ಮುತೈದೆಯರು ಈ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಲೇಬಾರದು!
ಅಗತ್ಯವಿದ್ದಾಗ ಒಬ್ಬರಿಗೊಬ್ಬರು ವಸ್ತುಗಳನ್ನು ವಿನಿಮಯ ಮಾಡಿಕೊಳ್ಳುವುದು ಒಳ್ಳೆಯದು.
ಆದರೆ, ಧಾರ್ಮಿಕ ನಂಬಿಕೆಗಳ ಪ್ರಕಾರ, ಮದುವೆಯಾದ ಮಹಿಳೆಯರು ತಮ್ಮ ಶೃಂಗಾರ ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಇದರಿಂದ ಅಶುಭ ಫಲಗಳು ಲಭಿಸುತ್ತವೆ ಎಂದು ಹೇಳಲಾಗುತ್ತದೆ.
ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರಿಗೆ ಸೌಭಾಗ್ಯದ ಸಂಕೇತ ಎಂದು ಪರಿಗಣಿಸಲ್ಪಟ್ಟಿರುವ 5 ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸಲಹೆ ನೀಡಲಾಗುತ್ತದೆ. ಹಾಗಿದ್ದರೆ, ಮಹಿಳೆಯರು ಯಾವ ವಸ್ತುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಬಾರದು ಎಂದು ನೋಡುವುದಾದರೆ...
ಕುಂಕುಮವು ಮುತ್ತೈದೆ ಹೆಣ್ಣು ಮಗಳ ಸೌಭಾಗ್ಯದ ಅಂಶ. ಹಾಗಾಗಿ, ತಾವು ನಿತ್ಯ ಹಣೆಗಿಡುವ ಕುಂಕುಮವನ್ನು ವಿವಾಹಿತ ಮಹಿಳೆಯರು ಯಾರೊಂದಿಗೂ ಹಂಚಿಕೊಳ್ಳಬಾರದು ಎನ್ನಲಾಗುತ್ತದೆ.
ಹಿಂದೂ ಸಂಪ್ರದಾಯದಲ್ಲಿ ಹಣೆಗೆ ಬಿಂದಿ ಇಡುವುದು ತುಂಬಾ ಮುಖ್ಯ. ಹಾಗೆಯೇ, ವಿವಾಹಿತ ಮಹಿಳೆಯರು ತಾವು ಬಳಸುವ ಬಿಂದಿಯನ್ನು ಬೇರೆಯವರೊಂದಿಗೆ ಹಂಚಿಕೊಳ್ಳುವುದು ಅಶುಭ ಎನ್ನಲಾಗುತ್ತದೆ.
ವಿವಾಹಿತ ಮಹಿಳೆಯರು ಬಳೆಗಳನ್ನು ಧರಿಸುವುದು ಕಡ್ಡಾಯ. ಅಂತೆಯೇ, ಅವರು ಧರಿಸುವ ಬಳೆಗಳನ್ನು ಬೇರೆ ಮಹಿಳೆಯರಿಗೆ ನೀಡಬಾರದು. ಇದರಿಂದ ದಾಂಪತ್ಯ ಜೀವನದಲ್ಲಿ ಅಪಶ್ರುತಿ ಮೂಡುತ್ತದೆ ಎಂಬ ನಂಬಿಕೆ ಇದೆ.
ಮಾಂಗಲ್ಯ ಅಥವಾ ಮಂಗಳ ಸೂತ್ರ ಮಹಿಳೆ ವಿವಾಹ ಬಂಧನದಲ್ಲಿ ಬಂಧಿಯಾಗಿರುವ, ಆಕೆ ಗೃಹಸ್ಥಾಶ್ರಮವನ್ನು ಪ್ರವೇಶಿಸಿರುವ ಸಂಕೇತ. ಇದನ್ನು ಎಂದಿಗೂ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
ವಿವಾಹಿತ ಮಹಿಳೆಯರು ಕಾಲುಂಗುರ ಧರಿಸುವುದು ಸಂಪ್ರದಾಯದ ದೃಷ್ಟಿಯಿಂದ ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ಹಲವು ಪ್ರಯೋಜನಗಳನ್ನು ಹೊಂದಿದೆ. ಕಾಲುಂಗುರವನ್ನು ಸಹ ಬೇರೆಯವರೊಂದಿಗೆ ಹಂಚಿಕೊಳ್ಳಬಾರದು.
ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.