ಜ್ಯೋತಿಷ್ಯದ ಪ್ರಕಾರ ತುಳಸಿಗೆ ಮಾತ್ರವಲ್ಲ ಅದರ ಒಣಗಿದ ಕಡ್ಡಿ, ಮಣ್ಣು ಎಲ್ಲದ್ದಕ್ಕೂ ವಿಶೇಷ ಸ್ಥಾನವಿದೆ.
ತುಳಸಿಯ ಒಣಗಿದ ಕಡ್ಡಿಗೆ ಹೆಚ್ಚಿನ ಮಹತ್ವ ಇದೆ. ಇದನ್ನು ಎಸೆಯುವ ಬದಲು ಈ ರೀತಿಯಾಗಿ ಬಳಸಬಹುದು.
ತುಳಸಿಯ ಒಣಗಿದ ಕಡ್ಡಿಯನ್ನು ಕೊರಳಿಗೆ ಹಾಕಿಕೊಳ್ಳುವುದರಿಂದ ನಕಾರಾತ್ಮಕತೆ ದೂರವಾಗುವುದು. ಹಾಗಾಗಿ ತುಳಸಿಯ ಒಣಗಿದ ಕಡ್ಡಿಯನ್ನು ಹಳದಿ ಬಟ್ಟೆಯಲ್ಲಿ ಕಟ್ಟಿ ಎತ್ತಿಡಬೇಕು.
ತುಳಸಿಯ ಒಣಗಿದ ಕಡ್ಡಿಯನ್ನು ನೀರಿನಲ್ಲಿ ಮುಳುಗಿಸಿ ಇಡೀ ಮನೆಗೆ ಆ ನೀರನ್ನು ಪ್ರೋಕ್ಷಣೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುವುದು.
ನೀವು ಕೆಲಸ ಮಾಡುವ ಸ್ಥಳದಲ್ಲಿ ತುಳಸಿಯ ಒಣಗಿದ ಕಡ್ಡಿಯನ್ನು ಇರಿಸಿದರೆ ಯಶಸ್ಸು ನಿಮ್ಮದಾಗುವುದು.
ನೀವು ಒತ್ತಡದಲ್ಲಿದ್ದರೆ ತುಳಸಿಯ ಒಣಗಿದ ಕಡ್ಡಿಯಿಂದ ಚಂದನದ ತಿಲಕವನ್ನು ಇಟ್ಟುಕೊಳ್ಳಿ. ಇದರಿಂದ ಮಾನಸಿಕ ಆರೋಗ್ಯ ಚೆನ್ನಾಗಿರುತ್ತದೆ.
ತಿಜೋರಿಯಲ್ಲಿ ತುಳಸಿಯ ಒಣಗಿದ ಕಡ್ಡಿಯನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಇಡಬೇಕು, ಇದರಿಂದ ಲಕ್ಷ್ಮಿ ದೇವಿಯ ಕೃಪೆ ಮನೆ ಮಂದಿಯ ಮೇಲೆ ಇರುತ್ತದೆ.
ತುಳಸಿಯ ಒಣಗಿದ ಕಡ್ಡಿಯನ್ನು ಸ್ನಾನದ ನೀರಿನಲ್ಲಿ ಹಾಕಿದರೆ ವಾಸ್ತು ದೋಷ ದೂರವಾಗುವುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.