ಜ್ಯೋತಿಷ್ಯದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿರುವ ಅನೇಕ ವಸ್ತುಗಳನ್ನು ಮನೆಯಲ್ಲಿ ಇರಿಸಲಾಗುತ್ತದೆ. ಅದರಲ್ಲಿ ಕವಡೆ ಕೂಡಾ ಒಂದು.
ನಿಮ್ಮ ಜೇಬಿನಲ್ಲಿ ಹಣ ಉಳಿಯುವುದಿಲ್ಲ ಎಂದಾದರೆ ದೇವರ ಕೋಣೆಯಲ್ಲಿ ಲಕ್ಷ್ಮೀ ದೇವಿಯ ಫೋಟೋ ಬಳಿ ಒಂದು ಕವಡೆ ಇಡಿ.
ಈ ಕವಡೆಯನ್ನು ನಿಮ್ಮ ಪರ್ಸ್ ನಲ್ಲಿ ಶುಕ್ರವಾರ ಇಟ್ಟರೆ ಧನ ಯೋಗ ಕೂಡಿ ಬರುತ್ತದೆ.
ಸುಖಾ ಸುಮ್ಮನೆ ನಿಮ್ಮ ಕೈಯಿಂದ ಹಣ ಹರಿದು ಹೋಗುತ್ತಿದ್ದರೆ ಲಕ್ಷ್ಮೀ ದೇವಿಯ ಫೋಟೋ ಬಳಿ 5 ಕವಡೆ ಇಟ್ಟು ಪೂಜೆ ಮಾಡಿ. ನಂತರ ಇದನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಿಜೋರಿ ಒಳಗೆ ಇಡಿ.
ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಹಣದ ಕೊರತೆ ಯಾವತ್ತೂ ಇರುವುದಿಲ್ಲ
ಮನೆ ನಿರ್ಮಾಣ ಮಾಡುವ ವೇಳೆ ಮನೆಯ ಪಂಚಾಂಗಕ್ಕೆ ಕವಡೆ ಹಾಕಬಹುದು. ಹೀಗೆ ಮಾಡುವುದರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಪ್ರವೇಶಿಸುವುದಿಲ್ಲ.
ಮನೆಗೆ ಕೆಟ್ಟ ದೃಷ್ಟಿ ತಾಗಬಾರದು ಎಂದಾದರೆ ಕಪ್ಪು ಬಟ್ಟೆಯಲ್ಲಿ 7 ಕವಡೆಯನ್ನು ಕಟ್ಟಿ ಅದನ್ನು ಮುಖ್ಯ ದ್ವಾರದ ಬಲ ಬದಿಯಲ್ಲಿ ಕಟ್ಬಬೇಕು.
ಗುರುವಾರ ಒಂದು ಕವಡೆ ಮತ್ತು ಅರಶಿನದ ತುಂಡನ್ನು ವಿಷ್ಣುವಿನ ಫೋಟೋ ಮುಂದೆ ಇರಿಸಿ ಪೂಜೆ ಮಾಡಿ. ನಂತರ ಇವೆರಡನ್ನೂ ಹಳದಿ ಬಟ್ಟೆಯಲ್ಲಿ ಸುತ್ತಿ ತಿಜೋರಿಯಲ್ಲಿ ಇಟ್ಟರೆ ಸಾಲದಿಂದ ಮುಕ್ತಿ ಸಿಗುತ್ತದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.