ಪೊರಕೆಯನ್ನ ಕೋಣೆಯ ಮೂಲೆಯಲ್ಲಿ, ಯಾರಿಗೂ ಕಾಣದಂತೆ ಮರೆಮಾಚಿ ಇಡಬೇಕು. ಇದು ಸಂಪತ್ತಿನ ರಕ್ಷಣೆಯ ಸಂಕೇತವಾಗಿದೆ.
ಈಶಾನ್ಯ ದಿಕ್ಕಿನಲ್ಲಿ ಪೊರಕೆ ಇಡುವುದರಿಂದ ಮನೆಯ ಸದಸ್ಯರ ಬೆಳವಣಿಗೆಗೆ ಮತ್ತು ಸಮೃದ್ಧಿಗೆ ಅಡ್ಡಿಯಾಗುತ್ತದೆ.
ಪೂಜಾ ಕೋಣೆಯಲ್ಲಿ ಅಪ್ಪಿತಪ್ಪಿಯೂ ಪೊರಕೆಯನ್ನ ಇಡಬಾರದು.
ಮಲಗುವ ಕೋಣೆ ಮತ್ತು ಡ್ರಾಯಿಂಗ್ ರೂಮ್ ಸ್ಥಳಗಲ್ಲಿ ಯಾವುದೇ ಕಾರಣಕ್ಕೂ ಪೊರಕೆ ಇಡಬಾರದು.
ರಾತ್ರಿ ಪೊರಕೆಯನ್ನ ಮನೆಯ ತಾರಸಿ ಮೇಲೆ ಅಥವಾ ಅಂಗಳದಲ್ಲಿ ಬಿಡುವುದರಿಂದ ಹಣದ ನಷ್ಟವಾಗುತ್ತದೆ.
ಯಾವಾಗಲೂ ಪೊರಕೆಯನ್ನ ತಲೆಕೆಳಗಾಗಿ ಇಡಬಾರದು. ಪೊರಕೆಯನ್ನು ಕೆಳಗೆ ವಿಶ್ರಾಂತಿ ಸ್ಥಿತಿಯಲ್ಲಿ ಇರಿಸಬೇಕು.
ಪೊರಕೆಯನ್ನ ಯಾರದಾದರೂ ಕಾಲು ಕೆಳಗೆ ಬರದಂತೆ ಎಚ್ಚರ ವಹಿಸಿ. ಇದು ತಾಯಿ ಲಕ್ಷ್ಮಿದೇವಿಗೆ ಅಗೌರವ ತೋರಿದಂತೆ.