Akshaya Tritiya 2025 : ಅಕ್ಷಯ ತೃತೀಯಕ್ಕೆ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಪ್ರಾಶಸ್ತ್ಯವಿದೆ. ಈ ವರ್ಷದ ಅಕ್ಷಯ ತೃತೀಯ ಬಹಳ ವಿಶೇಷವಾಗಿದೆ. ಈ ದಿನವೇ ಎರಡೆರಡು ರಾಜಯೋಗಗಳು ರೂಪುಗೊಳ್ಳುತ್ತಿವೆ.

Akshaya Tritiya 2025 : ವೈದಿಕ ಜ್ಯೋತಿಷ್ಯದ ದೃಷ್ಟಿಕೋನದಿಂದ, ಈ ಬಾರಿಯ ಅಕ್ಷಯ ತೃತೀಯ ಬಹಳ ವಿಶೇಷವಾಗಿದೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಈ ವರ್ಷ ಏಪ್ರಿಲ್ 30 ರಂದು, ಅಕ್ಷಯ ತೃತೀಯ. ಇದೇ ದಿನ ಬಹಳ ಪ್ರಾಶಸ್ತ್ಯದ ಗಜಕೇಸರಿ ಮತ್ತು ಮಾಳವ್ಯ ರಾಜಯೋಗಗಳು ರೂಪುಗೊಳ್ಳಲಿವೆ. , ಈ ರಾಜಯೋಗದಿಂದಾಗಿ ಅಕ್ಷಯ ತೃತೀಯದ ದಿನದಿಂದಲೇ ಕೆಲವು ರಾಶಿಯವರ ಅದೃಷ್ಟ ಬದಲಾಗುತ್ತದೆ. ಇದ್ದಕ್ಕಿದ್ದಂತೆ ಸಂಪತ್ತಿನ ಸುಧೆ ಹರಿಯುತ್ತದೆ.
ಅಕ್ಷಯ ತೃತೀಯದಿಂದ ಈ ರಾಶಿಯವರಿಗೆ ರಾಜಯೋಗ :
ವೃಷಭ ರಾಶಿ :
ಅಕ್ಷಯ ತೃತೀಯ ದಿನದಂದು ಈ ರಾಶಿಯವರ ಜಾತಕದ ಲಗ್ನ ಸ್ಥಾನದಲ್ಲಿ, ಅಂದರೆ ಮೊದಲ ಮನೆಯಲ್ಲಿ ಗಜಕೇಸರಿ ರಾಜ ಯೋಗ ರೂಪುಗೊಳ್ಳುತ್ತದೆ. ಮಾಳವ್ಯ ರಾಜಯೋಗವು ಆದಾಯ ಮತ್ತು ಲಾಭದ ಸ್ಥಾನದಲ್ಲಿ ರೂಪುಗೊಳ್ಳಲಿದೆ.ಈ ಸಮಯದಲ್ಲಿ ನಿಮ್ಮ ಆದಾಯದಲ್ಲಿ ಭಾರೀ ಏರಿಕೆಯಾಗಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ವ್ಯವಹಾರದಲ್ಲಿ ದೊಡ್ಡ ಮಟ್ಟದ ಆರ್ಥಿಕ ಬೆಳವಣಿಗೆಗೆ ಕಾರಣವಾಗುತ್ತದೆ.
ಧನು ರಾಶಿ :
ಅಕ್ಷಯ ತೃತೀಯದಂದು ಗಜಕೇಸರಿ ಮತ್ತು ಮಾಳವ್ಯ ರಾಜಯೋಗದ ರಚನೆಯು ಧನು ರಾಶಿಯವರಿಗೆ ಫಲಪ್ರದವಾಗಲಿದೆ. ಚಂದ್ರ ಮತ್ತು ಗುರುವಿನ ಸಂಯೋಗವು ನಿಮ್ಮ ರಾಶಿಯಾ ನಾಲ್ಕನೇ ಮನೆಯಲ್ಲಿ ರೂಪುಗೊಳ್ಳುತ್ತದೆ.
ಈ ಅವಧಿಯಲ್ಲಿ ಕಾಲಕಾಲಕ್ಕೆ ಹಠಾತ್ ಆರ್ಥಿಕ ಲಾಭಗಳನ್ನು ಪಡೆಯುತ್ತಲೇ ಇರುತ್ತೀರಿ. ಇದರೊಂದಿಗೆ, ಈ ಅವಧಿಯಲ್ಲಿ ಎಲ್ಲಾ ಭೌತಿಕ ಸೌಕರ್ಯಗಳು ಲಭ್ಯವಿರುತ್ತವೆ. ಮದುವೆಯಲ್ಲಿ ಆಸಕ್ತಿ ಹೊಂದಿರುವ ಅವಿವಾಹಿತರಿಗೆ ಮದುವೆಯಾಗಲು ಅವಕಾಶ ಸಿಗುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತಾರೆ.
ಕುಂಭ ರಾಶಿ :
ಕುಂಭ ರಾಶಿಯವರಿಗೆ ಮಾಳವ್ಯ ಮತ್ತು ಗಜಕೇಸರಿ ರಾಜಯೋಗದ ರಚನೆಯು ಅತ್ಯಂತ ಪ್ರಯೋಜನಕಾರಿಯಾಗಿರಲಿದೆ. ಗಜಕೇಸರಿ ರಾಜಯೋಗವು ನಿಮ್ಮ ರಾಶಿಯ ನಾಲ್ಕನೇ ಸ್ಥಾನದಲ್ಲಿ ರೂಪುಗೊಳ್ಳುತ್ತದೆ. ಮಾಳವ್ಯ ರಾಜಯೋಗವು ನಿಮ್ಮ ರಾಶಿಯ ಸಂಪತ್ತಿನ ಸ್ಥಾನದಲ್ಲಿ ರೂಪುಗೊಳ್ಳುತ್ತದೆ. ವಾಹನ ಮತ್ತು ಆಸ್ತಿ ಖರೀದಿ ಭಾಗ್ಯ ಒದಗಿ ಬರುವುದು. ಜೀವನದಲ್ಲಿ ದೊಡ್ಡ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಹಣಕಾಸಿನ ಯೋಜನೆಗಳು ಯಶಸ್ವಿಯಾಗುತ್ತವೆ. ನೀವು ಸಾಲ ಕೊಟ್ಟು ಹೊರಗೆ ಉಳಿದಿರುವ ಹಣ ಮತ್ತೆ ನಿಮ್ಮ ಕೈ ಸೇರುತ್ತದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ಅನುಮೋದಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.