Chanakya Niti Shastra: ಪತಿ-ಪತ್ನಿಯರು ಎಂದಿಗೂ ಕೂಡ ಈ ಕೆಲಸ ಮಾಡ್ಬಾರದು

Published by: Zee Team | May 18, 2023

1. ಆಚಾರ್ಯ ಚಾಣಕ್ಯರ ಪ್ರಕಾರ ಪತಿ ಪತ್ನಿಯರು ತಮ್ಮ ಖಾಸಗಿ ವಿಷಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಚಾಣಕ್ಯ ನೀತಿಯ ಪ್ರಕಾರ, ತಮ್ಮ ನಡುವಿನ ವಿಷಯಗಳನ್ನು ಉಭಯರ ಮಟ್ಟಕ್ಕೆ ಸೀಮಿತವಾಗಿರಿಸಿಕೊಳ್ಳುವ ಪತಿ-ಪತ್ನಿಯರು ಯಾವಾಗಲೂ ಸಂತೋಷವಾಗಿರುತ್ತಾರೆ.

Published by: Zee Team | May 18, 2023

2. ದಾಂಪತ್ಯ ಜೀವನ ಸುಖಮಯವಾಗಿರಲು ಪತಿ-ಪತ್ನಿಯರು ಯಾವತ್ತೂ ಒಬ್ಬರಿಗೊಬ್ಬರು ಅಹಂಕಾರ ತೋರಬಾರದು. ಆಚಾರ್ಯ ಚಾಣಕ್ಯರ ಪ್ರಕಾರ ವೈವಾಹಿಕ ಜೀವನದಲ್ಲಿ ಪತಿ-ಪತಿ ಇಬ್ಬರೂ ಬಂಡಿಯ ಎರಡು ಚಕ್ರಗಳಿದ್ದಂತೆ, ಎರಡೂ ಚಕ್ರಗಳಲ್ಲಿ ಹೊಂದಾಣಿಕೆ ಇದ್ದಾಗ ಮಾತ್ರ ಗಾಡಿ ಸರಾಗವಾಗಿ ಮುಂದಕ್ಕೆ ಸಾಗುತ್ತದೆ.

Published by: Zee Team | May 18, 2023

3. ಆಚಾರ್ಯ ಚಾಣಕ್ಯರ ಪ್ರಕಾರ, ಯಾವುದೇ ಸಂಬಂಧದ ಗಟ್ಟಿತನಕ್ಕೆ ಪರಸ್ಪರರನ್ನು ಗೌರವಿಸುವುದು ತುಂಬಾ ಮುಖ್ಯ ಮತ್ತು ಇಬ್ಬರ ನಡುವೆ ಪ್ರೀತಿ ಮತ್ತು ಗೌರವ ಇದ್ದಾಗ ಮಾತ್ರ ಪತಿ-ಪತ್ನಿಯರ ನಡುವಿನ ಸಂಬಂಧವೂ ಗಟ್ಟಿಯಾಗುತ್ತದೆ. ಹೀಗಾಗಿ ಇಬ್ಬರೂ ಪರಸ್ಪರ ಎಂದಿಗೂ ಅಗೌರವ ತೋರಬಾರದು.

Published by: Zee Team | May 18, 2023

4. ಪತಿ ಪತ್ನಿಯರು ಜೀವನದಲ್ಲಿ ಎಂದಿಗೂ ಕೂಡ ತಾಳ್ಮೆ ಕಳೆದುಕೊಳ್ಳುವ ಕೆಲಸ ಮಾಡಬಾರದು, ಚಾಣಕ್ಯ ನೀತಿಯ ಪ್ರಕಾರ, ಜನರು ಜೀವನದಲ್ಲಿ ಅನೇಕ ಸಂದರ್ಭಗಳು ಎದುರಾಗುತ್ತವೆ, ಆದರೆ ಎಲ್ಲಾ ಸಂದರ್ಭಗಳಲ್ಲಿ ತಾಳ್ಮೆಯಿಂದ ಕೆಲಸ ಮಾಡುವವರ ಜೀವನವು ಯಶಸ್ವಿಯಾಗುತ್ತದೆ.

Published by: Zee Team | May 18, 2023

VIEW ALL

Read Next Story