ಬೆಂಗಳೂರು : ಹಿಂದೂ ಧರ್ಮದಲ್ಲಿ, ವಾರದ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಹೊಂದಿದೆ. ಪ್ರತಿ ದಿನವನ್ನೂ ಯಾವುದದರೂ ಒಂದು ದೇವರಿಗೆ ಸಮರ್ಪಿಸಲಾಗಿರುತ್ತದೆ. ಅದೇ ರೀತಿ ಮಂಗಳವಾರ ಆಂಜನೇಯನಿಗೆ ಅರ್ಪಣೆ. ಹನುಮಂತನ ಆಶೀರ್ವಾದಕ್ಕಾಗಿ ಮಂಗಳವಾರ ಅತ್ಯುತ್ತಮ ದಿನ. 9 ಗ್ರಹಗಳಲ್ಲಿ ಒಂದಾದ ಮಂಗಳ ಗ್ರಹಕ್ಕೂ ಮಂಗಳವಾರಕ್ಕೂ ಸಂಬಂಧವಿದೆ.
ಮಂಗಳ ಗ್ರಹವು ಧೈರ್ಯ, ಶೌರ್ಯ, ಭೂಮಿ, ಸಹೋದರ ಮತ್ತು ವಿವಾಹದ ಅಂಶವಾಗಿದೆ. ಜಾತಕದಲ್ಲಿ ಮಂಗಳ ಗ್ರಹವು ದುರ್ಬಲವಾಗಿದ್ದರೆ ಅಥವಾ ಅಶುಭವಾಗಿದ್ದರೆ, ಮದುವೆಯಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತವೆ. ಸಂಬಂಧವು ಮತ್ತೆ ಮತ್ತೆ ಮುರಿದು ಬೀಳುತ್ತದೆ.ಒಂದು ವೇಳೆ ಮದುವೆಯಾದರೂ ಆ ಸಂಬಂಧ ಕೂಡಾ ಸರಿಯಾಗು ಮುಂದುವರೆಯುವುದಿಲ್ಲ. ಆದ್ದರಿಂದ, ವೈವಾಹಿಕ ಜೀವನದ ಸಂತೋಷಕ್ಕಾಗಿ ಮಂಗಳ ಗ್ರಹದ ಸ್ಥಾನ ಬಲಶಾಲಿಯಾಗಿರುವುದು ಮುಖ್ಯ. ಹಾಗೆಯೇ ಮದುವೆಗೆ ಎದುರಾಗಿರುವ ಸಮಸ್ಯೆಗಳ ನಿವಾರಣೆಗೆ ಮತ್ತು ಉದ್ಯೋಗ ಅಥವಾ ವ್ಯವಹಾರದಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ಮಂಗಳವಾರ ಕೆಲವು ಕ್ರಮಗಳನ್ನು ಅನುಸರಿಸಬೇಕು.
ಇದನ್ನೂ ಓದಿ : ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ!ಮಣ್ಣು ಕೂಡಾ ಹೊನ್ನಾಗುವ ಕಾಲ !ಉಕ್ಕಿ ಬರುವುದು ಅಷ್ಟೈಶ್ವರ್ಯ!ಪ್ರಾಪ್ತಿಯಾಗುವುದು ಜೀವನದ ಸರ್ವ ಸುಖ
ಶೀಘ್ರ ವಿವಾಹವಾಗಬೇಕಾದರೆ ಪರಿಹಾರಗಳು :
- ಮದುವೆಯಲ್ಲಿ ಪದೇ ಪದೇ ಅಡೆತಡೆಗಳು ಎದುರಾಗುತ್ತಿದ್ದರೆ ಅಥವಾ ನಿಮಗೆ ಸೂಕ್ತ ಜೀವನ ಸಂಗಾತಿ ಸಿಗದಿದ್ದರೆ, ಮಂಗಳವಾರ ಹನುಮಾನ್ ದೇವಸ್ಥಾನದಲ್ಲಿ ಸಿಂಧೂರವನ್ನು ಅರ್ಪಿಸಿ ಮಲ್ಲಿಗೆ ಎಣ್ಣೆಯ ದೀಪವನ್ನು ಬೆಳಗಿಸಿ. ಇದಾದ ನಂತರ ಹನುಮಾನ್ ಚಾಲೀಸಾ ಪಠಿಸಿ.
- ಮಂಗಳವಾರ ಬಡ ಹುಡುಗಿಗೆ ಕೆಂಪು ಬಟ್ಟೆ ಮತ್ತು ಸಿಹಿತಿಂಡಿಗಳನ್ನು ದಾನ ಮಾಡುವುದರಿಂದ ಸರಿಯಾದ ವಯಸ್ಸಿನಲ್ಲಿ ಕಂಕಣ ಭಾಗ್ಯ ಕೂಡಿ ಬರುವುದು.
- ಮಂಗಳ ದೋಷವನ್ನು ತೊಡೆದುಹಾಕಲು, ಮಂಗಳವಾರ ಕೆಂಪು ಬೇಳೆ ಮತ್ತು ಬೆಲ್ಲವನ್ನು ದಾನ ಮಾಡಿ. ಇದರಿಂದಾಗಿ, ಮಂಗಳ ಗ್ರಹವು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ:ಮಿಥುನ ರಾಶಿಗೆ ಗುರುವಿನ ಪ್ರವೇಶ: ಈ ಮೂರು ರಾಶಿಗಳಿಗೆ ಆರೋಗ್ಯ ಸಮಸ್ಯೆ, ಆರ್ಥಿಕ ಸಂಕಷ್ಟ!!
ಪ್ರಗತಿಯ ಹಾದಿಯಲ್ಲಿರುವ ಅಡೆತಡೆಗಳನ್ನು ತೆಗೆದುಹಾಕಲು ಕ್ರಮಗಳು :
ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಸಾಧಿಸುವಲ್ಲಿ ಅಡೆತಡೆಗಳನ್ನು ಎದುರಿಸುತ್ತಿದ್ದರೆ ಮಂಗಳವಾರ ಕೆಲವು ಕ್ರಮಗಳನ್ನು ತೆಗೆದುಕೊಳ್ಳಿ.
- ನೀವು ಬಯಸಿದ ಕೆಲಸ ಸಿಗದಿದ್ದರೆ, ಮಂಗಳವಾರ ಹನುಮಾನ್ ದೇವಸ್ಥಾನಕ್ಕೆ ಹೋಗಿ ಹನುಮಂತನಿಗೆ ವೀಳ್ಯದೆಲೆ ಅರ್ಪಿಸಿ. ನಂತರ ಹನುಮಾನ್ ಅಷ್ಟಕವನ್ನು ಪಠಿಸಿ.
- ಸರ್ಕಾರಿ ಕೆಲಸ ಪಡೆಯಲು ಶ್ರಮಿಸುವುದರ ಜೊತೆಗೆ, ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಓದಿದ ನಂತರ ಬಜರಂಗಬಲಿಗೆ ಬೂಂದಿ ಅರ್ಪಿಸಿ.
- ಮಂಗಳವಾರ ಬಡವರಿಗೆ ಮತ್ತು ನಿರ್ಗತಿಕರಿಗೆ ಆಹಾರವನ್ನು ನೀಡುವುದರಿಂದ ಕೆಲಸದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ.
- ಯಾವುದೇ ದೊಡ್ಡ ಸಮಸ್ಯೆ ಎದುರಾದರೆ ಭಜರಂಗಬಾಣವನ್ನು ಕ್ರಮಬದ್ಧವಾಗಿ ಪಠಿಸಿ.
ಮಂಗಳವಾರದಂದು ತಪ್ಪಿಯೂ ಮಾಂಸ ಮತ್ತು ಮದ್ಯ ಸೇವಿಸಬಾರದು ಎನ್ನುವುದು ನೆನಪಿರಲಿ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢೀಕರಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









