ಅದೃಷ್ಟಕ್ಕಾಗಿ ಸ್ನೇಕ್ ಪ್ಲಾಂಟ್: ಒಳಾಂಗಣ ಸಸ್ಯಗಳು ಮನೆಯೊಳಗೆ ತಾಜಾತನ ಮತ್ತು ಸಕಾರಾತ್ಮಕತೆಯನ್ನು ನೀಡುತ್ತವೆ, ಜೊತೆಗೆ ಕೆಲವು ಸಸ್ಯಗಳು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತವೆ. ಈ ವಿಶೇಷ ಸಸ್ಯಗಳನ್ನು ವಾಸ್ತು ಶಾಸ್ತ್ರದಲ್ಲಿ ಬಹಳ ಮಂಗಳಕರವೆಂದು ವಿವರಿಸಲಾಗಿದೆ. ಈ ಸಸ್ಯಗಳು ಹಣವನ್ನು ಗಳಿಸುತ್ತವೆ, ಮನೆಯ ಜನರ ಪ್ರಗತಿಯಲ್ಲಿ ಬರುವ ಅಡೆತಡೆಗಳನ್ನು ನಿವಾರಿಸುತ್ತದೆ. ಉತ್ತಮ ಆರೋಗ್ಯವನ್ನು ಕಾಪಾಡುತ್ತದೆ, ಜೊತೆಗೆ ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯನ್ನು ತರುತ್ತದೆ ಎಂದು ನಂಬಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ಒಂದು ವಿಶೇಷ ಸಸ್ಯವನ್ನು ನೆಡುವುದರಿಂದ ವೃತ್ತಿಯಲ್ಲಿ ತ್ವರಿತ ಪ್ರಗತಿ ಕಂಡುಬರುತ್ತದೆ ಮತ್ತು ಆದಾಯವೂ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಈ ಸಸ್ಯಗಳಲ್ಲಿ ಒಂದು ಸ್ನೇಕ್ ಪ್ಲಾಂಟ್.


COMMERCIAL BREAK
SCROLL TO CONTINUE READING

ಅದ್ಭುತ ಫಲಿತಾಂಶಗಳನ್ನು ನೀಡುವ ಸ್ನೇಕ್ ಪ್ಲಾಂಟ್:
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಸ್ನೇಕ್ ಪ್ಲಾಂಟ್ ನೆಡುವುದರಿಂದ ಹಲವು ಪ್ರಯೋಜನಗಳಿವೆ. ಮನೆಯಲ್ಲಿ ಈ ಗಿಡವನ್ನು ನೆಟ್ಟರೆ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಹಣದ ಒಳಹರಿವು ಹೆಚ್ಚಾಗುತ್ತದೆ. ಮನೆಯಲ್ಲಿ ಸಂತೋಷ -ಸಮೃದ್ಧಿ  ವೃದ್ಧಿ ಆಗುತ್ತದೆ ಎಂದು ಹೇಳಲಾಗುತ್ತದೆ.


ಮನೆಯಲ್ಲಿ ಸ್ನೇಕ್ ಪ್ಲಾಂಟ್ ನೆಡುವುದರಿಂದ ಪ್ರಗತಿಯ ಹಾದಿಯಲ್ಲಿ ಬರುವ ಅಡೆತಡೆಗಳು ದೂರವಾಗುತ್ತವೆ. ಮನೆಯ ಸದಸ್ಯರು ಉದ್ಯೋಗ-ವ್ಯವಹಾರ, ಅಧ್ಯಯನದಲ್ಲಿ ಯಶಸ್ಸು ಪಡೆಯುತ್ತಾರೆ. ಉದ್ಯೋಗಸ್ಥರು ತ್ವರಿತವಾಗಿ ಬಡ್ತಿ-ಹೆಚ್ಚಳ ಪಡೆಯುತ್ತಾರೆ ಎಂಬ ನಂಬಿಕೆ ಇದೆ.


ಇದನ್ನೂ ಓದಿ- Mangal Gochar 2022: ಜೂನ್ 30ರ ಮೊದಲು ನಾಲ್ಕು ರಾಶಿಯವರ ಜೀವನದಲ್ಲಿ ದೊಡ್ಡ ಬದಲಾವಣೆ!


ಹಾವಿನ ಸಸ್ಯವು ಅಂದರೆ ಸ್ನೇಕ್ ಪ್ಲಾಂಟ್ ಉತ್ತಮ ನೈಸರ್ಗಿಕ ಗಾಳಿ ಶುದ್ಧಿಕಾರಕವಾಗಿದೆ. ಇದು ಸುತ್ತಮುತ್ತಲಿನ ಗಾಳಿಯನ್ನು ಶುದ್ಧೀಕರಿಸುತ್ತದೆ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಆದ್ದರಿಂದ, ಜನರು ಮನೆಯಲ್ಲಿ ಸ್ನೇಕ್ ಪ್ಲಾಂಟ್ ನೆಡುವುದರಿಂದ ಸಕಾರಾತ್ಮಕಕತೆಯನ್ನು  ಅನುಭವಿಸುತ್ತಾರೆ ಮತ್ತು ಧನಾತ್ಮಕವಾಗಿ ಯೋಚಿಸುತ್ತಾರೆ ಎನ್ನಲಾಗುವುದು. 


ಕೇವಲ ಮನೆಯಲ್ಲಿ ಮಾತ್ರವಲ್ಲ ಕಚೇರಿಯಲ್ಲಿ ನಿಮ್ಮ ಟೇಬಲ್ ಮೇಲೆ ಸ್ನೇಕ್ ಪ್ಲಾಂಟ್ ಇಡುವುದು ಕೂಡ ತುಂಬಾ ಮಂಗಳಕರ. ಇದು ಉತ್ತಮ ಭಾವನೆಯನ್ನು ನೀಡುತ್ತದೆ. ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ತ್ವರಿತ ಪ್ರಗತಿಯನ್ನು ಸಾಧಿಸುವಲ್ಲಿ ಸಹಾಯಕವಾಗಿದೆಯೆಂದು ಸಾಬೀತುಪಡಿಸುತ್ತದೆ. ಮಕ್ಕಳ ಸ್ಟಡಿ ಟೇಬಲ್ ಮೇಲೂ ಈ ಸಸ್ಯವನ್ನು ಇಡುವುದು ಒಳ್ಳೆಯದು. ಇದು ಅವರ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. 


ಇದನ್ನೂ ಓದಿ- Vastu Tips: ಮನೆಗೆ ಲಕ್ಷ್ಮಿ ಬರುವ ಮುನ್ನವೇ ಸಿಗುತ್ತೆ ಹಲವು ಸಂಕೇತ


ಮನೆಯ ಈ ದಿಕ್ಕಿನಲ್ಲಿರಲಿ ಸ್ನೇಕ್ ಪ್ಲಾಂಟ್:
ಮನೆಯೊಳಗೆ ಸ್ನೇಕ್ ಪ್ಲಾಂಟ್ ಅನ್ನು ಆಗ್ನೇಯ ಮೂಲೆಯಲ್ಲಿ ಅಥವಾ ಪೂರ್ವ ಅಥವಾ ದಕ್ಷಿಣ ದಿಕ್ಕಿನಲ್ಲಿ ಇಡುವುದು ಶುಭ. ಈ ಸಸ್ಯವನ್ನು ಇತರ ಸಸ್ಯಗಳೊಂದಿಗೆ ಇಡಬಾರದು ಎಂಬುದನ್ನು ನೆನಪಿನಲ್ಲಿಡಿ, ಇಲ್ಲದಿದ್ದರೆ ಅದು ವಿರುದ್ಧ ಪರಿಣಾಮವನ್ನು ನೀಡುತ್ತದೆ.  


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.