Somravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಸೌರ ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿಯ ಈ ದಿನ ಸೋಮವಾರ, ಅಶ್ವಿನಿ ನಕ್ಷತ್ರ ವೈಧೃತಿ ಯೋಗ, ತೈತಿಲ ಕರಣ. ಮೇಷದಿಂದ ಮೀನಾ ರಾಶಿಯವರೆಗೆ ಇಂದಿನ ದಿನ ಹೇಗಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ವ್ಯವಹಾರದಲ್ಲಿ ತ್ವರಿತ ಸುಧಾರಣೆಗಳನ್ನು ಕಾಣಬಹುದು. ಸೃಜನಶೀಲ ಕೆಲಸಗಳಲ್ಲಿ ಜಯ. ಆಧುನಿಕ ವಿಚಾರಗಳನ್ನು ಅಳವಡಿಸಿಕೊಳ್ಳುವುದರಿಂದ ಲಾಭವಾಗಲಿದೆ. ಹೊಸ ಕೆಲಸ ಆರಂಭಿಸಲು ಸಕಾಲ. ಮಾತು ಮತ್ತು ನಡವಳಿಕೆಯಿಂದ ಇತರರನ್ನು ಆಕರ್ಷಿಸುವಿರಿ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ಅಗತ್ಯ ಕೆಲಸಗಳನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸಿ. ವೈಯಕ್ತಿಕ ಸಂಬಂಧಗಳಲ್ಲಿ ಲಾಭವಿರಲಿದೆ. ಹಠಮಾರಿತಾಣ ಸ್ವಭಾವ, ದುರಹಂಕಾರವನ್ನು ತಪ್ಪಿಸಿ. ಇಲ್ಲವೇ ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಹೊಸ ಜವಾಬ್ದಾರಿಗಳು ಹೆಗಲೇರಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಹಣಕಾಸು ವಿಚಾರಗಳು ಮತ್ತು ವಾಣಿಜ್ಯ ನಿರ್ವಹಣೆಯಲ್ಲಿ ಸುಧಾರಣೆ ಕಂಡು ಬರಲಿದೆ. ಅದೃಷ್ಟದ ಬೆಂಬಲದಿಂದ ಇಂದು ಆರ್ಥಿಕ ವಿಚಾರಗಳಲ್ಲಿ ನಿಮ್ಮ ಕಾರ್ಯಕ್ಷಮತೆ ಸಕಾರಾತ್ಮಕವಾಗಿರಲಿದೆ. ವೃತ್ತಿ-ವ್ಯವಹಾರದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ನಿರ್ವಹಣಾ ಯೋಜನೆಗಳಲ್ಲಿ ಅದೃಷ್ಟ ನಿಮ್ಮೊಂದಿಗಿದ್ದು ಜಯ ಸಾಧಿಸುವಿರಿ. ಸರ್ಕಾರಿ ಮತ್ತು ಆಡಳಿತಾತ್ಮಕ ಕಾರ್ಯಗಳಲ್ಲಿ ಯಶಸ್ಸು. ಅಧಿಕಾರಿಗಳ ಬೆಂಬಲದಿಂದ ಉದ್ಯೋಗದಲ್ಲಿ ಪ್ರಗತಿಯನ್ನು ಕಾಣುವಿರಿ. ಒಟ್ಟಾರೆಯಾಗಿ ಇಂದು ಪರಿಸ್ಥಿತಿ ನಿಮಗೆ ಅನುಕೂಲಕರವಾಗಿರುತ್ತದೆ.
ಇದನ್ನೂ ಓದಿ- Weekly Horoscope: ವಿಶ್ವಾವಸು ನಾಮ ಸಂವತ್ಸರದ ಮೊದಲ ವಾರವೇ ದುರ್ಧವ ಯೋಗ, ಈ ರಾಶಿಯವರಿಗೆ ಕೈ ಹಿಡಿಯಲಿದೆ ಅದೃಷ್ಟ
ಸಿಂಹ ರಾಶಿಯವರ ಭವಿಷ್ಯ (Leo Horoscope):
ಈ ರಾಶಿಯವರಿಗೆ ಇಂದು ಅದೃಷ್ಟದ ದಿನವಾಗಿರುತ್ತದೆ. ನಿಮ್ಮ ಕೆಲಸದ ವೇಗ ಹೆಚ್ಚಾಗಲಿದೆ. ಹಣಕಾಸಿನ ಲಾಭ ಹೆಚ್ಚಾಗಿದೆ. ಆತ್ಮವಿಶ್ವಾಸ ಬಲವಾಗಿ ಉಳಿಯಲಿದೆ. ಪ್ರಮುಖ ಕೆಲಸಗಳಲ್ಲಿ ಬಲಶಾಲಿಯಾಗಿ ಉಳಿಯುವಿರಿ. ವ್ಯವಹಾರವನ್ನು ವಿಸ್ತರಿಸುವುದರಿಂದ ಲಾಭವಾಗಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಅಗತ್ಯ ಕೆಲಸಗಳಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ಇಂದು ಅಪಾಯಕಾರಿ ಉದ್ಯಮಗಳನ್ನ್ ತಪ್ಪಿಸಿ. ಅನಿರೀಕ್ಷಿತ ಖರ್ಚುಗಳು ನಿಮ್ಮನ್ನು ಬಾಧಿಸಬಹುದು. ಆರೋಗ್ಯದ ವಿಚಾರದಲ್ಲಿ ಅಸಡ್ಡೆ ತೋರಬೇಡಿ. ಅನಾವಶ್ಯಕ ವಾದ-ವಿವಾದಗಳಿಂದ ದೂರವಿರಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಸಹಯೋಗದ ಕೆಲಸಗಳಲ್ಲಿ ಅನುಕೂಲಕರ ಪರಿಸ್ಥಿತಿ ಇರಲಿದೆ. ಸಂಬಂಧಗಳಲ್ಲಿ ಮಧುರತೆ ಇರಲಿದೆ. ನಿಶ್ಚಿತ ಗುರಿಗಳನ್ನು ತಲುಪಲು ಕಠಿಣ ಪರಿಶ್ರಮದ ಅಗತ್ಯವಿದೆ. ಸಾಮೂಹಿಕ ಪ್ರಯತ್ನಗಳು ನಿಮ್ಮ ಸಾಮರ್ಥ್ಯವನ್ನು ಸುಧಾರಿಸಲಿವೆ. ವೃತ್ತಿ-ವ್ಯವಹಾರದಲ್ಲಿ ಆವೇಗ ಮುಂದುವರೆಯಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವೃತ್ತಿಪರ ವಿಷಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ. ಶ್ರದ್ಧೆ ಮತ್ತು ಶಿಸ್ತಿನಿಂದ ನಿಮ್ಮ ಹಾದಿಯನ್ನು ರೂಪಿಸಿಕೊಳ್ಳಿ. ಕಠಿಣ ಪರಿಶ್ರಮ, ಸಮರ್ಪಣೆ, ಸೇವಾ ಆಧಾರಿತ ಪ್ರಯತ್ನಗಳು ನಿಮ್ಮ ಪ್ರಗತಿಗೆ ಸಹಾಯಕವಾಗಳಿವೆ. ವ್ಯವಹಾರಗಳಲ್ಲಿ ಯಶಸ್ಸು. ವೃತ್ತಿಪರರಿಗೆ ಜವಾಬ್ಧಾರಿ ಹೆಚ್ಚಾಗಬಹುದು.
ಧನು ರಾಶಿಯವರ ಭವಿಷ್ಯ (Sagittarius Horoscope):
ಯಾವುದೇ ಪ್ರಮುಖ ವಿಚಾರಗಳಲ್ಲಿ ನಿರ್ಧಾರ ಕೈಗೊಳ್ಳುವಾಗ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ. ಕೆಲಸದಲ್ಲಿ ಸಂಯಮವನ್ನು ಕಾಯ್ದುಕೊಳ್ಳಿ. ಕಲಾತ್ಮಕ ಮತ್ತು ಸೃಜನಶೀಲ ಕೌಶಲ್ಯಗಳನ್ನು ಪರಿಷ್ಕರಿಸುತ್ತೀರಿ. ನಿಮ್ಮ ಬುದ್ದಿವಂತಿಕೆ ಮತ್ತು ಕಾರ್ಯತಂತ್ರವು ಯಶಸ್ಸಿನ ಕೀಲಿಗೈ ಆಗಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಕುಟುಂಬ ಸಂಬಂಧಿತ ವಿಚಾರಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಕಾಪಾಡಿಕೊಳ್ಳುವಿರಿ. ನಿರ್ವಹಣೆ ಮತ್ತು ಆಡಳಿತಾತ್ಮಕ ವಿಷಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಿರಿ. ವೃತ್ತಿಪರತೆಯನ್ನು ಕಾಪಾಡಿಕೊಳ್ಳಿ. ಕೆಲಸ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಬಹುದು.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ನೀವಿಂದು ವಾಣಿಜ್ಯ ಬೆಳವಣಿಕೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಮುಂದುವರೆಯುತ್ತೀರಿ. ಪ್ರಮುಖ ವಿಚಾರಗಳಲ್ಲಿ ನಿಮ್ಮ ಆಲೋಚನೆಗಳ ಬಗ್ಗೆ ಮುಕ್ತವಾಗಿ ಮಾತನಾಡುವುದು ಲಾಭದಾಯಕವಾಗಿದೆ. ಒಡಹುಟ್ಟಿದವರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದಾರೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಕುಟುಂಬದಲ್ಲಿ ಸಾಮರಸ್ಯ ಇರಲಿದೆ. ಪ್ರೀತಿಪಾತ್ರರ ಬೆಂಬಲ ದೊರೆಯಲಿದೆ. ಸಾಂಪ್ರದಾಯಿಕ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರಲಿದ್ದು, ಹಣಕಾಸಿನ ವಿಚಾರಗಳು ನಿಮ್ಮ ಪರವಾಗಿರಲಿವೆ. ನಿಮ್ಮ ಮಾತು ಮತ್ತು ಸಂವಹನದ ಪ್ರಭಾವದಿಂದ ಲಾಭಗಳಿಸುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.









