇಂದು ಕೆಲವು ಸಮಸ್ಯೆಗಳು ನಿಮ್ಮ ಒತ್ತಡವನ್ನು ಹೆಚ್ಚಿಸಬಹುದು. ವೃತ್ತಿ ಬದುಕಿನಲ್ಲಿ ಹೆಚ್ಚಿನ ಜವಾಬ್ದಾರಿಗಳು ಹೆಗಲೇರಬಹುದು. ಸುತ್ತಮುತ್ತಲಿನ ಜನರ ಬಗ್ಗೆ ತುಂಬಾ ಜಾಗರೂಕರಾಗಿರಿ. ಇಲ್ಲವೇ ಭಾರೀ ಹಾನಿಯಾಗಬಹುದು.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ವ್ಯವಹಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅಂತಃಪ್ರಜ್ಞೆಯನ್ನು ನಂಬಿ ಮುಂದುವರೆಯಿರಿ. ಕೆಲವು ವಿಚಾರಗಳಲ್ಲಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯಬೇಡಿ. ಆರೋಗ್ಯ ವಿಚಾರದಲ್ಲಿ ತುಂಬಾ ಎಚ್ಚರಿಕೆಗೆ ಅಗತ್ಯವಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಸಂಗಾತಿಯಿಂದ ಇಂದು ಸಂಪೂರ್ಣ ಬೆಂಬಲವನ್ನು ಪಡೆಯುವಿರಿ. ಹೊಸ ಉದ್ಯಮವನ್ನು ಆರಂಭಿಸಲು ಯೋಚಿಸುತ್ತಿದ್ದರೆ ಉತ್ತಮ ಸಮಯ ಇದಾಗಿದೆ. ಕಠಿಣ ಪರಿಶ್ರಮದ ಸಂಪೂರ್ಣ ಫಲವನ್ನು ಪಡೆಯುವಿರಿ. ದಿನವು ಸಕಾರಾತ್ಮಕತೆಯಿಂದ ತುಂಬಿರುತ್ತದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಬೆಟ್ಟದಂತ ಸಮಸ್ಯೆಗಳು ಕೂಡ ಮಂಜಿನಂತೆ ಕರಗಲಿವೆ. ಅನಾರೋಗ್ಯದಿಂದ ಚೇತರಿಕೆ ಕಾಣುವಿರಿ. ಮುಂದೂಡಿದ್ದ ಮದುವೆ ಮಾತುಕತೆಗಳು ಫಲ ನೀಡಲಿವೆ. ವೈಯಕ್ತಿಕವಾಗಿ ನಿಮ್ಮ ಇಚ್ಚಾಶಕ್ತಿಗೆ ಅನುಗುಣವಾಗಿ ನಡೆದುಕೊಳ್ಳುವುದರಿಂದ ಉತ್ತಮ ಫಲ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಕೆಟ್ಟ ಹವ್ಯಾಸಗಳಿಂದ ದೂರ ಉಳಿಯುವುದು ಒಳ್ಳೆಯದು. ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ. ಕುಟುಂಬದೊಂದಿಗೆ ಪ್ರವಾಸ ಕೈಗೊಳ್ಳಲು ಯೋಜಿಸಬಹುದು. ಇದು ನಿಮ್ಮ ಸಂತೋಷವನ್ನು ಇಮ್ಮಡಿಗೊಲಿಸಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ವೈಯಕ್ತಿಕ ಬದುಕಿನಲ್ಲಿ ಕಠಿಣ ಸಂದರ್ಭಗಳು ಎದುರಾಗಬಹುದು. ಇದಲ್ಲದೆ, ಹಣಕಾಸಿನ ವಿಚಾರದಲ್ಲೂ ಭಾರೀ ಸಂಕಷ್ಟಗಳನ್ನು ಅನುಭವಿಸಬೇಕಾಗಬಹುದು. ಆದರೆ, ಕಷ್ಟವೆಂದು ತಲೆ ಮೇಲೆ ಕೈ ಹೊತ್ತು ಕೂರುವ ಬದಲಿಗೆ ಅದರಿಂದ ಪರಿಹಾರ ಪಡೆಯಲು ವಿನೂತನವಾಗಿ ಯೋಚಿಸಿ. ಹಿರಿಯರ ಸಲಹೆ ಪಡೆಯಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ವಿಶೇಷ ಅತಿಥಿಗಳ ಆಗಮನವು ನಿಮ್ಮ ಮನೆಯಲ್ಲಿ ಸಂತೋಷದ ವಾತಾವರಣವನ್ನು ತರಲಿದೆ. ಕೆಲಸದಲ್ಲಿ ಆಹ್ಲಾದಕರ ವಾತಾವರಣ ಇರುತ್ತದೆ. ಸಮಸ್ಯೆಗಳನ್ನು ತಾಳ್ಮೆಯಿಂದ ಎದುರಿಸಿದರೆ ಎಲ್ಲವೂ ಸುಸೂತ್ರವಾಗಿ ಬಗೆಹರಿಯಲಿವೆ. ಕೆಲಸದಲ್ಲಿ ಪ್ರಗತಿ ಕಂಡು ಬರಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಉದ್ಯೋಗ ರಂಗದಲ್ಲಿ ನಿಮ್ಮ ಕಷ್ಟಗಳು ಬಗೆಹರಿದು ಒಳ್ಳೆಯ ಸಮಯವನ್ನು ಆನಂದಿಸುವಿರಿ. ನಿಮ್ಮ ಕೆಲಸಕ್ಕೆ ಮೇಲಾಧಿಕಾರಿಗಳು ಮನ್ನಣೆ ನೀಡಲಿದ್ದಾರೆ. ಈ ದಿನ ಅನಗತ್ಯ ವಾದ ವಿವಾದಗಳಲ್ಲಿ ತೊಡಗುವುದನ್ನು ತಪ್ಪಿಸಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುವುದರಿಂದ ಈ ಬಗ್ಗೆ ಜಾಗರೂಕರಾಗಿರಿ. ಕೆಲವು ಯೋಜನೆಗಳಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಇದು ನಿಮ್ಮ ಒತ್ತಡವನ್ನು ಹೆಚ್ಚಿಸಲಿದೆ. ಆದಾಗ್ಯೂ, ಸಂಜೆ ವೇಳೆಗೆ ಕೆಲವು ಉತ್ತಮ ಸುದ್ದಿ ನಿಮ್ಮ ದಿನವನ್ನು ಬೆಳಗಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಕಚೇರಿಯಲ್ಲಿ ನಿಮ್ಮ ಬಾಸ್ ಜೊತೆ ಕಿರಿಕಿರಿ ಉಂಟಾಗಬಹುದು. ಪ್ರೀತಿಪಾತ್ರರೊಂದಿಗೆ ಘರ್ಷಣೆ ಸಾಧ್ಯತೆ ಇದೆ. ವ್ಯವಹಾರ ವಿಸ್ತರಣೆಗೆ ತುಂಬಾ ಪ್ರಾಶಸ್ತ್ಯವಾದ ಸಮಯ. ವ್ಯಾಪಾರದಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ನಿಮ್ಮ ಖರ್ಚಿನ ಬಗ್ಗೆ ನಿಗಾವಹಿಸಿ. ಮಿತವ್ಯಯ ಮಾಡದಿದ್ದರೆ ಆರ್ಥಿಕ ಮುಗ್ಗಟ್ಟು ಎದುರಾಗಬಹುದು. ಪ್ರೀತಿ ಜೀವನದಲ್ಲಿ ಇರುವವರಿಗೆ ಇಂದು ಅಡೆತಡೆಗಳು ಎದುರಾಗಬಹುದು. ನಿಮ್ಮ ಆರೋಗ್ಯ ಚೇತರಿಸಿಕೊಳ್ಳಲಿದ್ದು ಪ್ರೀತಿಪಾತ್ರರೊಂದಿಗೆ ಆಹ್ಲಾದಕರ ಸಮಯ ಕಳೆಯುವಿರಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ನಿಮಗೆ ಉತ್ಸಾಹಭರಿತವಾದ ದಿನ. ಶೀಘ್ರದಲ್ಲೇ ನಿಮ್ಮ ಕನಸಿನ ಯೋಜನೆ ಪೂರ್ಣಗೊಳಿಸುವಿರಿ. ಕೆಲಸದಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದೆ. ವ್ಯವಹಾರದಲ್ಲಿ ಬುದ್ದಿವಂತಿಕೆಯಿಂದ ನಿರ್ಧಾರಗ ತೆಗೆದುಕೊಳ್ಳುವಿರಿ. ಇದರಿಂದ ಭಾರೀ ಆದಾಯಗಳಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.