ಒಳ್ಳೆಯ ಕನಸುಗಳಾಗಲಿ ಅಥವಾ ಭಯಾನಕ ಕನಸುಗಳಾಗಲಿ ಪ್ರತಿ ಕನಸಿಗೂ ಅದರದೇ ಆದ ಅರ್ಥವಿದೆ. ಕನಸುಗಳು ಎಷ್ಟು ವಿಚಿತ್ರವೋ, ಅವುಗಳಿಂದ ಪಡೆಯುವ ಫಲಿತಾಂಶಗಳು ಸಹ ಕೆಲವೊಮ್ಮೆ ಅಷ್ಟೇ ವಿಚಿತ್ರವಾಗಿರುತ್ತವೆ.
ಸ್ವಪ್ನ ಶಾಸ್ತ್ರದಲ್ಲಿ ಎಲ್ಲಾ ರೀತಿಯ ಕನಸುಗಳ ಅರ್ಥವನ್ನು ನೀಡಲಾಗಿದೆ. ಕನಸುಗಳು ಎಷ್ಟು ವಿಚಿತ್ರವೋ, ಅವುಗಳಿಂದ ಪಡೆಯುವ ಫಲಿತಾಂಶಗಳು ಸಹ ಕೆಲವೊಮ್ಮೆ ಅಷ್ಟೇ ವಿಚಿತ್ರವಾಗಿರುತ್ತವೆ.
ಒಮ್ಮೊಮ್ಮೆ ಕನಸುಗಳು ಮತ್ತು ಅವು ಪಡೆಯುವ ಫಲಗಳ ನಡುವೆ ಯಾವ ಸಂಬಂಧವೂ ಇರುವುದಿಲ್ಲ. ಆದರು ಆ ಕನಸುಗಳು ನಮ್ಮ ಜೀವನದ ಮೇಲೆ ದೊಡ್ಡ ಪ್ರಭಾವ ಬೀರುತ್ತವೆ.
ಒಬ್ಬ ವ್ಯಕ್ತಿಯು ಉರಿಯುತ್ತಿರುವುದನ್ನು ಕನಸಿನಲ್ಲಿ ಕಂಡರೆ ಯಾವ ಮೂಲದಿಂದಾದರೂ ಹಣ ಸಿಗುತ್ತದೆ ಎನ್ನುವುದನ್ನು ಸೂಚಿಸುತ್ತದೆ.
ಕನಸಿನಲ್ಲಿ ಶವವನ್ನು ನೋಡುವುದು ಸಹ ತುಂಬಾ ಮಂಗಳಕರವಾಗಿದೆ. ಅಂತಹ ಕನಸು ಅದೃಷ್ಟದ ಸಂಕೇತವಾಗಿರುತ್ತದೆ. ಯಾರಿಗೆ ಇಂಥಹ ಕನಸು ಬೀಳುತ್ತದೆಯೋ ಅವರ ಮೇಲೆ ಲಕ್ಷ್ಮೀ ದೇವಿಯ ಆಶೀರ್ವಾದವಿರುತ್ತದೆ ಎಂದರ್ಥ.
ನಿಮ್ಮದೇ ತಲೆ ಕತ್ತರಿಸಿದ ರೀತಿಯಲ್ಲಿ ಕನಸಿನಲ್ಲಿ ಕಂಡರೆ, ಹಣಕಾಸಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ದೂರವಾಗಲಿವೆ ಎಂದರ್ಥ. ನಿಮ್ಮ ಮುಂದಿನ ದಿನಗಳಲ್ಲಿ ಭಾರೀ ಬದಲಾವಣೆಗಳನ್ನು ಕಾಣಬಹುದು.
ಕನಸಿನಲ್ಲಿ ರಕ್ತವನ್ನು ನೋಡುವುದು ಕೂಡಾ ಶುಭ ಎಂದು ಸ್ವಪ್ನ ಶಾಸ್ತ್ರದಲ್ಲಿ ಹೇಳಲಾಗಿದೆ. ನೀವು ಹತ್ಯೆಯಾದಂತೆ ಅಥವಾ ನಿಮಗೆ ಗಾಯವಾದಂತೆ ಕನಸಿನಲ್ಲಿ ಕಂಡರೆ, ಹಣ ಮತ್ತು ಗೌರವ ಎರಡೂ ಪ್ರಾಪ್ತಿಯಾಗಲಿದೆ ಎನ್ನುವುದನ್ನು ಸೂಚಿಸುತ್ತದೆ.
ಕನಸಿನಲ್ಲಿ ಕೂದಲನ್ನು ಕತ್ತರಿಸುವುದನ್ನು ನೋಡುವುದು ಧನಾಗಮನದ ಸಂಕೇತವಾಗಿದೆ.
ಸೂಚನೆ : ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಬರೆಯಲಾಗಿದೆ. ಜೀ ನ್ಯೂಸ್ ಕನ್ನಡ ಇದನ್ನು ಅನುಮೋದಿಸುವುದಿಲ್ಲ.