Guruvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಆಷಾಢ ಮಾಸ ಕೃಷ್ಣ ಪಕ್ಷ ಅಮಾವಾಸ್ಯೆಯ ಈ ದಿನ ಗುರುವಾರ ಪುನರ್ವಸು ನಕ್ಷತ್ರ ಹರ್ಷಣ ಯೋಗ, ಚತುಷ್ಪಾದ ಕರಣ. ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ವೈಯಕ್ತಿಕ ಗುರಿಗಳ ಮೇಲೆ ಹೆಚ್ಚು ಗಮನಹರಿಸುವುದು ಲಾಭದಾಯಕವಾಗಿದ್ದು, ನಿಮ್ಮ ಕೆಲಸದಲ್ಲಿ ಗಮನಾರ್ಹ ಪ್ರಗತಿಯನ್ನು ಕಾಣುವಿರಿ. ಕುಟುಂಬದಲ್ಲಿ ಸಾಮರಸ್ಯ ಮೇಲುಗೈ ಸಾಧಿಸಲಿದೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ವೃತ್ತಿ ಮತ್ತು ವ್ಯವಹಾರದಲ್ಲಿ ಸ್ಥಿರವಾದ ಪ್ರಗತಿಯನ್ನು ಕಾಣುವಿರಿ. ಸಹೋದ್ಯೋಗಿಗಳು ಮತ್ತು ಪಾಲುದಾರರೊಂದಿಗೆ ಸಾಮರಸ್ಯವನ್ನು ಬೆಳೆಸಿಕೊಳ್ಳುವಿರಿ. ನಿಮ್ಮ ಪ್ರಯತ್ನಗಳು ಉತ್ತಮ ಆರ್ಥಿಕ ಪ್ರಯೋಜನವನ್ನು ನೀಡಲಿದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಈ ದಿನ ಕೌಟುಂಬಿಕ ಬಾಂಧವ್ಯ ಮತ್ತು ವೈಯಕ್ತಿಕ ವಿಚಾರಗಳ ಮೇಲೆ ಹೆಚ್ಚು ಗಮನಹರಿಸುವುದು ಸೂಕ್ತವಾಗಿದೆ. ಹಣಕಾಸಿನ ವಿಷಯಗಳಲ್ಲಿ ಸ್ಥಿರತೆ ಕಂಡು ಬರಲಿದೆ. ತಾಳ್ಮೆಯಿಂದ ಮಾಡಿದ ಕೆಲಸಕ್ಕೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಶ್ಬುಹ ಫಲಗಳನ್ನು ನಿರೀಕ್ಷಿಸಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಿರಲಿದೆ. ನಿಮ್ಮ ಗುರಿಗಳ ಮೇಲೆ ಗಮನಹರಿಸುವುದರಿಂದ ಕೆಲಸದಲ್ಲಿ ಕಾರ್ಯಕ್ಷಮತೆ ಸುಧಾರಿಸಲಿದೆ. ವಿಶೇಷವಾಗಿ ಯೋಜಿತ ಕೆಲಸಗಳಲ್ಲಿ ನಿಮ್ಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುತ್ತದೆ. ಭಾವನಾತ್ಮಕವಾಗಿ ತೃಪ್ತಿಕರವಾದ ದಿನ.
ಇದನ್ನೂ ಓದಿ- ಇನ್ನೂ 127ದಿನಗಳ ಕಾಲ ಶನಿ ಹಿಮ್ಮುಖ ಚಲನೆ: ಈ ರಾಶಿಯವರಿಗೆ ಕುಬೇರನ ಸಂಪತ್ತೇ ಕೈಸೇರುವ ಸುವರ್ಣ ಸಮಯ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಕಾನೂನು ವಿಷಯಗಳಲ್ಲಿ ಎಚ್ಚರಿಕೆಯಿಂದ ಇರುವುದು ಸೂಕ್ತವಾಗಿದೆ. ವಿಶೇಷವಾಗಿ ಹಣಕಾಸಿನ ವ್ಯವಹಾರಗಳಲ್ಲಿ ಕುರುಡು ನಂಬಿಕೆಯನ್ನು ತಪ್ಪಿಸಿ. ದಾಖಲೆ ಸಂಬಂಧಿತ ವಿಚಾರಗಳಲ್ಲಿ ಮೈಯೆಲ್ಲಾ ಕಣ್ಣಾಗಿರುವುದು ಒಳ್ಳೆಯದು. ಭಾವನಾತ್ಮಕವಾಗಿ ತಾಳ್ಮೆ ಅತ್ಯಗತ್ಯ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಹಣಕಾಸು ನಿರ್ಧಾರಗಳನ್ನು ಬುದ್ದಿವಂತಿಕೆಯಿಂದ ತೆಗೆದುಕೊಳ್ಳಿ. ಸಹೋದ್ಯೋಗಿಗಳು ಮತ್ತು ಪ್ರೀತಿಪಾತ್ರರೊಂದಿಗಿನ ಸಮನ್ವಯ ಸುಧಾರಿಸುತ್ತದೆ. ಟೀಮ್ ವರ್ಕ್ ಉತ್ತಮ ಫಲ ನೀಡಲಿದೆ. ಸಂಬಂಧಗಳು ಭಾವನಾತ್ಮಕವಾಗಿ ತೃಪ್ತಿಕರವಾಗಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಅಧಿಕಾರ ಅಥವಾ ನಾಯಕತ್ವದ ಅವಕಾಶಗಳು ನಿಮ್ಮನ್ನು ಅರಸಿ ಬರಲಿವೆ. ಇಂದು ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನಿಮ್ಮ ತೀಕ್ಷ್ಣ ಚಿಂತನೆ, ಶಾಂತ ನಡವಳಿಕೆಯಿಂದ ಇತರರನ್ನು ಮೆಚ್ಚಿಸುವಿರಿ. ಹೊಸ ಯೋಜನೆಗಳಿಂದ ಆರ್ಥಿಕ ಹರಿವು ಹೆಚ್ಚಾಗಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿಮ್ಮ ಪ್ರಯತ್ನಗಳು ಉತ್ತಮ ಫಲಿತಾಂಶವನ್ನು ತೋರಲು ಪ್ರಾರಂಭಿಸಲಿವೆ. ಅದರಲ್ಲೂ ವಿಶೇಷವಾಗಿ ದೀರ್ಘಕಾಲೀನ ಗುರಿಗಳಲ್ಲಿ ನೀವು ಜಯಶಾಲಿಯಾಗುವಿರಿ. ವೃತ್ತಿಪರ ಕಾರ್ಯಕ್ಷಮತೆ ಪ್ರಭಾವಶಾಲಿಯಾಗಿದ್ದು, ಆರ್ಥಿಕ ನಿರೀಕ್ಷೆಗಳು ಬಲಗೊಳ್ಳಲಿವೆ.
ಇದನ್ನೂ ಓದಿ- ಗ್ರಹಣದೊಂದಿಗೆ ಪಿತೃ ಪಕ್ಷ ಆರಂಭ : ಇಲ್ಲಿಂದಲೇ ಬೆಳಗುವುದು ಮೂರು ರಾಶಿಯವರ ಭಾಗ್ಯ, ಹಣಕಾಸಿನ ವಿಷಯದಲ್ಲಿ ಹೊಡೆಯುವುದು ಜಾಕ್ ಪಾಟ್
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ಯಾರನ್ನಾದರೂ ಕುರುಡಾಗಿ ನಂಬುವುದನ್ನು ತಪ್ಪಿಸಿ. ವಿಶೇಷವಾಗಿ ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಕೆಲಸದಲ್ಲಿ, ಬುದ್ಧಿವಂತ ತಂತ್ರಗಳು ಸಹಾಯ ಮಾಡುತ್ತವೆ. ವೈಯಕ್ತಿಕ ವಿಚಾರಗಳಲ್ಲಿ ವಿಳಂಬವಾಗುವುದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ಟೀಮ್ ವರ್ಕ್ ನಿಮ್ಮ ಯಶಸ್ಸಿನ ಕೀಲಿ ಆಗಿರಲಿದೆ. ವ್ಯವಹಾರ ಮತ್ತು ವೃತ್ತಿ ವಿಷಯಗಳಲ್ಲಿ ಸಹೋದ್ಯೋಗಿಗಳು ಮತ್ತು ಸ್ನೇಹಿತರ ಬೆಂಬಲ ಉತ್ತಮ ಲಾಭವನ್ನು ತಂದುಕೊಡಲಿದೆ. ವೈಯಕ್ತಿಕ ಸಂಬಂಧಗಳಲ್ಲಿ ಸಾಮರಸ್ಯವನ್ನು ಕಾಣಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ಪ್ರಮುಖ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವತ್ತ ಗಮನಹರಿಸಿ. ಹಣಕಾಸಿನ ವಿಚಾರವಾಗಿ ಅಜಾಗರೂಕತೆಯನ್ನು ತಪ್ಪಿಸಿ. ವ್ಯವಹಾರದಲ್ಲಿ ತಾಳ್ಮೆಯಿಂದ ವರ್ತಿಸಿ. ವೃತ್ತಿ ಬದುಕಿನಲ್ಲಿ ಸ್ಥಿರವಾದ ಪ್ರಗತಿ ಕಂಡು ಬರಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಭಾವನಾತ್ಮಕವಾಗಿ ಧನಾತ್ಮಕ ಫಲಗಳನ್ನು ಅನುಭವಿಸುವಿರಿ. ಸ್ನೇಹಿತರು ಮತ್ತು ಕುಟುಂಬದೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ಹನಕಿಯಸಿನ ವಿಷಯಗಳಲ್ಲಿ ಅದೃಷ್ಟ ನಿಮ್ಮ ಪರವಾಗಿದೆ. ನಿಮ್ಮ ಗುರಿಗಳನ್ನು ಕೇಂದ್ರೀಕರಿಸಿ ಈ ನಿಟ್ಟಿನಲ್ಲಿ ಮುಂದುವರೆಯುವುದು ಸೂಕ್ತ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.









