)
Shukravara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಹೇಮಂತ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ನವಮಿ ತಿಥಿ, ಶುಕ್ರವಾರದ ಈ ದಿನ ಧನಿಷ್ಠ ನಕ್ಷತ್ರ, ವೃದ್ಧಿ ಯೋಗ, ತೈತಿಲ ಕರಣ ಇರಲಿದೆ.
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಆರ್ಥಿಕವಾಗಿ ಅತ್ಯುತ್ತಮ ದಿನ. ವಾಣಿಜ್ಯ ಕೆಲಸಗಳಲ್ಲಿ ಸಾಧನೆಗೈಯುವಿರಿ. ನಿರ್ವಹಣಾ ಪ್ರಯತ್ನಗಳಲ್ಲಿ ನಿರೀಕ್ಷೆಗೂ ಮೀರಿದ ಲಾಭವನ್ನು ಕಾಣುವಿರಿ. ನಿಮ್ಮ ಪ್ರತಿಭಾ ಪ್ರದರ್ಶನಕ್ಕೆ ಎಲ್ಲರೂ ಪ್ರಭಾವಿತರಾಗುತ್ತಾರೆ. ಸಹಕಾರದ ಭಾವನೆ ಇರುತ್ತದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ವೃತ್ತಿಪರ ಚರ್ಚೆಗಳಲ್ಲಿ ಇಂದು ಉತ್ತಮ ಫಲಿತಾಂಶವನ್ನು ಪಡೆಯುವಿರಿ. ವ್ಯಕ್ತಿತ್ವವು ಪ್ರಭಾವಶಾಲಿಯಾಗಿ ಇರುತ್ತದೆ. ಕೆಲಸದಲ್ಲಿ ನಿರ್ವಹಣಾ ಪ್ರಯತ್ನಗಳು ಉತ್ತಮವಾಗಿರುತ್ತದೆ. ನಿಮ್ಮ ಗುರಿಯತ್ತ ನಿಗಾವಹಿಸಿ ಮುಂದುವರೆಯಿರಿ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಪ್ರಮುಖ ಕೆಲಸಗಳಲ್ಲಿ ಹಿರಿಯರ ಸಲಹೆ ಪಡೆದು ಮುಂದುವರೆಯುವುದು ಹೆಚ್ಚಿನ ಲಾಭವನ್ನು ಪಡೆಯಬಹುದು. ಎಲ್ಲಾ ಕ್ಷೇತ್ರದಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ವೃತ್ತಿಪರರು ಉತ್ಸುಕರಾಗಿರುವಿರಿ. ವೈಯಕ್ತಿಕ ಸಂಬಂಧಗಳು ಸುಧಾರಿಸುತ್ತವೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಧೈರ್ಯವೇ ಇಂದು ಯಶಸ್ಸಿನ ಕೀಲಿ ಎಂಬುದನ್ನು ನೆನಪಿನಲ್ಲಿಡಿ. ಕುಟುಂಬದೊಂದಿಗೆ ಆಹ್ಲಾದಕರ ಸಮಯವನ್ನು ಕಳೆಯುವಿರಿ. ವ್ಯವಹಾರಗಳಲ್ಲಿ ಅತಿಯಾದ ಉತ್ಸಾಹವನ್ನು ತಪ್ಪಿಸಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಇಂದು ಜಂಟಿ ವ್ಯವಹಾರಗಳಲ್ಲಿ ಉತ್ತಮ ಫಲ ನಿರೀಕ್ಷಿಸಬಹುದು. ಕೈಗಾರಿಕಾ ಚಟುವಟಿಕೆಗಳಲ್ಲಿ ನಿಗಾವಹಿಸಿ. ಭೂ ನಿರ್ವಹಣೆಗೆ ಸಂಬಂಧಿಸಿದಂತೆ ಶುಭ ಸುದ್ದಿಯನ್ನು ಕೇಳುವಿರಿ. ಅನಿರೀಕ್ಷಿತ ಯಶಸ್ಸು ನಿಮ್ಮ ಉತ್ಸಾಹವನ್ನು ಹೆಚ್ಚಿಸಲಿದೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ನಿಗದಿತ ಗಡುವಿನ ಒಳಗೆ ಕೆಲಸ ಮಾಡಲು ಪ್ರಯತ್ನಿಸಿ. ಹಣಕಾಸಿನ ವಿಚಾರದಲ್ಲಿ ಬೇರೆಯವರ ಬಗ್ಗೆ ಎಚ್ಚರಿಕೆಯಿಂದ ಇರಿ. ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕೆಲಸದಲ್ಲಿ ಗಂಭೀರತೆಯನ್ನು ಕಾಪಾಡಿಕೊಳ್ಳಿ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಹಿರಿಯರ ಆದೇಶ ಪಾಲಿಸುವುದು ನಿಮಗೆ ಉತ್ತಮವೆಂದು ಸಾಬೀತುಪಡಿಸುತ್ತದೆ. ವೃತ್ತಿಪರರು ಪ್ರಭಾವಶಾಲಿ ಆಗಿರುತ್ತಾರೆ. ಇಂದು ಬಹಳ ದಿನಗಳ ಬಳಿಕ ಸ್ನೇಹಿತರು ನಿಮ್ಮನ್ನು ಭೇಟಿಯಾಗಬಹುದು. ಇದು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸಲಿದೆ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಕುಟುಂಬದಲ್ಲಿ ಇಂದು ತಾಳ್ಮೆಯಿಂದಿರಿ. ಅಗತ್ಯಕ್ಕೆ ಅನುಗುಣವಾಗಿ ಹೂಡಿಕೆ ಮಾಡುವುದನ್ನು ಪರಿಗಣಿಸಿ. ಉದಾತ್ತತೆಯಿಂದ ಕೆಲಸ ಮಾಡಿದರೆ ಬಯಸಿದ ಗುರಿಯನ್ನು ಸಾಧಿಸಬಹುದು. ಭಾವನಾತ್ಮಕ ಸಮತೋಲನ ಕಾಪಾಡಿಕೊಳ್ಳಿ. ಇದು ಹೆಚ್ಚಿನ ಲಾಭವನ್ನು ನೀಡಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ನಿಮ್ಮ ಸಂವಹನ ಕ್ಷೇತ್ರದ ವ್ಯಾಪ್ತಿ ಹೆಚ್ಚಾಗಲಿದೆ. ಧೈರ್ಯ ಪರಾಕ್ರಮದಿಂದ ಮುನ್ನಡೆಯುತ್ತೀರಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಸಲಹೆಗಳನ್ನು ಹಂಚಿಕೊಳ್ಳಿ. ಪ್ರೀತಿಪಾತ್ರರೊಂದಿಗೆ ಸಾಮರಸ್ಯ ಹೆಚ್ಚಾಗಲಿದೆ.
ಮಕರ ರಾಶಿಯವರ ಭವಿಷ್ಯ (Capricorn Horoscope):
ಇಂದು ನಿಮ್ಮ ಮಾತಿನಲ್ಲಿ ಮಾಧುರ್ಯತೆ ಹೆಚ್ಚಾಗಲಿದೆ. ಸೂಕ್ಷ್ಮ ನಡವಳಿಕೆಗಳು ಹೆಚ್ಚಿನ ಲಾಭವನ್ನು ನೀಡಲಿದೆ. ಮನೆಗೆ ಇಂದು ಅತಿಥಿಗಳ ಆಗಮನವು ನಿಮ್ಮ ಸಂತೋಷವನ್ನು ಹೆಚ್ಚಿಸಲಿದೆ. ಪ್ರಮುಖ ಕೆಲಸಗಳಲ್ಲಿ ಮನೆಯವರ ಬೆಂಬಲ ಸಿಗಲಿದೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ನಿಮ್ಮ ಪ್ರಮುಖ ಗುರಿಗಳಲ್ಲಿ ಸಣ್ಣ ಯಶಸ್ಸು ದೊರೆಯಲಿದೆ. ಸಮಾಜದಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ವ್ಯವಹಾರದಲ್ಲಿ ಆಕರ್ಷಕ ಕೊಡುಗೆಗಳು ಲಭ್ಯವಾಗಲಿವೆ. ದೀರ್ಘ ಸಮಯದಿಂದ ಬಾಕಿ ಉಳಿದಿರುವ ಕೆಲಸಗಳಲ್ಲಿ ಪ್ರಗತಿ ಕಂಡು ಬರಲಿದೆ.
ಮೀನ ರಾಶಿಯವರ ಭವಿಷ್ಯ (Pisces Horoscope):
ಪ್ರಮುಖ ಕೆಲಸಗಳಲ್ಲಿ ಆತುರತೆ, ನಿರ್ಲಕ್ಷ್ಯವನ್ನು ತಪ್ಪಿಸಿ. ವೃತ್ತಿ ವ್ಯವಹಾರದಲ್ಲಿ ಲಾಭದ ಅಂಶಗಳು ಹೆಚ್ಚಾಗಲಿವೆ. ಇಂದು ಸಾಲ ಪಡೆಯುವುದನ್ನು ತಪ್ಪಿಸಿ. ನ್ಯಾಯಾಲದ ವಿಚಾರಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.