ದಿನಭವಿಷ್ಯ 26-03-2025: ಬುಧವಾರದಂದು ಧನಿಷ್ಠಾ ನಕ್ಷತ್ರದಲ್ಲಿ ಸಿದ್ಧ ಯೋಗ, ಈ ರಾಶಿಯವರಿಗೆ ಕನಸು ನನಸಾಗುವ ಸಮಯ

Today Horoscope 26th March 2025: ಈ ದಿನ ಬುಧವಾರ ಧನಿಷ್ಠಾ ನಕ್ಷತ್ರ, ಸಿದ್ಧ ಯೋಗ, ಕೌಲವ ಕರಣ. ಇಂದಿನ  ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Mar 26, 2025, 08:12 AM IST
  • ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ
  • ದ್ವಾದಶಿ ತಿಥಿಯ ಈ ದಿನ ಬುಧವಾರ ಧನಿಷ್ಠಾ ನಕ್ಷತ್ರ, ಸಿದ್ಧ ಯೋಗ, ಕೌಲವ ಕರಣ.
  • ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.
ದಿನಭವಿಷ್ಯ 26-03-2025: ಬುಧವಾರದಂದು ಧನಿಷ್ಠಾ ನಕ್ಷತ್ರದಲ್ಲಿ ಸಿದ್ಧ ಯೋಗ, ಈ ರಾಶಿಯವರಿಗೆ ಕನಸು ನನಸಾಗುವ ಸಮಯ

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ ಮಾಸ, ಕೃಷ್ಣ ಪಕ್ಷ, ದ್ವಾದಶಿ ತಿಥಿಯ ಈ ದಿನ ಬುಧವಾರ ಧನಿಷ್ಠಾ ನಕ್ಷತ್ರ, ಸಿದ್ಧ ಯೋಗ, ಕೌಲವ ಕರಣ. ಇಂದಿನ ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಇಂದು ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ನಿರೀಕ್ಷಿಸಬಹುದಾದ ದಿನ. ವೃತ್ತಿಪರ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ಕ್ಲಿಷ್ಟಕರವಾದ ಕೆಲಸವನ್ನೂ ಸುಲಭವಾಗಿ ಪೂರ್ಣಗೊಳಿಸುವಿರಿ. ಯಾವುದೇ ಉದ್ವಿಗ್ನತೆಯ ಸಂದರ್ಭದಲ್ಲಿ ಸಮಾಧಾನದಿಂದ ಇರುವುದು ಒಳಿತು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ಸಣ್ಣ ವಿಹಾರವು ನಿಮ್ಮ ಒತ್ತಡವನ್ನು ನಿವಾರಿಸಬಹುದು. ಮನೆ ಬದಲಾವಣೆ ಬಗ್ಗೆ ಚಿಂತಿಸಬಹುದು. ಸಾಲಗಳನ್ನು ನಿರ್ವಹಿಸುವಲ್ಲಿ ತಾಳ್ಮೆ ಪ್ರಮುಖವಾಗಿದೆ. ದೀರ್ಘಾವಧಿಯ ಆರ್ಥಿಕ ಸ್ಥಿರತೆಯನ್ನು ಖಚಿತಪರಿಸಿಕೊಳ್ಳಿ. ವೃತ್ತಿ ಬದುಕಿನಲ್ಲಿ ದೊಡ್ಡದಾದ ಏನನ್ನಾದರೂ ಯೋಚಿಸಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ನಿಮ್ಮ ಶಕ್ತಿ ಸ್ಥಿರವಾಗಿರುತ್ತದೆ. ಆದರೆ, ಹಠಾತ್ ಖರ್ಚು ನಿಮ್ಮ ಆರ್ಥಿಕ ಸ್ಥಿತಿಯನ್ನು ತಲ್ಲಣಗೊಳಿಸಬಹುದು. ಈ ಬಗ್ಗೆ ಜಾಗರೂಕರಾಗಿರಿ. ಕೌಟುಂಬಿಕ ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಭಾವನಾತ್ಮಕವಾಗಿ ಮೋಸ ಹೋಗುವುದನ್ನು ತಪ್ಪಿಸಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಚಿಂತನಶೀಲ ಆರ್ಥಿಕ ನಿರ್ಧಾರಗಳು ಭರವಸೆಯ ಹೂಡಿಕೆಗೆ ಅವಕಾಶ ನೀಡಬಹುದು. ಹಳೆಯ ಪರಿಚಯಸ್ಥರಿಂದ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಪ್ರಯಾಣವು ಲಾಭದಾಯಕವಾಗಿರುತ್ತದೆ. ಆಸ್ತಿ ವಿಚಾರದಲ್ಲಿ ನಿಮ್ಮ ಕನಸು ನನಸಾಗಲಿದೆ. 

ಇದನ್ನೂ ಓದಿ- 2027ರವರೆಗೆ ಈ ರಾಶಿಯವರಿಗೆ ಶನಿ ಬಲ: ಕಷ್ಟಕೊಡುವವನಿಂದಲೇ ಅದೃಷ್ಟ, ಪ್ರತಿ ಹೆಜ್ಜೆಗೂ ಕೈಹಿಡಿದು ಕಾಪಾಡುವ ಶನಿ ಮಹಾತ್ಮ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ಪೋಷಕಾರ ಸಲಹೆ ಸೂಚನೆಗಳನ್ನು ಅನುಸರಿಸಿದರೆ ಜೀವನದಲ್ಲಿ ಮುಂದೆ ಬರುವಿರಿ. ಪ್ರಯಾಣದ ವೇಳೆ ಜಾಗರೂಕರಾಗಿರಿ. ರಿಯಲ್ ಎಸ್ಟೇಟ್ ಹೂಡಿಕೆಯು ಭವಿಷ್ಯದಲ್ಲಿ ಲಾಭವನ್ನು ನೀಡಲಿದೆ. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರಲಿದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಇಂದು ಯಾವುದೇ ರೀತಿಯ ಹೊಸ ಹೂಡಿಕೆಗಳನ್ನು ತಪ್ಪಿಸಿ. ವೃತ್ತಿಪರ ರಂಗದಲ್ಲಿ ಉತ್ಪಾದಕತೆಗೆ ಒತ್ತು ನೀಡುವುದು ಒಳಿತು. ಇದು ನಿಮ್ಮನ್ನು ಉದ್ಯೋಗದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯಲಿಡೇಳ್ ಕುಟುಂಬದೊಂದಿಗೆ ಪ್ರವಾಸಕ್ಕೆ ಯೋಚಿಸಬಹುದು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಮನೆಯಲ್ಲಿ ಹಿರಿಯರೊಂದಿಗೆ ಕುಳಿತು ಮಾತನಾಡುವುದರಿಂದ ಮನಸ್ಸಿಗೆ ಸಂತೋಷ ದೊರೆಯಲಿದೆ. ಆಸ್ತಿ ಹೂಡಿಕೆಯಿಂದ ದೀರ್ಘಾವಧಿಯಲ್ಲಿ ಲಾಭ ಗಳಿಸಬಹುದು. ಭಾವನಾತ್ಮಕ ಸ್ಥಿರತೆಯೂ ಇಂದು ಅರ್ಥಪೂರ್ಣ ಸಂಪರ್ಕಗಳನ್ನು ರೂಪಿಸಲು ಅನುವು ಮಾಡಿಕೊಡಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇಂದು ದಿನವಿಡೀ ಸಕ್ರಿಯವಾಗಿ ಪಾದರಸದಂತೆ ಕಾರ್ಯನಿರ್ವಹಿಸುವ ನಿಮ್ಮ ಶಕ್ತಿಗೆ ಯಾರೇ ಆದರೂ ಮಾರುಹೋಗಲಿದ್ದಾರೆ. ಹೊಸ ಆದಾಯದ ಮೂಲಗಳು ಹೊರಹೊಮ್ಮುವ ಸಂಭವವಿದೆ. ಬಡ್ತಿ ಜೊತೆಗೆ ವೇತನ ಹೆಚ್ಚಳ, ಬೋನಸ್ ನಿಮ್ಮ ನಿರೀಕ್ಷೆಗೂ ಮೊದಲೇ ಕೈ ಸೇರಲಿದೆ. 

ಇದನ್ನೂ ಓದಿ- ಮಾರ್ಚ್ 29ರಂದು ರೂಪುಗೊಳ್ಳಲಿರುವ ಶುಕ್ರಾದಿತ್ಯ ರಾಜ್ಯಯೋಗ; ಈ 3 ರಾಶಿಯ ಜನರು ಶ್ರೀಮಂತರಾಗುತ್ತಾರೆ!

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮ್ಮ ತೀಕ್ಷ್ಣವಾದ ಗಮನವು ನಿರೀಕ್ಷೆಗಿಂತ ಹೆಚ್ಚಿನದನ್ನು ಸಾಧಿಸಲು ನಿಮಗೆ ಸಹಾಯಕವಾಗಲಿದೆ. ಒಡಹುಟ್ಟಿದವರೊಂದಿಗೆ ಆಹ್ಲಾದಕರ ಸಂಜೆ ನಿಮಗಾಗಿ ಕಾದಿದೆ. ಮನೆಯಲ್ಲಿ ಹೃದಯಸ್ಪರ್ಶಿ ವಾತಾವರಣ ಇರಲಿದೆ. ಹಣಕಾಸಿನ ಸ್ಥಿತಿ ಮೊದಲಿಗಿಂತ ಉತ್ತಮಗೊಳ್ಳಲಿದೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮ್ಮ ಸಹಿಷ್ಣುತೆಯ ಭಾವನೆಯೇ ನಿಮ್ಮನ್ನು ಆಯಾಸದ ಭಾವನೆಯಿಲ್ಲದೆ ಸಕ್ರಿಯವಾಗಿರಲು ಕೀಲಿ ಆಗಿದೆ. ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯನಿರ್ವಹಿಸುವುದು ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ವ್ಯವಹಾರ ಸಂಬಂಧಿತ ಪ್ರಯಾಣವು ಮಿಶ್ರಫಲಗಳನ್ನು ನೀಡಬಹುದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಆರೋಗ್ಯದ ದೃಷ್ಟಿಯಿಂದ ಆಹಾರದ ಬಗ್ಗೆ ವಿಶೇಷ ಗಮನವಹಿಸಿ. ಯಾವುದೇ ರೀತಿಯ ಆರ್ಥಿಕ ನಿರ್ಧಾರ ಕೈಗೊಳ್ಳುವ ಮೊದಲು ಮನೆಯವರೊಂದಿಗೆ ಮಾತುಕತೆ ಅಗತ್ಯವಾಗಿದೆ. ಕುಟುಂಬದ ಆಸ್ತಿ ನಿರ್ಧಾರಕ್ಕೆ ಕಾನೂನು ತಜ್ಞರ ಸಲಹೆ ಪಡೆಯುವುದು ಉತ್ತಮ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಇಂದು ಆರ್ಥಿಕ ಸ್ಥಿತಿ ಸ್ವಲ್ಪ ಹಾಡಗೆದಬಹುದು. ಉದ್ಯೋಗದಲ್ಲಿ ಪ್ರಬಲವಾಗಿ ಉಳಿಯುವ ನೀವು  ಮೇಲಾಧಿಕಾರಿಗಳಿಂದ ಮೆಚ್ಚುಗೆ ಗಳಿಸುವಿರಿ.ಶೈಕ್ಷಣಿಕವಾಗಿ, ಪ್ರಗತಿ ಕಾಣುವ ದಿನ. ಕಲಿಕೆ ಮತ್ತು ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಿ. ಕುಟುಂಬದೊಂದಿಗೆ ಆಹ್ಲಾದಕರ ವಿಹಾರ ಸಾಧ್ಯತೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News