ಹಿಂದೂ ಸಂಪ್ರದಾಯದಲ್ಲಿ ಮದುವೆಯಾದ ಹೆಣ್ಣು ಮಕ್ಕಳನ್ನು ಮುತ್ತೈದೆಯರು ಎನ್ನಲಾಗುತ್ತದೆ.
ಧಾರ್ಮಿಕ ನಂಬಿಕೆಗಳ ಪ್ರಕಾರ, ಮದುವೆಯಾದ ಹೆಣ್ಣು ಮಕ್ಕಳು ಸೌಭಾಗ್ಯದ ಪ್ರತೀಕ ಎಂದು ಬಣ್ಣಿಸಲಾಗುವ ಐದು ವಸ್ತುಗಳನ್ನು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ, ಮದುವೆಯಾದ ಹೆಣ್ಣು ಮಕ್ಕಳಿಗೆ ಸೌಭಾಗ್ಯದ ಪ್ರತೀಕ ಎಂದು ಪರಿಗಣಿಸಲಾಗಿರುವ ಅರಿಶಿನ, ಕುಂಕುಮ, ಹೂವು, ಮಾಂಗಲ್ಯ ಮತ್ತು ಮೂಗುತಿಯನ್ನು ಬೇರೆಯವರಿಗೆ ನೀಡಬಾರದು. ಇದರ ಹಿಂದಿನ ಕಾರಣ ಈ ರೀತಿ ಇದೆ...
ಮುತ್ತೈದೆಯರು ಧರಿಸುವ ಅರಿಶಿನದಲ್ಲಿ ತಾಯಿ ಪಾರ್ವತಿ ದೇವಿ ನೆಲೆಸಿರುತ್ತಾಳೆ.
ಮದುವೆಯಾದ ಹೆಣ್ಣುಮಕ್ಕಳು ಧರಿಸುವ ಕುಂಕುಮದಲ್ಲಿ ಸಾಕ್ಷಾತ್ ಲಕ್ಷ್ಮಿ ನಾರಾಯಣರು ಸ್ಥಿತರಾಗಿರುತ್ತಾರೆ.
ಆದರ್ಶ ದಂಪತಿಗಳಲ್ಲಿ ಎಣಿಸಲಾಗುವ ಸಾಕ್ಷಾತ್ ಶಿವ-ಪಾರ್ವತಿಯರು ಮುತ್ತೈದೆಯರು ಮುಡಿಯುವ ಹೂವಿನಲ್ಲಿರುತ್ತಾರೆ. ಹಾಗಾಗಿ, ಮದುವೆಯಾದ ಹೆಣ್ಮಕ್ಕಳು ತಾವು ಮುಡಿದ ಹೂವನ್ನು ಬೇರೆಯವರಿಗೆ ನೀಡಬಾರದು.
ಅಗ್ನಿ ಸಾಕ್ಷಿಯಾಗಿ ಗುರು-ಹಿರಿಯರ ಸಮ್ಮುಖದಲ್ಲಿ ಗಂಡ ಕಟ್ಟುವ ಮಾಂಗಲ್ಯದಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ. ಹಾಗಾಗಿ, ಇದನ್ನು ಬೇರೆಯವರಿಗೆ ನೀಡುವ ಬಗ್ಗೆ ಮುತ್ತೈದೆಯರು ಯೋಚಿಸಲೂ ಬಾರದು ಎನ್ನಲಾಗುತ್ತದೆ.
ಮುತ್ತೈದೆಯರ ಐದು ಮುತ್ತುಗಳಲ್ಲಿ ಒಂದೆಂದು ಪರಿಗಳಿಸಲಾಗಿರುವ ಕಿವಿಯೋಲೆ, ಮೂಗುತಿಯಲ್ಲಿ ಮಾತೆ ಸರಸ್ವತಿ ಇರುತ್ತಾಳೆ. ಹಾಗಾಗಿ, ಇದನ್ನೂ ಕೂಡ ಯಾರೊಂದಿಗೂ ಹಂಚಿಕೊಳ್ಳಬಾರದು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.