ಜೂನ್ 12ರಂದು ಮಿಥುನ ರಾಶಿಯಲ್ಲಿ ಗುರು ಅಸ್ತಮಿಸಲಿದ್ದಾನೆ. ಮುಂದಿನ 27ದಿನಗಳವರೆಗೆ ಬೃಹಸ್ಪತಿ ಇದೆ ಸ್ಥಿತಿಯಲ್ಲಿದ್ದು ಜುಲೈ 05ರಂದು ಉದಯಿಸಲಿದ್ದಾನೆ. ಗುರು ಅಸ್ತ ಪ್ರಭಾವ ಯಾವ ರಾಶಿಯವರಿಗೆ ಹೇಗಿದೆ ತಿಳಿಯಿರಿ.
ಗುರು ಅಸ್ತ ಪ್ರಭಾವದಿಂದ ಈ ರಾಶಿಯವರ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಳಿದ್ದು, ಮನೆಯಲ್ಲಿ ಶುಭ ಕಾರ್ಯಗಳು ನಡೆಯುವ ಸಂಭವವಿದೆ.
ಗುರು ಅಸ್ತ ಪರಿಣಾಮವಾಗಿ ಈ ರಾಶಿಯವರಿಗೆ ಉದಾರ ಸಂಬಂಧಿತ ಸಮಸ್ಯೆಗಳು ಕಾಡಬಹುದು. ವ್ಯಾಪಾರ ವಿಸ್ತರಣೆಗಾಗಿ ಪ್ರಯಾಣ ಸಂಭವವಿದೆ. ಕೆಲಸದಲ್ಲಿ ಬಡ್ತಿ ಸಂಭವವೂ ಇದೆ.
ಗುರು ಅಸ್ತ ಪರಿಣಾಮವಾಗಿ ಶ್ರು ಮಾರುಕಟ್ಟೆಯಲ್ಲಿ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಬೇರೆಯವರಿಂದ ಮೋಸ ಹೋಗುವ ಸಂಭವವೇ ಹೆಚ್ಚು. ಕುಟುಂಬದಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ.
ಗುರು ಅಸ್ತಮದಿಂದಾಗಿ ಈ ರಾಶಿಯವರಿಗೆ ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆಗಳು ಬಾಧಿಸಬಹುದು. ಶತ್ರು ಬಾಧೆ ಸಾಧ್ಯತೆ ಇದೆ.
ಗುರು ಅಸ್ತ ಪ್ರಭಾವದಿಂದ ಸಾಮಾಜಿಕ ಕ್ಷೇತ್ರದಲ್ಲಿ ಸಂಪರ್ಕಗಳು ಹೆಚ್ಚಾಗಲಿದ್ದು, ಇದರಿಂದ ಲಾಭವೂ ಸಿಗಲಿದೆ. ವ್ಯಾಪಾರಸ್ಥರಿಗೆ ಶುಭ ಫಲಗಳ ಸಾಧ್ಯತೆ ಇದೆ.
ಗುರು ಅಸ್ತಮದೊಂದಿಗೆ ಈ ರಾಶಿಯವರಿಗೆ ಮನಸ್ಸು ಚಂಚಲಗೊಳ್ಳಲಿದೆ. ಕೆಲಸಗಳಲ್ಲಿ ತಾಳ್ಮೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಬಹುದು.
ಗುರು ಅಸ್ತ ಪ್ರಭಾವದಿಂದಾಗಿ ಈ ರಾಶಿಯವರಿಗೆ ವ್ಯಾಪಾರ ಸಂಬಂಧಿತ ಪ್ರಯಾಣ ಸಾಧ್ಯತೆ ಇದೆ. ಪ್ರಮುಖ ವಿಚಾರಗಳಲ್ಲಿ ಸಂಗಾತಿಯೊಂದಿಗೆ ಮನಸ್ತಾಪ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಹೆಚ್ಚು ಗಮನಬೇಕಾಗಬಹುದು.
ಗುರು ಅಸ್ತವು ಈ ರಾಶಿಯವರಿಗೆ ಸಂಪತ್ತನ್ನು ವೃದ್ಧಿಸಲಿದೆ. ಕೆಲಸದಲ್ಲಿ ಶತ್ರುಗಳ ವಿರುದ್ಧ ಜಯ ಸಾಧಿಸುವಿರಿ. ಸಂಗಾತಿಯೊಂದಿಗೆ ಹೊರಹೋಗಲು ಯೋಚಿಸಬಹುದು.
ಗುರು ಅಸ್ತಮದಿಂದ ಈ ರಾಶಿಯವರು ಪ್ರೀತಿಪಾತ್ರರೊಂದಿಗೆ ಮನಸ್ತಾಪ ಹೊಂದುವ ಸಂಭವವಿದೆ. ವ್ಯಾಪಾರದಲ್ಲಿ ಭಾರೀ ನಷ್ಟ ಎದುರಿಸಬೇಕಾಗಬಹುದು.
ಉದ್ಯೋಗ ನಿಮಿತ್ತ ದೂರದೂರಿಗೆ ಪ್ರಯಾಣಿಸಬೇಕಾಗಬಹುದು. ಗುರು ಅಸ್ತದಿಂದಾಗಿ ಜೀವನದಲ್ಲಿ ಸುಖ-ಸಮೃದ್ಧಿ ಹೆಚ್ಚಾಗಲಿದೆ. ಆಧ್ಯಾತ್ಮಿಕ ಬದುಕಿಗೆ ಸಂಬಂಧಿಸಿದಂತೆ ಒಲವು ಹೆಚ್ಚಾಗಲಿದೆ.
ಗುರು ಅಸ್ತ ಪರಿಣಾಮವಾಗಿ ಈ ರಾಶಿಯವರಿಗೆ ದೀರ್ಘ ಸಮಯದ ಆರೋಗ್ಯ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. ವ್ಯಾಪಾರ-ವ್ಯವಹಾರದಲ್ಲಿ ಅದೃಷ್ಟ ಖುಲಾಯಿಸುತ್ತದೆ.
ಗುರು ಅಸ್ತ ಸಮಯವು ಈ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಹೂಡಿಕೆ ವಿಚಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಆರೋಗ್ಯದಲ್ಲಿ ನಿರ್ಲಕ್ಷ್ಯವನ್ನು ತಪ್ಪಿಸಿ. ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.