ವಾಸ್ತು ಪ್ರಕಾರ ಮನೆಯಲ್ಲಿ ಇರಿಸಲಾಗಿರುವ ಪ್ರತಿಯೊಂದು ವಸ್ತುವು ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳಿಗೆ ಕಾರಣವಾಗುತ್ತದೆ.
ಮನೆಯ ಪ್ರತಿಯೊಂದು ಮೂಲೆಯಲ್ಲಿಯೂ ಧನಾತ್ಮಕ ಶಕ್ತಿ ಇರಬೇಕಾದ್ರೆ ಗೋಡೆಯ ಗಡಿಯಾರವನ್ನ ಯಾವ ದಿಕ್ಕಿನಲ್ಲಿರಿಸಿದ್ದೀರಿ ಎಂಬುದು ಬಹಳ ಮುಖ್ಯ.
ಗೋಡೆಗೆ ನೇತು ಹಾಕುವ ಗಡಿಯಾರದ ವಿಚಾರದಲ್ಲೂ ವಾಸ್ತು ನಿಯಮಗಳನ್ನು ಅನುಸರಿಸಿದರೆ ವಾಸ್ತು ದೋಷದಿಂದ ಮುಕ್ತಿ ಹೊಂದಲು ಸಾಧ್ಯ.
ಮನೆಯಲ್ಲಿನ ಗಡಿಯಾರದ ವಿಚಾರದಲ್ಲೂ ವಾಸ್ತುವನ್ನು ಪರಿಗಣಿಸಬೇಕು. ಇಲ್ಲದಿದ್ರೆ ಮನೆಯಲ್ಲಿ ಸಮಸ್ಯೆಗಳು ಮತ್ತು ಕೆಲಸದಲ್ಲಿ ಅಡೆತಡೆ ಉಂಟಾಗುತ್ತವೆ.
ವಾಸ್ತು ಪ್ರಕಾರ ಪೂರ್ವ, ಪಶ್ಚಿಮ ಮತ್ತು ಉತ್ತರ ದಿಕ್ಕುಗಳು ಗೋಡೆಯ ಗಡಿಯಾರವನ್ನು ಇರಿಸಲು ಸೂಕ್ತವೆಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಗೋಡೆಯ ಗಡಿಯಾರವನ್ನು ಹಾಸಿಗೆಯಿಂದ ದೂರದಲ್ಲಿ ಇರಿಸಬೇಕು. ಗಡಿಯಾರವನ್ನು ಬಾಗಿಲಿನ ಮೇಲೆ ನೇತುಹಾಕುವುದನ್ನು ತಪ್ಪಿಸಬೇಕು.
ಅಪ್ಪಿತಪ್ಪಿಯೂ ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಾರದು. ಈ ದಿಕ್ಕಿನಲ್ಲಿ ಗಡಿಯಾರವನ್ನು ಇರಿಸುವುದರಿಂದ ಆರ್ಥಿಕ ನಷ್ಟ ಉಂಟಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪ್ರವೇಶ ದ್ವಾರದಲ್ಲಿ ಗಡಿಯಾರ ಅಳವಡಿಸಬಾರದು. ಪ್ರವೇಶ ದ್ವಾರದ ಮೇಲೆ ಗಡಿಯಾರ ಇರಿಸುವುದು ಅಶುಭವೆಂದು ಪರಿಗಣಿಸಲಾಗಿದೆ.