1. ಶುಕ್ರವಾರ ತಾಯಿ ಲಕ್ಷ್ಮಿ ಸೇರಿದಂತೆ ಶುಕ್ರದೇವನಿಗೆ ಸಮರ್ಪಿತ ವಾರವಾಗಿದೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರವಾರ ಕೈಗೊಳ್ಳಲಾಗುವ ಗುಪ್ತ ಉಪಾಯಗಳ ಕುರಿತು ಹೇಳಲಾಗಿದೆ.
2. ಈ ಉಪಾಯಗಳನ್ನು ಮಾಡಿದರೆ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತವೆ ಮತ್ತು ಸುಖ ಸಮೃದ್ಧಿ ಹೆಚ್ಚಾಗುತ್ತದೆ.
3. ಧನ-ವೈಭವ-ಸುಖ-ಸಮೃದ್ಧಿಗಾಗಿ ಶುಕ್ರವಾರ ಮಧ್ಯರಾತ್ರಿ ಆಷ್ಟಲಕ್ಷ್ಮಿಯ ಪೂಜೆ ಸಲ್ಲಿಸಿ ಕನಕಧಾರ ಸ್ತೋತ್ರ ಪಠಿಸಿ.
4. ಈ ವೇಳೆ ಆಷ್ಟ ಲಕ್ಷ್ಮಿಗೆ ಕೇಸರಿಯುಕ್ತ ಪಾಯಸದ ನೈವೇದ್ಯ ಅರ್ಪಿಸಿ. ಪೂಜೆ ಅರ್ಚನೆಯ ವೇಳೆ ಯಾವುದೇ ಅಡೆತಡೆ ಬಾರದಂತೆ ನೋಡಿಕೊಳ್ಳಿ.
5. ಶುಕ್ರವಾರ ತಾಯಿ ಲಕ್ಷ್ಮಿ ವಿಗ್ರಹ ಅಥವಾ ಫೋಟೋ ಎದುರು ಗುಲಾಬಿ ಬಣ್ಣದ ವಸ್ತ್ರ ಧರಿಸಿ ಕುಳಿತು 'ಏಂ ಹಿಂ ಶ್ರಿಂ ಅಷ್ಟಲಕ್ಷ್ಮಿಯೈ ಹಿ ಸಿದ್ಧಯೇ ಮಮಗ್ರಹೇ ಗಚ್ಛ ಆಗಚ್ಛಾಗಚ್ಛ ನಮಃ ಸ್ವಾಹಾ' ಈ ಮಂತ್ರವನ್ನು 108 ಬಾರಿ ಜಪಿಸಿ.
6. ಈ ಮಂತ್ರದ ಜೊತೆಗೆ ಶ್ರೀ ಲಕ್ಷ್ಮಿ ಸೂತ್ರ ಪಠಿಸಿ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿಯಾಗುತ್ತದೆ ಹಾಗೂ ಧನಕ್ಕೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತವೆ.
7. ಶುಕ್ರವಾರ ಸಂಜೆ ಸೂರ್ಯಾಸ್ತದ ಬಳಿಕ ಸ್ನಾನ ಮಾಡಿ, ಸ್ವಚ್ಛ ಬಟ್ಟೆಗಳನ್ನು ಧರಿಸಿ ತಾಯಿ ಲಕ್ಷ್ಮಿಯ ಮುಂದೆ ತುಪ್ಪದ ದೀಪ ಬೆಳಗಿ ಮತ್ತು ಒಂದು ಪ್ಲಾಸ್ಟಿಕ್ ಪೊಟ್ಟಣದಲ್ಲಿ ಅರ್ಧದಷ್ಟು ಉಪ್ಪನ್ನು ತುಂಬಿ, ಅದರ ಮೇಲೆ ಕೆಂಪು ವಸ್ತ್ರವನ್ನಿರಿಸಿ.
8. ಇದಾದ ಬಳಿಕ ತಾಯಿ ಲಕ್ಷ್ಮಿಯ ಬೀಜಮಂತ್ರವಾಗಿರುವ 'ಓಂ ಹಿಂ ಶ್ರಿಂ ಕಮಲೇ ಕಮಲಾಲಯೆ ಪ್ರಸೀದ್ ಪ್ರಸೀದ್ ಶ್ರೀ ಹಿಂ ಶ್ರಿಂ ಊ ಮಹಾಲಕ್ಷ್ಮೀನಮಃ'ವನ್ನು 1001 ಬಾರಿ ಜಪಿಸಿ ಉಪ್ಪಿನ ಪೊಟ್ಟಣದಲ್ಲಿ ಒಂದು ಲವಂಗದ ಕುಡಿ ಹಾಕಿ.
9. ನಂತರ ತಾಯಿ ಲಕ್ಷ್ಮಿಗೆ ಆರತಿಯನ್ನು ಬೆಳಗಿ ಕೆಂಪುವಸ್ತ್ರದಲ್ಲಿ ಆ ಉಪ್ಪಿನ ಡಬ್ಬಿಯನ್ನು ಕಟ್ಟಿ ಅದನ್ನು ಹಣವಿಡುವ ಜಾಗದಲ್ಲಿರಿಸಿ. ನಂತರ ಮುಂದಿನ 10 ದಿನಗಳವರೆಗೆ ನಿತ್ಯ ಒಂದೊಂದು ಲವಂಗದ ಕುಡಿಯನ್ನು ಉಪ್ಪಿನ ಡಬ್ಬಿಗೆ ಹಾಕಿ.
10. ಶುಕ್ರವಾರ ಸಂಜೆ ಶಿವಲಿಂಗಕ್ಕೆ ಕಚ್ಚಾ ಹಾಲನ್ನು ಆರೋಪಿಸಿ ಹಾಗೂ ಸಕ್ಕರೆಯ ದಾನ ಮಾಡಿ. ಜೊತೆಗೆ ಯಾವುದಾದರೊಂದು ಕನ್ಯೆಗೆ ಬಿಳಿಬಣ್ಣದ ಸಿಹಿಯನ್ನು ತಿನ್ನಿಸಿ, ಇದರಿಂದ ಜಾತಕದಲ್ಲಿ ಶುಕ್ರನ ಸ್ಥಾನ ಬಲಗೊಳ್ಳುತ್ತದೆ.