ದಿನಭವಿಷ್ಯ 28-03-2025: ಶುಕ್ರವಾರದಂದು ಶುಕ್ಲ ಯೋಗ, ಈ ರಾಶಿಯವರಿಗೆ ಅದೃಷ್ಟ, ಲಕ್ಷ್ಮಿಕಟಾಕ್ಷ

Today Horoscope 28th March 2025: ಶುಕ್ರವಾರದ ಈ ದಿನ ಪೂ.ಭಾ. ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Mar 28, 2025, 08:17 AM IST
  • ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ, ಕೃಷ್ಣ ಪಕ್ಷ, ಚತುರ್ದಶಿ ತಿಥಿ
  • ಶುಕ್ರವಾರದ ಈ ದಿನ ಪೂ.ಭಾ. ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ.
  • ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರಿಗೆ ಏನು ಫಲ ತಿಳಿಯಿರಿ.
ದಿನಭವಿಷ್ಯ 28-03-2025:  ಶುಕ್ರವಾರದಂದು ಶುಕ್ಲ ಯೋಗ, ಈ ರಾಶಿಯವರಿಗೆ ಅದೃಷ್ಟ, ಲಕ್ಷ್ಮಿಕಟಾಕ್ಷ

Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಫಾಲ್ಗುಣ, ಕೃಷ್ಣ ಪಕ್ಷ, ಚತುರ್ದಶಿ ತಿಥಿ, ಶುಕ್ರವಾರದ ಈ ದಿನ ಪೂ.ಭಾ. ನಕ್ಷತ್ರ, ಶುಕ್ಲ ಯೋಗ, ವಿಷ್ಟಿ ಕರಣ. ಇಂದು ಮೇಷದಿಂದ ಮೀನ ರಾಶಿಯವರೆಗೆ ಯಾರಿಗೆ ಏನು ಫಲ ತಿಳಿಯಿರಿ. 

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ದೊಡ್ಡ ಗುರಿ ಸಾಧನೆಗೆ ಶ್ರದ್ಧೆಯಿಂದ ಶ್ರಮವಹಿಸಿ ಖಂಡಿತ ನಿರೀಕ್ಷಿತ ಫಲ ಡ್ರೆಯುತ್ತದೆ. ಕೆಲಸದ ಸ್ಥಳದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿರುತ್ತದೆ. ಕುಟುಂಬ ಸದಸ್ಯರೊಂದಿಗೆ ಹೊರ ಹೋಗಲು ಯೋಜಿಸಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಆಡಳಿತಾತ್ಮಕ ಚಟುವಟಿಕೆಗಳಲ್ಲಿ ವ್ಯವಸ್ಥಿತ ಸಮತೋಲನವನ್ನು ಕಾಯ್ದುಕೊಳ್ಳುತ್ತೀರಿ. ಮನೆಯಲ್ಲಿ ಸೌಕರ್ಯ, ಸಂಪನ್ಮೂಲಗಳು ಹೆಚ್ಚಾಗಳಿವೆ. ಪೂರ್ವಿಕರ ಆಸ್ತಿಯಿಂದ ಲಾಭವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರಶಂಸಿಸಲಾಗುತ್ತದೆ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಇಂದು ಅದೃಷ್ಟದ ಬಲದಿಂದ ಹಿಡಿದ ಕೆಲಸಗಳಲ್ಲಿ ಜಯ ಸಾಧಿಸುವಿರಿ. ವಿವಿಧ ಯೋಜನೆಗಳಲ್ಲಿ ಪ್ರಗತಿ ಕಂಡು ಬರಲಿದೆ. ನೆಟ್ವರ್ಕ್ ವಿಸ್ತರಿಸುವಲ್ಲಿ ಯಶಸ್ವಿಯಾಗುವಿರಿ. ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ವೈಯಕ್ತಿಕ ವಿಷಯಗಳಲ್ಲಿ ಆತುರದ ನಿರ್ಧಾರಗಳನ್ನು ತಪ್ಪಿಸಿ. ಸುಸಂಘಟಿತ ದಿನಚರಿಯನ್ನು ಕಾಪಾಡಿಕೊಳ್ಳಿ. ಆರೋಗ್ಯ ಸೂಚಕಗಳನ್ನು ನಿರ್ಲಕ್ಷಿಸಬೇಡಿ. ವ್ಯವಹಾರದಲ್ಲಿ ಜಾಗರೂಕರಾಗಿರಿ. ಅನಿರೀಕ್ಷಿತ ಘಟನೆಗಳಿಗೆ ಮಾನಸಿಕವಾಗಿ ಸಿದ್ಧರಾಗಿರಿ. 

ಇದನ್ನೂ ಓದಿ- 30ವರ್ಷಗಳ ಬಳಿಕ ಶನಿ ಅಮಾವಾಸ್ಯೆ ದಿನವೇ ಕರ್ಮಫಲದಾತನ ಸಂಚಾರ: ಈ ರಾಶಿಯವರಿಗೆ ಬಡ್ತಿ, ಆದಾಯ ಹೆಚ್ಚಳ ಸುವರ್ಣ ದಿನ ಆರಂಭ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಸಹಯೋಗದ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಾನಸಿಕ ಬಂಧಗಳು ಬಲಗೊಳ್ಳುತ್ತವೆ. ಅಗತ್ಯ ಗುರಿಗಳನ್ನು ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಉದ್ಯೋಗದಲ್ಲಿ ದಕ್ಷತೆ,ನಾಯಕತ್ವ ಸುಧಾರಿಸುತ್ತದೆ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ವೃತ್ತಿಪರರು ನಿಮ್ಮ ಯೋಜನೆಗಳಿಗೆ ಅನುಸಾರವಾಗಿ ಕೆಲಸ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಬುದ್ದಿವಂತಿಕೆಯಿಂದ ಸವಾಲುಗಳನ್ನು ನಿರ್ವಹಿಸಿ. ಹೊಸ ಜನರಲ್ಲಿ ಆತಿಯಾದ ನಂಬಿಕೆ ಇಡುವುದನ್ನು ತಪ್ಪಿಸಿ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಇಂದು ಆಪ್ತರೊಂದಿಗೆ ಸಭೆ, ಸಮಾಲೋಚನೆಗಳು ಹೆಚ್ಚು ಲಾಭದಾಯಕವಾಗಿದೆ. ತಾಯಿ ಲಕ್ಷ್ಮಿ ಕೃಪೆಯಿಂದ ವ್ಯವಹಾರದಲ್ಲಿ ಭರ್ಜರಿ ಲಾಭವನ್ನು ಗಳಿಸುವಿರಿ.  ನಿಮಗೆ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಕೌಟುಂಬಿಕ ವಿಷಯಗಳಲ್ಲಿ ನೆಮ್ಮದಿ ಇರುತ್ತದೆ. ನೀವು ಬಯಸಿದ್ದನ್ನು ಪಡೆಯುವ ಸುಸಮಯ, ಭೌತಿಕ ಸುಖ-ಸೌಕರ್ಯಗಳು ಹೆಚ್ಚಾಗುತ್ತವೆ. ಆಸ್ತಿ, ವಾಹನ ಖರೀದಿಸುವ ನಿಮ್ಮ ಆಸೆಗೆ ಲಕ್ಷ್ಮಿ ದಯೆ ತೋರುವಳು. 

ಇದನ್ನೂ ಓದಿ- ಯುಗಾದಿ ಭವಿಷ್ಯ 2025: ಬೇವು-ಬೆಲ್ಲದ ಹಬ್ಬ ದ್ವಾದಶ ರಾಶಿಗಳಿಗೆ ಏನು ಫಲ ನೀಡಲಿದೆ... ಯಾರಿಗೆ ಸಿಹಿ-ಯಾರಿಗೆ ಕಹಿ 

ಧನು ರಾಶಿಯವರ ಭವಿಷ್ಯ (Sagittarius Horoscope):  
ಇಂದು ಸಂವಹನಕ್ಕೆ ಆದ್ಯತೆ ನೀಡಿ. ಇದು ಸಾಮಾಜಿಕ ವಲಯದಲ್ಲಿ ಒಳ್ಳೆಯ ಸುದ್ದಿಗಳ ವಿನಿಮಯಕ್ಕೆ ದಾರಿಯಾಗಲಿದೆ. ವ್ಯವಹಾರವು ಸ್ಥಿರವಾಗಿರುತ್ತದೆ. ಪ್ರಮುಖ ವಿಚಾಗಳಲ್ಲಿ ನಿರ್ಧಾರ ಕೈಗೊಳುವ ಮೊದಲು ಜವಾಬ್ದಾರಿಯುತ ವ್ಯಕ್ತಿಗಳಿಂದ ಸಲಹೆ ಪಡೆಯಿರಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಕೆಲಸದಲ್ಲಿ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಜೀವನಮಟ್ಟವನ್ನು ಸುಧಾರಿಸುವತ್ತ ಗಮನಹರಿಸಿ. ಮನೆಗೆ ಅತಿಥಿಗಳ ಆಗಮನವಾಗಲಿದೆ. ಉಳಿತಾಯದತ್ತ ಗಮನ ಹರಿಸುವುದರಿಂದ ಆರ್ಥಿಕ ಸ್ಥಿರತೆ ಬಲಗೊಳ್ಳುತ್ತದೆ. ಪ್ರಮುಖ ಚರ್ಚೆಗಳಲ್ಲಿ ಜಯ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಸೃಜನಶೀಲತೆಯಿಂದ ಕೆಲಸ ಮಾಡುವುದು ಲಾಭದಾಯಕವಾಗಿದೆ. ದೀರ್ಘಾವಧಿಯ ಯೋಜನೆಗಳು ಯಶಸ್ವಿಯಾಗಲಿವೆ. ಜೀವನದಲ್ಲಿ ಸಕಾರಾತ್ಮಕತೆ ಮೇಲುಗೈ ಸಾಧಿಸಲಿದೆ. ಆಕರ್ಷಕ ಪ್ರಸ್ತಾಪಗಳನ್ನು ಪಡೆಯುವಿರಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ವೃತ್ತಿ-ವ್ಯವಹಾರಗಳಲ್ಲಿ ಚಟುವಟಿಕೆಗಳು ಹೆಚ್ಚಾಗಲಿವೆ. ವಿದೇಶ ವ್ಯವಹಾರಗಳು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿವೆ. ವಾಣಿಜ್ಯ ವಿಷಯಗಳಲ್ಲಿ ನೀವು ಜಾಣತನದಿಂದ ಇರದಿದ್ದರೆ ಸುಲಭವಾಗಿ ಮೋಸಹೋಗುವ ಸಂಭವವಿದೆ. ಅನಿರೀಕ್ಷಿತ ಸಂದರ್ಭಗಳನ್ನು ಜಾಣ್ಮೆಯಿಂದ ತಹಬದಿಗೆ ತರುವುದು ಅಗತ್ಯ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News