ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಅವಳನ್ನು ಮೆಚ್ಚಿಸಲು ಮತ್ತು ಅವಳ ಆಶೀರ್ವಾದ ಪಡೆಯಲು, ಮನೆಯಲ್ಲಿ ಕೆಲವು ವಸ್ತುಗಳನ್ನು ಇಡಬಹುದು.
ಕುದುರೆ ಲಾಳವನ್ನು ಮನೆಯ ಮುಖ್ಯ ದ್ವಾರಕ್ಕೆ ನೇತು ಹಾಕುವುದರಿಂದ ಮನೆಯ ಸಮೃದ್ದಿ ಹೆಚ್ಚುತ್ತದೆ.
ಮನೆಯ ಉತ್ತರ ದಿಕ್ಕಿನಲ್ಲಿ ಕ್ರಾಸ್ಸುಲ್ಲಾ ಸಸ್ಯವನ್ನು ನೆಡುವುದರಿಂದ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ.
ಮನೆಯ ದೇವರ ಕೋಣೆಯಲ್ಲಿ ನವಿಲು ಗರಿ ಇಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಲಕ್ಷ್ಮೀ ಇಬ್ಬರ ನೆಲೆಯಾಗುತ್ತದೆ.
ಮನೆಯಲ್ಲಿ ಕಮಲ ಹೂವಿಟ್ಟರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ.
ಮನೆಯಲ್ಲಿ ಗಂಗಾ ಜಲ ಇಟ್ಟುಕೊಂಡು ಕಾಲ ಕಾಲಕ್ಕೆ ಈ ಜಾಲವನ್ನು ಮನೆ ಸುತ್ತ ಸಿಂಪಡಿಸುತ್ತಾ ಇರಬೇಕು.
ಮನೆಯಲ್ಲಿ ದಕ್ಷಿಣಾವರ್ತಿ ಶಂಖವನ್ನು ಇಡುವುದು ಕೂಡಾ ಮಂಗಳಕರ.
ಶ್ರೀ ಯಂತ್ರ ಕೂಡಾ ಲಕ್ಷ್ಮೀಗೆ ಸಂಬಂಧಿಸಿದ್ದಾಗಿದೆ. ಇದನ್ನು ದೇವರ ಕೋಣೆಯಲ್ಲಿ ಇಡಬೇಕು.
ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಂಡರೆ ಆರ್ಥಿಕ ಸಂಕಷ್ಟ ದೂರವಾಗುತ್ತದೆ ಎನ್ನುವುದು ನಂಬಿಕೆ.