)
Shanivara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿಯ ಈ ದಿನ ಶನಿವಾರ, ಆಶ್ಲೇಷಾ ನಕ್ಷತ್ರ, ವ್ಯತೀಪಾತ ಯೋಗ, ಬಾಲವ ಕರಣ. ಇಂದಿನ ದಿನ ಭವಿಷ್ಯ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಈ ದಿನ ದೊಡ್ಡ ದೊಡ್ಡ ಫಲಗಳನ್ನು ಅಪೇಕ್ಷಿಸದೆ ಸಿಗುವ ಸಣ್ಣ ಸಂತೋಷಗಳಿಗೆ ಖುಷಿಪಡುವುದು ಒಳ್ಳೆಯದು. ಕೆಲವೊಮ್ಮೆ ಪರಿಸ್ಥಿತಿಗಳು ಕಠಿಣವೆನಿಸಬಹುದು. ಎದೆಗುಂದದೆ ನಗುಮುಖದಿಂದ ಮುಂದುವರೆಯಿರಿ, ಕೆಲಸದ ಮೇಲೆ ನಿಮ್ಮ ಗಮನ ಕೇಂದ್ರೀಕರಿಸಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಸದಾ ಬೇರೆಯವರಿಗೆ ನೀಡುವ ನೀವು ಇಂದು ನಿಮಗಾಗಿ ಮಧುರ ಉಡುಗೊರೆಗಳನ್ನು ಪಡೆಯುವಿರಿ. ಪ್ರೀತಿ, ದಯೆಯ ಮಾತುಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿರಿ. ಕೆಲಸದಲ್ಲಿ ಇತರರ ಮಾರ್ಗದರ್ಶನವನ್ನು ಪಡೆಯಿರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಕೆಲಸಗಳು ತ್ವರಿತವಾಗಿ ಪೂರ್ಣಗೊಳ್ಳುತ್ತವೆ. ಆದರೆ, ಕೆಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಸಂಬಂಧಗಳಲ್ಲಿ ಮಧುರತೆ ಇರಲಿ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಲು ಪ್ರಯತ್ನಿಸಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ನಿಮ್ಮ ಭಾವನಾತ್ಮಕ ಶಕ್ತಿಯಿಂದ ಸುತ್ತಲಿನ ಪರಿಸ್ಥಿತಿಯನ್ನು ನಿಭಾಯಿಸುವಿರಿ. ಆದರೆ, ವೈಯಕ್ತಿಕ ಮನಸ್ಥಿತಿಗೆ ಸಂಬಂಧಿಸಿಡಾಂಟೆ ನಿಮ್ಮ ಆಲೋಚನೆಗಳ ಬಗ್ಗೆ ಜಾಗರೂಕರಾಗಿರಿ. ಉದ್ಯೋಗ ರಂಗದಲ್ಲಿ ಸಂಘರ್ಷವನ್ನು ತಪ್ಪಿಸಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ನಿಮ್ಮ ಸುತ್ತಲಿನ ಕೆಟ್ಟ ಪರಿಸ್ಥಿತಿಯನ್ನು ಮರೆಮಾಡಬಲ್ಲ ಆಂತರಿಕ ಶಕ್ತಿ ನಿಮಗಿದೆ. ಈ ಬಗ್ಗೆ ಆಳವಾಗಿ ಯೋಚಿಸಿ. ಎಲ್ಲಾ ಸಮಯದಲ್ಲೂ ಮೌನದಿಂದ ಇರುವುದು ಸರಿಯಾದ ಮಾರ್ಗವಲ್ಲ. ನಿಮ್ಮ ಅಂತಃಪ್ರಜ್ಞೆ ನಿಮ್ಮ ಆಲೋಚನೆಗಳಿಗಿಂತ ಶಕ್ತಿಯುತವಾಗಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಲ್ಲದೇ ಇರುವುದರ ಬಗ್ಗೆ ಯೋಚಿಸುವುದಕ್ಕಿಂತ ನಿಮ್ಮ ಬಳಿ ಇರುವುದರ ಬಗ್ಗೆ ಸಂತಸದಿಂದ ಇರಿ. ಇಂದು ನೀವು ನಿರೀಕ್ಷಿಸದ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ. ಉದ್ಯೋಗ ರಂಗದಲ್ಲಿ ನಿಮ್ಮ ಕೆಲಸಗಳಿಗೆ ಮೆಚ್ಚುಗೆ ದೊರೆಯಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಬೇಡದ ವಿಚಾರಗಳ ಬಗ್ಗೆ ಚಿಂತಿಸುವುದನ್ನು ಬಿಟ್ಟು ಮುಖ್ಯ ವಿಷಯಗಳ ಬಗ್ಗೆ ಗಮನ ಕೇಂದ್ರೀಕರಿಸಿ. ನಿಮ್ಮ ಆಲೋಚನೆಗಳು ಬೇರೆಯವರನ್ನು ನಿಮ್ಮತ್ತ ಆಕರ್ಷಿಸುತ್ತದೆ. ಸಂಬಂಧಗಳಲ್ಲಿ ಮಧುರತೆಯನ್ನು ಕಾಪಾಡಿಕೊಳ್ಳಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ವೈಯಕ್ತಿಕ ಬೆಳವಣಿಗೆಗಳ ಬಗ್ಗೆ ಆಲೋಚಿಸಿ. ಹಳೆಯ ಮಾದರಿಗಳನ್ನು ಬಿಟ್ಟು ಸಮಯಕ್ಕೆ ತಕ್ಕಂತೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ. ಹೊಸ ಕೆಲಸ ಕಾರ್ಯಗಳಲ್ಲಿ ಧೈರ್ಯದಿಂದ ಮುಂದುವರೆಯುವುದು ಶುಭ ಫಲಗಳನ್ನು ತರಲಿದೆ. ನಿಮ್ಮ ಪ್ರಾಮಾಣಿಕತೆಯೇ ಜೀವನದ ಯಶಸ್ಸಿನ ಗುಟ್ಟು.
ಧನು ರಾಶಿಯವರ ಭವಿಷ್ಯ (Sagittarius Horoscope):
ನಿಮ್ಮ ಶಾಂತ ಸ್ವಭಾವವೇ ಇಂದು ನಿಮಗೆ ನೋವುಂಟು ಮಾಡಬಹುದು. ಆದರೆ, ನಿಮ್ಮ ತಾಣವನ್ನು ಬಿಟ್ಟುಕೊಡುವ ತಪನ್ನು ಮಾಡಬೇಡಿ. ಸೌಮ್ಯ ಮಾತಿನಿಂದ ಕುಟುಂಬದಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ಎಂತದ್ದೇ ದೊಡ್ಡ ಸಮಸ್ಯೆಗಳನ್ನು ಸಹ ಬಗೆಹರಿಸುವಿರಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಕೆಲಸದ ಒತ್ತಡದ ನಡುವೆ ಇಂದು ನಿಮ್ಮ ಬಗ್ಗೆ ಕಾಳಜಿವಹಿಸಿ. ಕಷ್ಟಪಟ್ಟು ಕೆಲಸ ಮಾಡುವುದರ ಜೊತೆಗೆ ವಿಶ್ರಾಂತಿಯನ್ನು ಪಡೆಯುವುದು ಕೂಡ ಅಗತ್ಯವಾಗಿದೆ. ಇದಕ್ಕಾಗಿ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ. ಮನೆಯಲ್ಲಿ ಶಾಂತಿಯ ವಾತಾವರಣ ಇರಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ವ್ಯವಹಾರ ಸಂಬಂಧಿತ ಪ್ರಯಾಣಗಳಲ್ಲಿ ದಿಢೀರ್ ಧನಲಾಭವನ್ನು ಕಾಣುವಿರಿ. ಕೆಲಸದಲ್ಲಿ ಹೊಸತನಕ್ಕೆ ಒಗ್ಗೂಡಿಕೊಳ್ಳುವುದು ಲಾಭದಾಯಕವಾಗಿದೆ. ಕುಟುಂಬದಲ್ಲಿ ಮೂಡಿದ್ದ ಭಿನ್ನಾಭಿಪ್ರಾಯಗಳನ್ನು ನಿವಾರಿಸಲು ಶಾಂತಿಯಿಂದ ಕುಳಿತು ಮಾತನಾಡಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಶಾಂತ ಚಿತ್ತತೆಯಿಂದ ಕುಳಿತು ಆತ್ಮಾವಲೋಕನ ಮಾಡುವುದರಿಂದ ನಿಮ್ಮ ಸುತ್ತಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ನಿಮ್ಮ ತಪ್ಪಿನ ಅರಿವಾದಾಗ ಕ್ಷಮೆ ಕೇಳುವುದರಿಂದ ಅರ್ಧ ಸಮಸ್ಯೆ ಬಗೆಹರಿಯಲಿವೆ. ನಿಮ್ಮವರೊಂದಿಗೆ ಬಿಗುಮಾನ ಬಿಟ್ಟು ಮಾತನಾಡಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.