ದಿನಭವಿಷ್ಯ 29-04-2025: ಮಂಗಳವಾರದಂದು ಸೌಭಾಗ್ಯ ಯೋಗ, ಈ ರಾಶಿಯವರಿಗೆ ಬಂಪರ್ ಆದಾಯ

Today Horoscope 29th April 2025: ಮಂಗಳವಾರದ ಈ ದಿನ ಕೃತಿಕಾ ನಕ್ಷತ್ರ ಸೌಭಾಗ್ಯ ಯೋಗ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 29, 2025, 07:51 AM IST
  • ಮಂಗಳವಾರದ ಈ ದಿನ ದ್ವಿತೀಯ ತಿಥಿ
  • ಕೃತಿಕಾ ನಕ್ಷತ್ರ ಸೌಭಾಗ್ಯ ಯೋಗ
  • ಮೇಷದಿಂದ ಮೀನ ರಾಶಿಯವರೆಗೆ ಇಂದಿನ ಭವಿಷ್ಯ ಹೇಗಿದೆ
ದಿನಭವಿಷ್ಯ 29-04-2025: ಮಂಗಳವಾರದಂದು ಸೌಭಾಗ್ಯ ಯೋಗ, ಈ ರಾಶಿಯವರಿಗೆ ಬಂಪರ್ ಆದಾಯ

Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ಗ್ರೀಷ್ಮ ಋತು, ವೈಶಾಖ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಮಂಗಳವಾರದ ಈ ದಿನ ಕೃತಿಕಾ ನಕ್ಷತ್ರ, ಸೌಭಾಗ್ಯ ಯೋಗ, ತೈತಿಲ ಕರಣ. ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ತಿಳಿಯಿರಿ.  

Add Zee News as a Preferred Source

ಮೇಷ ರಾಶಿಯವರ ಭವಿಷ್ಯ (Aries Horoscope):  
ಉದ್ಯೋಗಸ್ಥರಿಗೆ ಉನ್ನತ ಸ್ಥಾನಮಾನ ಪ್ರಾಪ್ತಿಯಾಗಬಹುದು. ಯಾವುದೇ ಕೆಲಸದಲ್ಲಿ ನಿಯಮಗಳನ್ನು ಮೀರಬೇಡಿ. ಪ್ರೀತಿಪಾತ್ರರೊಂದಿಗೆ ಆಹ್ಲಾದಕರ ಸಮಯವನ್ನು ಆನಂದಿಸುವಿರಿ. ಕೆಲಸದ ನಡುವೆ ಸ್ವಲ್ಪ ವಿರಾಮ ತೆಗೆದುಕೊಳ್ಳಿ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಇಂದು ತಾರ್ಕಿಕತೆ ಮತ್ತು ಸೃಜನಶೀಲತೆ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಿ. ದಿನಪೂರ್ತಿ ಉತ್ತಮ ಕೆಲಸದಲ್ಲಿ ತೊಡಗುವಿರಿ. ಸಂಬಂಧಗಳಲ್ಲಿ ಮೂಡಿದ್ದ ಬಿರುಕು ತಹಬದಿಗೆ ಬರಲಿದೆ. ಕೆಲವು ವಿಶೇಷ ವ್ಯಕ್ತಿಗಳೊಂದಿಗೆ ಸುಲಭ ಸಂಪರ್ಕ ಸಾಧಿಸುವಿರಿ. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ನಿಮ್ಮ ಮನಸ್ಸಿಗೆ ಸರಿ ಎನಿಸಿದ್ದನ್ನು ಮಾತ್ರ ಮಾಡಿ. ಇಲ್ಲದಿದ್ದರೆ ಜೀವನದಲ್ಲಿ ಏರಿಳಿತಗಳು ಹೆಚ್ಚಾಗಬಹುದು. ಪ್ರಣಯದ ದೃಷ್ಟಿಯಿಂದ ಇದು ಉತ್ತಮ ಸಮಯವಲ್ಲ. ನಿಮ್ಮ ಸಂಬಂಧಗಳಲ್ಲಿ ಮೂಡಿರುವ ಸಮಸ್ಯೆಗಳನ್ನು ಜಾಗರೂಕರಾಗಿ ಪರಿಹರಿಸಿ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ದಿನ. ಕೆಲಸದಲ್ಲಿ ನಿಮ್ಮ ಪರಿಶ್ರಮವನ್ನು ಗುರುತಿಸಿ ಪ್ರಶಂಸೆಯನ್ನು ನೀಡುವರು. ನಿಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವುದು ಲಾಭದಾಯಕವಾಗಿದೆ. 

ಇದನ್ನೂ ಓದಿ- ಅಕ್ಷಯ ತೃತೀಯ ಬೆನ್ನಲ್ಲೇ ಈ ರಾಶಿಯವರಿಗೆ ಮಹಾಲಕ್ಷ್ಮೀ ಯೋಗ, ಕುಬೇರನ ದಯೆಯಿಂದ ತುಂಬಲಿದೆ ಖಜಾನೆ, ಸ್ವಂತ ಮನೆ ಖರೀದಿ ಯೋಗ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ನಿಮ್ಮ ವೈಯಕ್ತಿಕ ಜೀವನವನ್ನು ವೃತ್ತಿ ಬದುಕಿನೊಂದಿಗೆ ಬೆಸೆಯುವುದು ಸೂಕ್ತವಲ್ಲ. ಅತಿಯಾದ ಕೆಲಸದಿಂದಾಗಿ ಒತ್ತಡ ಉಂಟಾಗಬಹುದು. ದೀರ್ಘ ಸಮಯದಿಂದ ಕಾರ್ಯನಿರ್ವಹಿಸುತ್ತಿದ್ದ ಯೋಜನೆಯಲ್ಲಿ ಯಶಸ್ಸು ಗಳಿಸುವಿರಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮ್ಮ ಬದುಕಿನ ಪ್ರಮುಖ ಘಟ್ಟದಲ್ಲಿ ಒಳ್ಳೆಯ ತಿರುವನ್ನು ಪಡೆಯುವಿರಿ. ಅನರ್ಹರೊಂದಿಗೆ ನಿಮ್ಮ ಸಮಯ ಮತ್ತು ಹಣವನ್ನು ವ್ಯರ್ಥ ಮಾಡಬೇಡಿ. ಜೀವನದಲ್ಲಿ ನಕಾರಾತ್ಮಕ ವಿಷಯಗಳನ್ನು ಬದಿಗೊತ್ತಿ ಮುನ್ನಡೆಯಿರಿ. ಇದರಿಂದ ಎಲ್ಲವೂ ಒಳ್ಳೆಯದೇ ಆಗಲಿದೆ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮ್ಮ ಆಂತರಿಕ ಸಾಮರ್ಥ್ಯಗಳನ್ನು ಅನ್ವೇಷಿಸಲು ಮತ್ತು ಅಭಿವೃದ್ಧಿಪಡಿಸಲು ಧ್ಯಾನ ಅತ್ಯುತ್ತಮ ಮಾರ್ಗವಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಹೆಚ್ಚಳಿದೆ. ಸೃಜನಶೀಲ ಸ್ನೇಹಿತರು ಮತ್ತು ಸಹೋದ್ಯೋಗಿಗಳೊಂದಿಗೆ ಬೆರೆಯುವುದು ಲಾಭದಾಯವಾಗಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ನಿಮ್ಮ ಖರ್ಚುಗಳಿಗೆ ಕಡಿವಾಣ ಹಾಕಿ ಬಜೆಟ್ ಗೆ ತಕ್ಕಂತೆ ಯೋಜನೆಗಳನ್ನು ರೂಪಿಸಿ. ಇತರರು ಏನು ಯೋಚಿಸುವರು ಎಂಬ ಬಗ್ಗೆ ಚಿಂತಿಸದೆ ಸರಿಯಾದ ದಾರಿಯಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳಿ. ಪ್ರೀತಿ ಸಂಬಂಧಗಳು ಗಮನ ಸೆಳೆಯುತ್ತವೆ. 

ಇದನ್ನೂ ಓದಿ- Weekly Horoscope: ಲಕ್ಷ್ಮೀನಾರಾಯಣ ಯೋಗ, ಗಜಕೇಸರಿ ಯೋಗದಿಂದ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ

ಧನು ರಾಶಿಯವರ ಭವಿಷ್ಯ (Sagittarius Horoscope):  
ಸಹೋದ್ಯೋಗಿಗಳ ಮಾತಿನಿಂದ ಗೊಂದಲಕ್ಕೆ ಈಡಾಗಬೇಡಿ. ನಿಮ್ಮ ಆಲೋಚನೆಗಳನ್ನು ಬೇರೆಯವರೊಂದಿಗೆ ರಿವೀಲ್ ಮಾಡಬೇಡಿ. ಕ್ಷುಲ್ಲಕ ವಿಷಯಗಳಿಗೆ ವಾದಿಸುವುದನ್ನು ತಪ್ಪಿಸಿ. ನಿಮ್ಮ ದಾರಿಯಲ್ಲಿ ಬರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಇಂದು ಅಧಿಕಾರಿಗಳೊಂದಿಗೆ ಘರ್ಷಣೆಯನ್ನು ತಪ್ಪಿಸಿ. ಅದರಲ್ಲೂ, ಪುರುಷರು ಮಹಿಳೆಯರೊಂದಿಗೆ ಅನಗತ್ಯ ವಾದದಲ್ಲಿ ಪಾಲ್ಗೊಳ್ಳದಿರುವುದು ಒಳ್ಳೆಯದು. ಮಾತನಾಡುವಾಗ ಪದಬಳಕೆಯ ಬಗ್ಗೆ ವಿಶೇಷ ಗಮನವಿರಲಿ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಇಂದು ಕೆಲಸದಲ್ಲಿ ಸೋಮಾರಿತನವನ್ನು ತಪ್ಪಿಸಿ. ಪ್ರಮುಖ ಕೆಲಸಗಳಿಗೆ ವಿಶೇಷ ಆದ್ಯತೆ ನೀಡಿ. ಸಹೋದ್ಯೋಗಿಗಳ ಮಾತಿಗೆ ಮರುಳಾಗಬೇಡಿ. ಹಣದ ಹರಿವು ಹೆಚ್ಚಾಗುವುದರಿಂದ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ಆದರೆ, ಭವಿಷ್ಯಕ್ಕಾಗಿ ಉಳಿತಾಯ ಮಾಡಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಕುಟುಂಬದಲ್ಲಿ ಎಲ್ಲರೂ ಕುಳಿತು ಮಾತನಾಡುವಾಗ ನಿಮ್ಮ ಅಭಿಪ್ರಾಯಗಳನ್ನು ನಯವಾಗಿ ಪ್ರಸ್ತುತಪಡಿಸಿ. ಸೂಕ್ಷ್ಮ ವಿಚಾರಗಳಲ್ಲಿ ಮನೆಯ ಹಿರಿಯರ ಮಾತಿಗೆ ಕಿವಿಗೊಡಿ. ಕೆಲಸದ ವಿಚಾರದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

About the Author

Yashaswini V

ಯಶಸ್ವಿನಿ ವಿ (Yashaswini V) Zee ಕನ್ನಡ ಡಿಜಿಟಲ್ ಮಾಧ್ಯಮದ ಮೊದಲ ಪತ್ರಕರ್ತೆ. 2017 ರಿಂದ Zee ಕನ್ನಡ‌ ನ್ಯೂಸ್‌ ಡಿಜಿಟಲ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಇವರು ಪ್ರಸ್ತುತ Zee ಕನ್ನಡ ನ್ಯೂಸ್‌ನಲ್ಲಿ ಸಹಾಯಕ ಸುದ್ದಿ ಸಂಪಾದಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಇವರು ದೆಹಲಿ ಮತ್ತು ಬೆಂಗಳೂರಿನಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ಓದುಗರ ಆಸಕ್ತಿಗಳು ಮತ್ತು ಅಗತ್ಯಗಳನ್ನು ಗೌರವಿಸುತ್ತಾರೆ. ...Read More

Trending News