)
ಪತಿ ಪತ್ನಿಯ ಸಂಬಂಧವು ನಂಬಿಕೆಯ ಆಧಾರದ ಮೇಲೆ ನಿಂತಿರುತ್ತದೆ. ನಂಬಿಕೆಯೇ ಈ ಸಂಬಂಧವನ್ನು ಬಿಗಿಯಾಗಿಸುವುದು. ಯಾವ ಸಂಬಂಧದಲ್ಲಿ ನಂಬಿಕೆ ಗಟ್ಟಿಯಾಗಿರುತ್ತದೆಯೋ ಅಲ್ಲಿ ಜೀವನದುದ್ದಕ್ಕೂ ಪ್ರೀತಿ ಕೂಡಾ ಭದ್ರವಾಗಿ ನೆಲೆ ನಿಂತಿರುವುದನ್ನು ಕಾಣಬಹುದು. ಧರ್ಮಗ್ರಂಥಗಳಲ್ಲಿ ಮಾತ್ರವಲ್ಲದೆ, ಮದುವೆಯ ಸಮಯದಲ್ಲಿಯೂ ಸಪ್ತಪದಿ ತುಳಿಯುವಾಗ ಪತ್ನಿ ತನ್ನ ಪತಿಯಿಂದ ಏನನ್ನೂ ಮುಚ್ಚಿಡುವುದಿಲ್ಲ ಎಂದು ಪ್ರಮಾಣ ಮಾಡುತ್ತಾಳೆ. ಆದರೆ ವಾಸ್ತವ ಬೇರೆಯೇ ಆಗಿರುತ್ತದೆ.
ತನ್ನ ಪತಿಯನ್ನು ಎಷ್ಟೇ ಪ್ರೀತಿಸುತ್ತಿದ್ದರೂ ಪ್ರತೀ ಹೆಣ್ಣು ತನ್ನ ಪತಿಯಿಂದ ಈ 7 ವಿಷಯಗಳ ಬಗ್ಗೆ ಎಂದಿಗೂ ಬಾಯಿ ಬಿಡುವುದೇ ಇಲ್ಲ. ಈ ವಿಚಾರವನ್ನು ಗಂಡ ಕೂಡಾ ಅರ್ಥಮಾಡಿಕೊಳ್ಳುವುದಿಲ್ಲ.
ಚಾಣಕ್ಯ ನೀತಿಯ ಪ್ರಕಾರ, ಪ್ರತಿಯೊಬ್ಬ ಹೆಂಡತಿಯೂ ತನ್ನ ಜೀವನದುದ್ದಕ್ಕೂ ತನ್ನ ಗಂಡನಿಂದ ಕೆಲವು ವಿಷಯಗಳನ್ನು ಮರೆಮಾಡುತ್ತಾಳೆ. ಹಲವು ಬಾರಿ, ಈ ವಿಷಯಗಳನ್ನು ಆಕೆ ಪತಿಯಿಂದ ಮರೆಮಾಡುವುದು ಸಂಬಂಧ ಕೆಡಿಸಿಕೊಳ್ಳುವುದಕ್ಕಲ್ಲ. ಬದಲಿಗೆ ಅದನ್ನು ಭದ್ರಪಡಿಸಿಕೊಳ್ಳುವುದಕ್ಕೆ.
ರಹಸ್ಯ ಪ್ರೀತಿ :
ಹೆಚ್ಚಿನ ಮಹಿಳೆಯರಿಗೆ ರಹಸ್ಯ ಪ್ರೀತಿ ಅಥವಾ ಸಿಕ್ರೆಟ್ ಕ್ರಶ್ ಇರುವುದು ನಿಜ. ಅದನ್ನು ಆಕೆ ತನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುತ್ತಾಳೆ. ವಿಶೇಷವೆಂದರೆ ಮಹಿಳೆಯರು ತಮ್ಮ ರಹಸ್ಯ ಪ್ರೀತಿ ಬಗ್ಗೆ ಯಾರೊಂದಿಗೂ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಹಾಗೆಯೇ ತನ್ನ ಗಂಡನಿಗೂ ಈ ಬಗ್ಗೆ ಏನನ್ನೂ ಹೇಳುವುದಿಲ್ಲ.
ತನ್ನ ಪತಿ ಹೇಳುವ ಎಲ್ಲ ವಿಷಯಗಳಿಗೆ ಒಪ್ಪಿಗೆ ಸೂಚಿಸುವುದು :
ಮನೆಯ ನಿರ್ಧಾರಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರ ಒಪ್ಪಿಗೆ ಅಗತ್ಯ. ಆದರೆ ಕೆಲವೊಮ್ಮೆ ಹೆಂಡತಿಗೆ ಇಷ್ಟವಾಗದ ನಿರ್ಧಾರವನ್ನು ಪತಿ ತೆಗೆದುಕೊಂಡಿರುತ್ತಾನೆ. ಈ ನಿರ್ಧಾರಕ್ಕೆ ತನ್ನ ಒಪ್ಪಿಗೆ ಇಲ್ಲದೆ ಹೋದರೂ ಮನೆಯಲ್ಲಿ ಯಾವುದೇ ರೀತಿಯ ಸಂಘರ್ಷ ನಡೆಯದೇ ಇರಲಿ ಎನ್ನುವ ಕಾರಣಕ್ಕೆ ಹೆಂಡತಿ ಗಂಡನ ನಿರ್ಧಾರಕ್ಕೆ ತಲೆಯಾಡಿಸುತ್ತಾಳೆ. ಈ ನಿರ್ಧಾರ ತನಗೆ ಸರಿ ಹೋಗುತ್ತಿಲ್ಲ ಎನ್ನುವುದನ್ನು ಮಾತ್ರ ಪತಿಗೆ ಹೇಳುವುದಿಲ್ಲ.
ಪ್ರಣಯದ ಅಪೂರ್ಣ ಭಾವನೆ :
ಗಂಡ-ಹೆಂಡತಿಯ ನಡುವಿನ ಪ್ರಣಯದ ಸಂದರ್ಭ ಹಳ ವಿಶೇಷವಾಗಿರುತ್ತದೆ. ಅನೇಕ ಬಾರಿ ಗಂಡ ಆತ್ಮೀಯ ಕ್ಷಣಗಳಲ್ಲಿ ಹೇಗೆ ಅನಿಸಿತು ಎಂದು ಕೇಳಿದಾಗ, ಪತ್ನಿ ಅವಳು ಅಪೂರ್ಣ ಸತ್ಯವನ್ನು ಹೇಳುತ್ತಾಳೆ. ಹೆಂಡತಿ ಕೂಡಾ ಪ್ರಣಯದ ಬಗ್ಗೆ ವಿಭಿನ್ನ ರೀತಿಯ ಆಸೆಗಳನ್ನು ಹೊಂದಿರುತ್ತಾಳೆ. ಆದರೆ ಇಲ್ಲಿ ತನ್ನ ಆಸೆಯ ಬಗ್ಗೆ ಎಂದಿಗೂ ಬಾಯಿ ಬಿಡುವುದಿಲ್ಲ.
ಉಳಿತಾಯ ಮಾಡಿರುವ ಹಣ :
ಪತ್ನಿಯನ್ನು ಮನೆಯ ಲಕ್ಷ್ಮಿ ಎಂದು ಕರೆಯಲಾಗುತ್ತದೆ. ಅವರು ಒಂದು ರೀತಿಯ ಬ್ಯಾಂಕ್ ಎಂದರೂ ತಪ್ಪಲ್ಲ. ಹೆಂಡತಿಯರು ತಮ್ಮ ಗಂಡನ ಹಣವನ್ನು ಕದಿಯುತ್ತಾರೆ ಎನ್ನುವುದನ್ನು ಆಗಾಗ ನಾವು ಕೇಳುತ್ತಿರಬಹುದು. ಪ್ರತಿಯೊಬ್ಬ ಮಹಿಳೆ ಕೂಡಾ ಯಾರಿಗೂ ತಿಳಿಯದಂತೆ ತನ್ನದೇ ಆದ ರೀತಿಯಲ್ಲಿ ಹಣವನ್ನು ಸಂಗ್ರಹ ಮಾಡುತ್ತಾ ಇರುತ್ತಾಳೆ.
ಅನಾರೋಗ್ಯದ ರಹಸ್ಯ:
ಸಾಮಾನ್ಯವಾಗಿ ಮಹಿಳೆಯರಿಗೆ ದೇಹಕ್ಕೆ ಸಂಬಂಧಿಸಿದ ಕೆಲವು ಸಮಸ್ಯೆಗಳಿರುತ್ತವೆ. ಆದರೆ ಅವರು ಈ ಬಗ್ಗೆ ತಮ್ಮ ಗಂಡಂದಿರಿಗೆ ಹೇಳುವುದಿಲ್ಲ. ತನ್ನ ಗಂಡನ ಸಮಸ್ಯೆಗಳನ್ನು ಹೆಚ್ಚಿಸಲು ಇಷ್ಟವಿಲ್ಲ ಎನ್ನುವ ಕಾರಣಕ್ಕೆ ತನ್ನ ಆರೋಗ್ಯ ಸಮಸ್ಯೆಗಳನ್ನು ಕೂಡಾ ಪತಿಯಿಂದ ಮುಚ್ಚಿಡುತ್ತಾಳೆ ಪತ್ನಿ.
( ಸೂಚನೆ : ಈ ಮೇಲಿನ ಲೇಖನವನ್ನು ಇವೆಲ್ಲವೂ ಚಾಣಕ್ಯ ನೀತಿ ಮತ್ತು ಗೂಗಲ್ನಿಂದ ಪಡೆದ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ZEE ನ್ಯೂಸ್ ಇವುಗಳನ್ನು ದೃಢೀಕರಿಸುವುದಿಲ್ಲ.)