)
Mangalvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1947, ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯನ, ಸೌರ ಶರದ ಋತು, ಆಶ್ವಯುಜ ಮಾಸ, ಶುಕ್ಲ ಪಕ್ಷ, ದ್ವಿತೀಯಾ ತಿಥಿ, ಮಂಗಳವಾರದ ಈ ದಿನ ಹಸ್ತ ನಕ್ಷತ್ರ, ಬ್ರಹ್ಮ ಯೋಗ, ಬಾಲವ ಕರಣ ಇರಲಿದೆ. ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ ತಿಳಿಯೋಣ...
ಮೇಷ ರಾಶಿಯವರ ಭವಿಷ್ಯ (Aries Horoscope):
ಇಂದು ಎಂತದ್ದೇ ಸವಾಲುಗಳು ಎದುರಾದರೂ ಕೂಡ ಹಿಂಜರಿಯಬೇಡಿ. ನಿಮ್ಮ ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವವೇ ಇಂದು ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಅಪರಿಚಿತರ ಮಾತಿಗೆ ಮರುಳಾಗಬೇಡಿ. ಇದು ಭಾರೀ ನಷ್ಟಕ್ಕೆ ಕಾರಣವಾಗಬಹುದು ಎಚ್ಚರ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ವೃತ್ತಿ ಬದುಕಿನಲ್ಲಿ ಇಂದು ಉತ್ಸಾಹ ಇರಲಿದೆ. ಪ್ರೀತಿಪಾತ್ರರ ಜೊತೆ ಇರುವುದು ಪ್ರಮುಖ ಕೆಲಸಗಳಲ್ಲಿ ನಿಮ್ಮನ್ನು ಹೆಚ್ಚಿನ ಪ್ರಯತ್ನಗಳಿಗೆ ಪ್ರೇರೇಪಿಸುತ್ತದೆ. ಸಿಗುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುತ್ತೀರಿ. ಕೌಟುಂಬಿಕ ಬಂಧಗಳು ಬಲಗೊಳ್ಳುತ್ತವೆ.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಇಂದು ಕುಟುಂಬ ಜೀವನವು ಮಧ್ಯಮವಾಗಿರುತ್ತದೆ. ಯಾರೊಂದಿಗಾದರೂ ಮಾತನಾಡುವಾಗ ಆತುರದ ಪ್ರತಿಕ್ರಿಯೆಗಳನ್ನು ನೀಡುವುದನ್ನು ತಪ್ಪಿಸಿ. ಸಾಮಾಜಿಕ ಸಂವಹನಗಳಲ್ಲಿ ಜಾಗರೂಕರಾಗಿ ಮಾತನಾಡುವುದು ಉತ್ತಮ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಶುಭ ದಿನ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ನೀವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಬಹುದು. ಕೆಲಸದಲ್ಲಿ ನಿಮ್ಮ ವಿವಿಧ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಸಾಮಾಜಿಕ ಚಟುವಟಿಕೆಗಳಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಂತಸ ಮನೆಮಾದಲಿದೆ. ವೃತ್ತಿ-ವ್ಯವಹಾರದಲ್ಲಿ ವೇಗವನ್ನು ಪಡೆಯುವಿರಿ.
ಸಿಂಹ ರಾಶಿಯವರ ಭವಿಷ್ಯ (Leo Horoscope):
ಯಾವುದೇ ವಿಚಾರದಲ್ಲಿ ನಿಕಟ ವ್ಯಕ್ತಿಗಳು ಮತ್ತು ಕುಟುಂಬಸ್ಥರ ಮಾರ್ಗದರ್ಶನ ಅನುಸರಿಸುವುದು ಹೆಚ್ಚು ಲಾಭದಾಯಕವಾಗಿದೆ. ಅರ್ಥಪೂರ್ಣ ಸಂಭಾಷಣೆಗಳು ಮಹತ್ವದ್ದಾಗಿರುತ್ತವೆ. ನಿಮ್ಮ ಜೀವನದಲ್ಲಿ ಸುಖ-ಸೌಕರ್ಯಗಳು ಹೆಚ್ಚಾಗಲಿವೆ. ಉದ್ಯೋಗದಲ್ಲಿ ಜವಾಬ್ದಾರಿಗಳು ಹೆಚ್ಚಾಗಲಿವೆ.
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ಇಂದು ನಿಮ್ಮ ಕುಟುಂಬ ಜೀವನದಲ್ಲಿ ಸಂತೋಷದಿಂದ ಕೂಡಿರುತ್ತದೆ. ವ್ಯವಹಾರ ಸಂಬಂಧಿತ ಪ್ರಯಾಣವು ಲಾಭದಾಯಕವಾಗಿರುತ್ತದೆ. ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವಿರಿ. ಸೃಜನಶೀಲ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ವೃತ್ತಿಯಲ್ಲಿ ನಿಮ್ಮ ಕಾರ್ಯಕ್ಷಮತೆ ಉತ್ತಮಗೊಳ್ಳಲಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಇಂದು ಹೂಡಿಕೆ ಯೋಜನೆಗಳು ಲಾಭ ತರಲಿವೆ. ವ್ಯಾಪಾರದಲ್ಲಿ ನಿಮ್ಮ ಹಣಕಾಸಿನ ವಹಿವಾಟುಗಳಲ್ಲಿ ಸ್ಪಷ್ಟತೆಯನ್ನು ಕಾಪಾಡಿಕೊಳ್ಳಿ. ವಿದೇಶಿ ವ್ಯವಹಾರಗಳಲ್ಲಿ ವಿಶೇಷವಾಗಿ ಅನುಕೂಲಕರವಾದ ದಿನ. ನಿರ್ವಹಣಾ ವಿಷಯಗಳಲ್ಲಿ ತಾಳ್ಮೆಯಿಂದ ವರ್ತಿಸಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ಇಂದು ನಿಮ್ಮ ವೃತ್ತಿ ಬದುಕಿನಲ್ಲಿ ಪ್ರಭಾವಶಾಲಿಯಾಗಿರುತ್ತೀರಿ. ನಿಮ್ಮ ಧೈರ್ಯ, ಶೌರ್ಯಕ್ಕೆ ಬೇರೆಯವರು ಮನಿಯುತ್ತಾರೆ. ಸುತ್ತಲೂ ಸಕಾರಾತ್ಮಕ ವಾತಾವರಣ ಇರಲಿದ್ದು, ಪ್ರಮುಖ ಕೆಲಸಗಳಲ್ಲಿ ಜಯ ದೊರೆಯಲಿದೆ. ದೊಡ್ಡ ದೃಷ್ಟಿಕೋನವನ್ನು ಇಟ್ಟು ಮುಂದೆ ಸಾಗುವುದರಿಂದ ವೃತ್ತಿ-ವ್ಯವಹಾರದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ.
ಧನು ರಾಶಿಯವರ ಭವಿಷ್ಯ (Sagittarius Horoscope):
ಇಂದು ವೃತ್ತಿಪರ ರಂಗದಲ್ಲಿ ನಿಮ್ಮ ಸಂಬಂಧಗಳು ಬಲಗೊಳ್ಳುತ್ತವೆ. ಪ್ರಯಾಣವು ಯಶಸ್ವಿಯಾಗುತ್ತದೆ. ವೈವಿಧ್ಯಮಯ ಪ್ರಯತ್ನಗಳಲ್ಲಿ ಧನಾತ್ಮಕ ಫಲಗಳು ಹೆಚ್ಚಾಗಲಿವೆ. ವೈಯಕ್ತಿಕ ಸಾಧನೆಗಳತ್ತ ಹೆಚ್ಚಿನ ಗಮನನೀಡಿ. ಅಪೇಕ್ಷಿತ ಕಾರ್ಯಗಳಲ್ಲಿ ಶುಭ ಫಲಗಳನ್ನು ನಿರೀಕ್ಷಿಸಬಹುದು.
ಮಕರ ರಾಶಿಯವರ ಭವಿಷ್ಯ (Capricorn Horoscope):
ಅದೃಷ್ಟ ನಿಮ್ಮ ಪರವಾಗಿದ್ದು, ಪ್ರಮುಖ ವ್ಯವಹಾರಗಳಲ್ಲಿ ಪ್ರಗತಿಯನ್ನು ಕಾಣುವಿರಿ. ಲಾಭದ ಅವಕಾಶಗಳು ಹೆಚ್ಚಾಗಿರಲಿದೆ. ಸ್ಪರ್ಧೆಗಳಲ್ಲಿ ನೀವು ಉತ್ತಮವಾಗಿ ಕಾರ್ಯನಿರ್ವಹಿಸುವಿರಿ, ಇದರಿಂದ ಭರ್ಜರಿ ಆದಾಯವನ್ನು ಸಹ ಗಳಿಸುವಿರಿ. ಆಡಳಿತಾತ್ಮಕ ಕಾರ್ಯಗಳು ಸುಧಾರಿಸಲಿವೆ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಪ್ರಮುಖ ವಿಷಯಗಳಲ್ಲಿ ಆತ್ಮವಿಶ್ವಾಸದಿಂದ ಮುಂದುವರಿಯುವುದರಿಂದ ಶುಭ ಫಲಗಳನ್ನು ಪಡೆಯುವಿರಿ. ಚಂಚಲ ಮನೋಭಾವವು ನಿಮ್ಮ ನೈತಿಕತೆಯನ್ನು ದುರ್ಬಲಗೊಳಿಸಬಹುದು. ಈ ಬಗ್ಗೆ ಎಚ್ಚರಿಕೆಯಿಂದ ಇರಿ. ವೈಯಕ್ತಿಕ ಕೆಲಸಗಳಲ್ಲಿ ಹಠಮಾರಿತನವನ್ನು ತಪ್ಪಿಸಿದರೆ ಒಳಿತು.
ಮೀನ ರಾಶಿಯವರ ಭವಿಷ್ಯ (Pisces Horoscope):
ಇಂದು ಜಂಟಿ ವ್ಯವಹಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯವಾಗಿದೆ. ವೃತ್ತಿಪರ ಕ್ಷೇತ್ರದಲ್ಲಿ ಸಣ್ಣ ನಿರ್ಲಕ್ಷ್ಯವೂ ಭಾರೀ ನಷ್ಟವನ್ನು ಉಂಟು ಮಾಡಬಹುದು. ಟೀಮ್ ವರ್ಕ್ ನಲ್ಲಿ ನಿಮ್ಮ ಪಾತ್ರ ಮಹತ್ವದ್ದಾಗಿರುತ್ತದೆ. ಯೋಜನೆಗಳಲ್ಲಿ ಯಶಸ್ಸಿಗಾಗಿ ಹೆಚ್ಚಿನ ಶ್ರಮದ ಅಗತ್ಯವಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.