)
Ravi Yoga, Sukarma Yoga and Dhruti Yoga on Vijayadashami Prabhav On Zodiac Signs: ಜ್ಯೋತಿಷ್ಯದ ಪ್ರಕಾರ, ಸೌರ ಶರದ ಋತು, ಆಶ್ವಯುಜ ಮಾಸದ ಶುಕ್ಲ ಪಕ್ಷದ ದಶಮಿ ದಿನದಂದು ನಾಡದೇವತೆಯಗಿರುವ ತಾಯಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹರಿಸಿದಳು ಎನ್ನಲಾಗುತ್ತದೆ. ಇದಲ್ಲದೆ, ಶುಕ್ಲ ಪಕ್ಷದ ದಶಮಿಯಂದೇ ಶ್ರೀರಾಮಚಂದ್ರ ರಾಕ್ಷಸ ರಾವಣನನ್ನು ವಧೆ ಮಾಡಿದನೆಂದು ಪುರಾಣಗಳಲ್ಲಿ ಉಲ್ಲೇಖವಿದೆ. ಹಾಗಾಗಿಯೇ ವಿಜಯದಶಮಿಯನ್ನು ಶತ್ರುಗಳ ವಿರುದ್ಧ ಜಯ, ಕತ್ತಲೆಯಿಂದ ಬೆಳಕಿನಕಡೆಗೆ ಸಾಗುವ ದಿನ ಎನ್ನಲಾಗುತ್ತದೆ. ವಿಜಯದಶಮಿಯನ್ನು ದಸರಾ ಹಬ್ಬವಾಗಿ ಆಚರಿಸಲಾಗುತ್ತದೆ.
ಈ ವರ್ಷ ಅಕ್ಟೋಬರ್ 02, 2025ರ ಗುರುವಾರ ವಿಜಯದಶಮಿ ಆಚರಣೆ ಇರಲಿದೆ. ಧಾರ್ಮಿಕ ದೃಷ್ಟಿಕೋನದಿಂದ ಮಾತ್ರವಲ್ಲ ಜ್ಯೋತಿಷ್ಯದ ದೃಷ್ಟಿಯಿಂದಲೂ ಕೂಡ ಈ ಬಾರಿಯ ವಿಜಯದಶಮಿ ತುಂಬಾ ವಿಶೇಷವಾಗಿದೆ. ಅಕ್ಟೋಬರ್ 02ರಂದು ಶುಭ ಯೋಗಗಳಾದ
ರವಿ ಯೋಗ, ಸುಕರ್ಮ ಯೋಗ, ಧೃತಿ ಯೋಗಗಳು ರೂಪುಗೊಳ್ಳಲಿವೆ. ವಿಜಯದಶಮಿಯ ಮರುದಿನವೇ ಬುಧ ಮಂಗಳ ಯುತಿಯೂ ರೂಪುಗೊಳ್ಳಲಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ, ನೂರಾರು ವರ್ಷಗಳ ಬಳಿಕ ವಿಜಯದಶಮಿಯಲ್ಲಿ ರವಿ ಯೋಗ, ಸುಕರ್ಮ ಯೋಗ, ಧೃತಿ ಯೋಗಗಳ ಮಹಾಯುತಿ ರೂಪುಗೊಳ್ಳುತ್ತಿದೆ. ಇದರಿಂದ ಕೆಲವು ರಾಶಿಯವರ ಬದುಕು ಹಸನಾಗಲಿದ್ದು ಅದೃಷ್ಟದ ಬೆಂಬಲದಿಂದ ಹೆಜ್ಜೆ ಇಟ್ಟಲ್ಲೆಲ್ಲಾ ಜಯ, ಯಶಸ್ಸು ಕೈ ಹಿಡಿಯಲಿದೆ. ಆರ್ಥಿಕವಾಗಿಯೂ ಇದು ಅತ್ಯುತ್ತಮ ಸಮಯ ಎನ್ನಲಾಗುತ್ತಿದೆ. ವಿಜಯದಶಮಿಯಿಂದ ಯಾವ್ಯಾವ ರಾಶಿಗಳ ಅದೃಷ್ಟ ಖುಲಾಯಿಸಲಿದೆ ಎಂದು ತಿಳಿಯೋಣ...
ವಿಜಯದಶಮಿಯಿಂದ ಖುಲಾಯಿಸಲಿದೆ ಈ ಮೂರು ರಾಶಿಯವರ ಅದೃಷ್ಟ:
ಮೇಷ ರಾಶಿ:
ವಿಜಯದಶಮಿಯಲ್ಲಿ ರೂಪುಗೊಳ್ಳಲಿರುವ ರವಿ ಯೋಗ, ಸುಕರ್ಮ ಯೋಗ, ಧೃತಿ ಯೋಗಗಳ ಮಹಾಯುತಿಯು ಈ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಅಗಾಧವಾದ ಯಶಸ್ಸು, ಕೀರ್ತಿಯನ್ನು ನೀಡಲಿದೆ. ವ್ಯವಹಾರ ಸಂಬಂಧಿತ ಪ್ರಯಾಣಗಳಿಂದ ಬಂಪರ್ ಆದಾಯ ಹರಿದುಬರಲಿದೆ. ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಫಲ ದೊರೆಯಲಿದ್ದು, ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಂಭವವಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗಲಿದೆ.
ಕಟಕ ರಾಶಿ:
ವಿಜಯದಶಮಿಯ ದಿನ ರೂಪುಗೊಳ್ಳಲಿರುವ ಶುಭ ಯೋಗಗಳ ಫಲವಾಗಿ ಈ ರಾಶಿಯವರಿಗೆ ಆತ್ಮವಿಶ್ವಾಸ ವೃದ್ಧಿಯಾಗಲಿದೆ. ವೃತ್ತಿಪರರಿಗೆ ಉದ್ಯೋಗದಲ್ಲಿ ಬಡ್ತಿ, ವೇತನ ಹೆಚ್ಚಳ ಸಾಧ್ಯತೆ ಇದ್ದರೆ, ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ. ವ್ಯಾಪಾರ ವಿಸ್ತರಣೆಗಾಗಿ ಬಯಸುತ್ತಿರುವವರಿಗೆ ಇದು ಸುವರ್ಣ ಸಮಯ ಎಂತಲೇ ಹೇಳಬಹುದು. ಹಣದ ಹರಿವು ಹೆಚ್ಚಾಗುವುದರಿಂದ ಆರ್ಥಿಕ ಸಮಸ್ಯೆಗಳಿಂದಲೂ ಪರಿಹಾರ ಪಡೆಯುವ ಪರ್ವಕಾಲ ಇದಾಗಿದೆ.
ಧನು ರಾಶಿ:
ವಿಜಯದಶಮಿಯ ದಿನ ರವಿ, ಸುಕರ್ಮ, ಧೃತಿ ಯೋಗಗಳ ರಚನೆ, ಅವುಗಳ ಸಂಯೋಗದಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ. ವೈಯಕ್ತಿಕವಾಗಿ ಅತ್ಯುತ್ತಮ ಸಮಯ ಇದಾಗಿದ್ದು ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವುವು. ಮನೆಯಲ್ಲಿ ಸಂತೋಷದ ವಾತಾವರಣ ಇರಲಿದೆ. ಸಂಬಂಧಗಳ ನಡುವೆ ಬಿರುಕು ಮಾಯವಾಗಿ, ಬಂಧಗಳು ಗಟ್ಟಿಯಾಗುವ ಸುವರ್ಣ ಕಾಲ ಇದಾಗಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.