)
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ ತಿಥಿಯ ಈ ದಿನ ಬುಧವಾರ ಮೃಗಶಿರಾ ನಕ್ಷತ್ರದಲ್ಲಿ ಗಂಡ ಯೋಗ, ಕಿಂಸ್ತುಘ್ನ ಕರಣ. ಇಂದು ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ನಿಮ್ಮ ಧೈರ್ಯ, ದೃಢಸಂಕಲ್ಪದಿಂದ ಉತ್ತಮ ಫಲಿತಾಂಶ ಪಡೆಯುವಿರಿ. ಕುಟುಂಬದಲ್ಲಿ ಸಂಬಂಧಗಳಲ್ಲಿ ಮೂಡಿದ್ದ ಬಿರುಕು ಸರಿಹೋಗಲಿದೆ. ಸಹೋದರತ್ವ ಬಲಗೊಳ್ಳುತ್ತದೆ. ವೃತ್ತಿ-ವ್ಯವಹಾರದಲ್ಲಿ ಸಕ್ರಿಯರಾಗಿರುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಇಂದು ಕೌಟುಂಬಿಕ ಸುಖ ಹೆಚ್ಚಾಗುತ್ತದೆ. ಸಂಬಂಧಗಳು ಬಲಗೊಳ್ಳುತ್ತವೆ. ಅಲ್ಪಾವಧಿ ಪ್ರಯಾಣಗಳು ಲಾಭದಾಯಕವಾಗಿವೆ. ಆದಾಗ್ಯೂ,ಇಂದು ಮೃಗಶಿರಾ ನಕ್ಷತ್ರದಲ್ಲೇ ಗಂಡ ಯೋಗ ಇರುವುದರಿ ದ ನಕಾರಾತ್ಮಕ ಜನರಿಂದ ದೂರವಿರಿ. ಮಾತು ನಡವಳಿಕೆಯಲ್ಲಿ ಮಾಧುರ್ಯತೆಯನ್ನು ಕಾಪಾಡಿಕೊಳ್ಳಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ನವೀನ ಆಲೋಚನೆಗಳು, ಸೃಜನಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು ಲಾಭದಾಯಕವಾಗಿದೆ. ವೃತ್ತಿ ಬದುಕಿನಲ್ಲಿ ಉತ್ತಮವಾಗಿರಲಿದೆ. ಇಂದು ಪ್ರಮುಖ ಪ್ರಸ್ತಾಪಗಳನ್ನು ಪಡೆಯಬಹುದು. ಭಾವನಾತ್ಮಕವಾಗಿ ನಿಯಂತ್ರಣ ಸುಧಾರಿಸುವುದರಿಂದ ಪ್ರಯೋಜನ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಈ ರಾಶಿಯವರು ಇಂದು ಹೂಡಿಕೆ ಸಂಬಂಧಿತ ವಿಷಯಗಳಿಂದ ದೂರವಿದ್ದರೆ ಒಳಿತು. ನಿಮ್ಮ ಗುರಿಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ವ್ಯವಹಾರ ವಿಸ್ತರಣೆಯ ಯೋಜನೆಗಳು ವೇಗ ಪಡೆಯಲಿವೆ. ಹಣಕಾಸಿನ ವಹಿವಾಟುಗಳಲ್ಲಿ ಸ್ಪಷ್ಟತೆ ಇರಲಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಸಿಗುವ ಅವಕಾಶಗಳನ್ನು ಆರ್ಥಿಕ ಲಾಭಕ್ಕಾಗಿ ಬಳಸಿಕೊಳ್ಳಿ. ನಿಮ್ಮ ಪ್ರತಿಭೆಯನ್ನು ಸರಿಯಾದ ರೀತಿಯಲ್ಲಿ ಪ್ರದರ್ಶಿಸುವುದರಿಂದ ಉತ್ತಮ ಫಲಿತಾಂಶ ಸಿಗಲಿದೆ. ಉದ್ಯೋಗದಲ್ಲಿ ಆಕರ್ಷಕ ಕೊಡುಗೆಗಳನ್ನು ಪಡೆಯುವಿರಿ. ಕೆಲಸದಲ್ಲಿ ಹೆಚ್ಚಿನ ಸಮಯ ಕಳೆಯುವಿರಿ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಪ್ರಭಾವಿ ಜನರೊಂದಿಗೆ ನಿಕಟ ಸಂಬಂಧವನ್ನು ಬೆಳೆಸಿಕೊಳ್ಳುವುದು ಪ್ರಯೋಜನಕಾರಿ ಆಗಿದೆ. ಸಮಾಜದಲ್ಲಿ ನಿಮ್ಮ ಸ್ಥಾನ, ಪ್ರತಿಷ್ಠೆ ಸುಧಾರಿಸಲಿವೆ. ಸಭೆ-ಸಂಭಾಷಣೆಗಳಲ್ಲಿ ಪ್ರಭಾವಶಾಲಿಯಾಗಿ ಇರುತ್ತೀರಿ. ಕೆಲಸ ಮತ್ತು ವ್ಯವಹಾರದಲ್ಲಿ ವೇಗವನ್ನು ಕಾಯ್ದುಕೊಳ್ಳುತ್ತೀರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ನಿಮ್ಮ ಅದೃಷ್ಟ ಬಲವಾಗಿ ಉಳಿಯುತ್ತದೆ. ಪರಸ್ಪರ ಬೆಂಬಲ ಮನೋಭಾವಗಳಿಂದ ವಿವಿಧ ಪ್ರಯತ್ನಗಳು ವೇಗಗೊಳ್ಳುತ್ತವೆ. ನಿಮ್ಮ ಗುರಿಗಳಿಗೆ ಬದ್ಧರಾಗಿ ಶಿಸ್ತು ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ವಿಚಾರಗಳಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವಿರಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಸಭೆ-ಸಂಭಾಷಣೆಗಳಲ್ಲಿ ತಾಳ್ಮೆಯಿರಲಿ. ಪ್ರಮುಖ ವಿಷಯಗಳಲ್ಲಿ ಹಠಮಾರಿತನವನ್ನು ತಪ್ಪಿಸಿದರೆ ಒಳಿತು. ಸಾಮರಸ್ಯ ಮತ್ತು ಸಹಕಾರದಿಂದ ಕೆಲಸ ಮಾಡುವುದು ಲಾಭದಾಯಕವಾಗಿದೆ. ಪ್ರೀತಿಪಾತ್ರರ ಮಾರ್ಗದರ್ಶನದಂತೆ ಮುಂದುವರೆಯಿರಿ.
ಧನು ರಾಶಿಯವರ ಭವಿಷ್ಯ (Sagittarius Horoscope):
ತಂಡದ ಕೆಲಸದ ಮೇಲೆ ನಿಮ್ಮ ಗಮನ ಹೆಚ್ಚಾಗುತ್ತದೆ. ವ್ಯಾಪಾರ ಚಟುವಟಿಕೆಗಳನ್ನು ವಿಸ್ತರಿಸಲು ಸಕಾಲ. ಪ್ರೀತಿಪಾತ್ರರ ಜೊತೆಗೆ ಉತ್ತಮ ಸಮಯವನ್ನು ಕಳೆಯುವಿರಿ. ನಿರ್ವಹಣಾ ಮತ್ತು ಆಡಳಿತ ವಿಚಾರಗಳಲ್ಲಿ ಪರಿಷ್ಕರಣೆ ಅಗತ್ಯವಾಗಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಹೊಸಬರನ್ನು ನಂಬುವುದರಲ್ಲಿ ಆತುರತೆಯನ್ನು ತಪ್ಪಿಸಿ. ಸೇವಾ ವಲಯದಲ್ಲಿ ನಿಮ್ಮ ಪ್ರಯತ್ನಗಳನ್ನು ಮುಂದುವರೆಸಿ. ಬುದ್ದಿವಂತಿಕೆ ಮತ್ತು ಜಾಗರೂಕತೆಯಿಂದ ಕೆಲಸ ಮಾಡುವುದು ಉತ್ತಮ. ಎಲ್ಲರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ನಿಮ್ಮ ಗೆಳೆಯರ ಬೆಂಬಲದಿಂದ ಮುಂದುವರೆಯುವಿರಿ. ಸ್ನೇಹಿತರೊಂದಿಗೆ ಸಭೆ ಸೇರುವಿರಿ. ಪ್ರಮುಖ ಕೆಲಸಗಳಲ್ಲಿ ಆತುರತೆಯನ್ನು ತಪ್ಪಿಸಿ ಕುಟುಂಬದೊಂದಿಗೆ ನಿಕಟತೆ ಹೆಚ್ಚಾಗುತ್ತದೆ. ಭಾವನಾತ್ಮಕವಾಗಿ ಸಂಬಂಧಗಳು ಬಲಗೊಳ್ಳುತ್ತವೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಯಾವುದೇ ವಿಚಾರಗಳಲ್ಲಿ ವಾದ ವಿವಾದಗಳಲ್ಲಿ ಭಾಗಿಯಾಗುವುದನ್ನು ತಪ್ಪಿಸಿ. ಪ್ರೀತಿಪಾತ್ರರೊಂದಿಗೆ ಮಾತನಾಡುವಾಗ ಕಟುವಾಗಿ ತಕ್ಷಣದ ಪ್ರತಿಕ್ರಿಯೆ ನೀಡುವುದನ್ನು ತಪ್ಪಿಸಿ. ವೈಯಕ್ತಿಕ ವಿಚಾರಗಳಲ್ಲಿ ಜಾಗರೂಕರಗಿರಿ. ಭೌತಿಕ ಸೌಕರ್ಯಗಳ ಮೇಲೆ ನಿಮ್ಮ ಗಮನ ಹೆಚ್ಚಾಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.