ನವರಾತ್ರಿಯಲ್ಲಿ ಅನೇಕ ಜನರು ಹೆಣ್ಣುಮಕ್ಕಳನ್ನು ಪೂಜಿಸುತ್ತಾರೆ. ಆದರೆ ಕನ್ಯಾ ಪೂಜೆಗೆ ಕೆಲವು ನಿಯಮಗಳಿವೆ. ಈ ನಿಯಮಗಳನ್ನು ಪಾಲಿಸುವುದು ತುಂಬಾ ಮುಖ್ಯ.
ಕನ್ಯಾ ಪೂಜೆಯ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಏನಾದರೂ ದಾನವನ್ನೂ ನೀಡಲಾಗುತ್ತದೆ. ಈ ಐದು ವಸ್ತುಗಳನ್ನು ಅಪ್ಪಿತಪ್ಪಿಯೂ ಸಹ ದಾನ ಮಾಡಬಾರದು.
ಕನ್ಯಾ ಪೂಜೆಯ ವೇಳೆ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಹುಳಿ ಪದಾರ್ಥಗಳನ್ನು ದಾನ ಮಾಡಬಾರದು.
ಕನ್ಯಾ ಪೂಜೆಯ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಎಣ್ಣೆಯನ್ನು ದಾನ ಮಾಡಬಾರದು.
ಕನ್ಯಾ ಪೂಜೆಯ ಸಮಯದಲ್ಲಿ ಹೆಣ್ಣು ಮಕ್ಕಳಿಗೆ ಊಟ ಬಡಿಸುವಾಗ ಬೆಳ್ಳುಳ್ಳಿ, ಈರುಳ್ಳಿಯಿಂದ ಮಾಡಿದ ವಸ್ತುಗಳನ್ನು ನೀಡಬಾರದು.
ಕನ್ಯಾ ಪೂಜೆಯ ವೇಳೆ ಹೆಣ್ಣು ಮಕ್ಕಳಿಗೆ ಯಾವುದೇ ಕಾರಣಕ್ಕೂ ಕಪ್ಪು ಎಳ್ಳು ಬೀಜಗಳನ್ನು ದಾನ ಮಾಡಬಾರದು.
ಕನ್ಯಾ ಪೂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದು. ಕಬ್ಬಿಣದ ಪ್ಯಾನ್ ಅಥವಾ ತಾಮ್ರದ ಪಾತ್ರೆಯನ್ನು ದಾನ ಮಾಡಬೇಡಿ.
ನವರಾತ್ರಿಯ ಕನ್ಯಾ ಪೂಜೆಯಲ್ಲಿ ಪ್ರತಿಯೊಬ್ಬರೂ ಈ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ ದುರ್ಗಾದೇವಿಯು ನಿಮ್ಮ ಮೇಲೆ ಕೋಪಿಸಿಕೊಳ್ಳುತ್ತಾಳೆಂದು ನಂಬಲಾಗಿದೆ.