)
Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿ, ಬುಧವಾರದ ಈ ದಿನ ಉ.ಷಾ. ನಕ್ಷತ್ರ, ಧೃತಿ ಯೋಗ, ವಿಷ್ಟಿ ಕರಣ ಇರಲಿದೆ.
ಮೇಷ ರಾಶಿಯವರ ಭವಿಷ್ಯ (Aries Horoscope):
ಆಡಳಿತಾತ್ಮಕ ವಿಚಾರಗಳಲ್ಲಿ ಇಂದು ನಿಮ್ಮ ಪ್ರಭಾವ ಬಲಗೊಳ್ಳಲಿದೆ. ಕಾನೂನು ವಿಷಯಗಳಲ್ಲಿ ಧನಾತ್ಮಕ ಫಲ ಪಡೆಯುವಿರಿ. ಕೆಲಸದಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸುವಿರಿ. ವೃತ್ತಿಪರರಿಗೆ ಶುಭ ದಿನ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಈ ರಾಶಿಯವರಿಗೆ ಇಂದು ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ನಿರ್ದಿಷ್ಟ ಗುರಿಗಳನ್ನು ಸಾಧಿಸುವಿರಿ. ಭಾವನಾತ್ಮಕವಾಗಿ ಪ್ರಬಲರಾಗುವಿರಿ. ವಿವಿಧ ಯೋಜನೆಗಳಲ್ಲಿ ಆಕರ್ಷಕ ಪ್ರಸ್ತಾಪಗಳನ್ನು ಪಡೆಯುವಿರಿ. ದೂರದ ಊರಿಗೆ ಪ್ರಯಾಣ ಸಾಧ್ಯತೆ ಇದೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ವೈಯಕ್ತಿಕ ವಿಷಯಗಳನ್ನು ತಾಳ್ಮೆಯಿಂದ ನಿಭಾಯಿಸಿ. ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳುವ ಅವಕಾಶ ಇರಲಿದೆ. ನಿಮ್ಮ ಬದುಕಿನಲ್ಲಿ ಇಂದು ಅನಿರೀಕ್ಷಿತ ಬೆಳವಣಿಗೆಗಳು ಸಂಭವಿಸಬಹುದು. ಜವಾಬ್ದಾರಿಯುತ ವ್ಯಕ್ತಿಗಳಿಂದ ಪ್ರಭಾವಗೊಳ್ಳುವಿರಿ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಆರ್ಥಿಕ ಸ್ಥಿರತೆಯ ಜೊತೆಗೆ ಲಾಭದ ಅವಕಾಶಗಳು ಹೆಚ್ಚಾಗುತ್ತವೆ. ಹೊಸ ಆದಾಯ ಮೂಲಗಳು ಸೃಷ್ಟಿಯಾಗಲಿದ್ದು ಬಂಪರ್ ಹಣಕಾಸಿನ ಪ್ರಯೋಜನವನ್ನು ಕಾಣುವ ದಿನ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವದಿಂದ ಉತ್ತಮ ಫಲ ದೊರೆಯಲಿದೆ. ಯಾವುದೇ ಸಂದರ್ಭದಲ್ಲಿ ಹಠಾತ್ ಪ್ರತಿಕ್ರಿಯೆಯನ್ನು ತಪ್ಪಿಸಿ. ಅನುಮಾನಗಳು ಅಥವಾ ಭಯಗಳಿಗೆ ಮಣಿಯಬೇಡಿ. ಹಳೆಯ ಸ್ನೇಹಿತರ ಭೇಟಿ ಮನಸ್ಸಿಗೆ ಮುದ ನೀಡಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಆಪ್ತರೊಂದಿಗೆ ಇಂದು ಆನಂದದಾಯಕ ಕ್ಷಣಗಳನ್ನು ಆನಂದಿಸುವಿರಿ. ವೃತ್ತಿ-ವ್ಯವಹಾರದಲ್ಲಿ ಸಿಗುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ. ಸಂಬಂಧಗಳಲ್ಲಿ ಧನಾತ್ಮಕತೆ ಇರಲಿದೆ. ವೃತ್ತಿ ರಂಗದಲ್ಲಿ ನಿಮ್ಮ ಸ್ಥಾನಮಾನವನ್ನು ಭದ್ರಪಡಿಸಿಕೊಳ್ಳುವಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಕುಟುಂಬದಲ್ಲಿ ಇಂದು ಆಹ್ಲಾದಕರ ವಾತಾವರಣ ಇರುತ್ತದೆ. ಮನೆಗೆ ಅಗತ್ಯ ವಸ್ತುಗಳ ಖರೀದಿಗಾಗಿ ನೀವು ಮನಸ್ಸು ಮಾಡಬಹುದು. ಸಂಬಂಧಗಳಲ್ಲಿ ನಿಕಟತೆ ಬೆಳೆಯಲಿದೆ. ಅನುಭವಿ ವ್ಯಕ್ತಿಗಳಿಂದ ವಿಷಯಗಳನ್ನು ಕೇಳಿ ಕಲಿಯುವ ಗುಣವನ್ನು ಬೆಳೆಸಿಕೊಂಡರೆ ಉತ್ತಮ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ಸಾಮಾಜಿಕ ಸನ್ನಿವೇಶಗಳು ನಿಮ್ಮನ್ನು ಪ್ರೇರೇಪಿಸುತ್ತದೆ. ವೈಯಕ್ತಿಕ ಬದುಕಿನಲ್ಲಿ ಸುಖ-ಸಂಪತ್ತು ವೃದ್ಧಿಯಾಗಲಿದೆ. ಇಂದು ನಿಮ್ಮ ಮಾತು, ಸಂವಹನ ಕೌಶಲ್ಯ ಎಂತಹವರನ್ನೇ ಆದರೂ ಸುಲಭವಾಗಿ ಮೋದಿ ಮಾಡುತ್ತದೆ. ವೃತ್ತಿ ಜೀವನದಲ್ಲಿ ಅಧಿಕಾರಿಗಳು ನಿಮ್ಮ ಕಾರ್ಯವೈಖರಿಗೆ ಮನ್ನಣೆ ನೀಡಲಿದ್ದಾರೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಮನೆಯಲ್ಲಿ ಶುಭ ಸಮಾರಂಭಗಳು ಜರುಗಲಿವೆ. ಕುಟುಂಬಸ್ಥರ ನಡುವೆ ಪ್ರೀತಿ-ವಾತ್ಸಲ್ಯ ಹೆಚ್ಚಾಗಲಿದೆ. ಕೆಲಸದಲ್ಲಿ ತ್ವರಿತ ಬೆಳವಣಿಗೆಗಳು ಕಂಡುಬರಬಹುದು. ಸಂಬಂಧಗಳು ಬಲಗೊಳ್ಳುತ್ತವೆ. ಹಣಕಾಸಿನ ವಿಚಾರಗಳಲ್ಲಿ ಸಕಾರಾತ್ಮಕವಾದ ದಿನ.
ಮಕರ ರಾಶಿಯವರ ಭವಿಷ್ಯ (Capricorn Horoscope):
ವ್ಯವಹಾರದಲ್ಲಿ ಸರಿಯಾದ ಮಾರ್ಗವನ್ನು ಕಂಡು ಕೊಳ್ಳುವಿರಿ. ಧನಾತ್ಮಕತೆಯು ನಿಮ್ಮ ಜೀವನದ ಪ್ರತಿ ಆಯಾಮದಲ್ಲಿ ಕಂಡು ಬರಲಿದೆ. ಕೆಲಸದಲ್ಲಿ ನಿರ್ದಿಷ್ಟ ಗುರಿ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಜೀವನಶೈಲಿಯಲ್ಲಿ ಸುಧಾರಣೆಯನ್ನು ಕಾಣುವಿರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಇಂದು ವ್ಯವಹಾರಗಳಲ್ಲಿ ಜಾಗರೂಕರಾಗಿರಿ. ಕೆಲಸದಲ್ಲಿ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಹೂಡಿಕೆ ಮತ್ತು ಖರ್ಚುಗಳನ್ನು ಬ್ಯಾಲೆನ್ಸ್ ಮಾಡಿ. ಇಲ್ಲವೇ, ಆರ್ಥಿಕ ಸಮಸ್ಯೆಗಳು ಹೆಚ್ಚಾಗಬಹುದು. ವ್ಯಾಪಾರದಲ್ಲಿ ಬೇರೆಯವರನ್ನು ಕಣ್ಮುಚ್ಚಿ ನಂಬುವ ತಪ್ಪನ್ನು ಮಾಡಬೇಡಿ.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಹಣಕಾಸಿನ ವಿಷಯದಲ್ಲಿ ಅನುಕೂಲಕರವಾದ ದಿನ. ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ. ಸಮಾಜದಲ್ಲಿ ನಿಮ್ಮ ಖ್ಯಾತಿ, ಪ್ರಭಾವ ಹೆಚ್ಚಾಗಲಿದೆ. ವಿಶ್ವಾಸಾರ್ಹ ಹೂಡಿಕೆಗಳಿಂದ ಭಾರೀ ಲಾಭವನ್ನು ಗಳಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.