ನಿಮ್ಮ ಮನೆಯಲ್ಲಿ ಈ ಸಸ್ಯಗಳಿದ್ದರೆ ಇಂದೇ ತೆಗೆಯಿರಿ, ಇಲ್ಲವೇ ಭಾರೀ ನಷ್ಟ
ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ಸಸ್ಯಗಳನ್ನು ಮನೆಯಲ್ಲಿ ಇಡದಂತೆ ಸೂಚಿಸಲಾಗುತ್ತದೆ.
ವಾಸ್ತು ಪ್ರಕಾರ, ಮನೆಯಲ್ಲಿ ಕೆಲವು ಸಸ್ಯಗಳು ನಕಾರಾತ್ಮಕತೆಯನ್ನು ಆಹ್ವಾನಿಸುತ್ತವೆ. ಇದರಿಂದ ಆರ್ಥಿಕ ಮುಗ್ಗಟ್ಟು ಹೆಚ್ಚಾಗಬಹುದು, ಮನೆಯಲ್ಲಿ ಅಶಾಂತಿ ಉದ್ಬಾವಿಸಬಹುದು ಎಂದು ನಂಬಲಾಗಿದೆ. ಅಂತಹ ಸಸ್ಯಗಳೆಂದರೆ...
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮುಳ್ಳಿನ ಗಿಡಗಳನ್ನು ಇಡುವುದರಿಂದ ಋಣಾತ್ಮಕತೆ ಹೆಚ್ಚಾಗುತ್ತದೆ.
ಮನೆಯ ಅಂಗಳದಲ್ಲಿ ಹುಣಸೆ ಸಸಿ ನೆಡುವುದರಿಂದ ಅಂತಹ ಮನೆಯಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
ಮೆಹಂದಿ ಸಸ್ಯ ಮನೆಯಲ್ಲಿದ್ದರೆ ಅಂತಹ ಮನೆಯಲ್ಲಿ ಸುಖ-ಸಂತೋಷಕ್ಕೆ ಧಕ್ಕೆ ಉಂಟಾಗುತ್ತದೆ. ಮನೆಯವರ ನಡುವೆಯೇ ಕಾದಾಟ ಹೆಚ್ಚಾಗುತ್ತದೆ ಎನ್ನಲಾಗುತ್ತದೆ.
ಮನೆಯಲ್ಲಿ ಅರಳಿ ಸಸ್ಯವನ್ನು ನೆಡುವುದು ಕೂಡ ಅಮಂಗಳಕರ ಎಂದು ಹೇಳಲಾಗುತ್ತದೆ. ಈ ಸಸ್ಯಗಳು ನಿಮ್ಮ ಮನೆಯಲ್ಲಿದ್ದರೆ ಇಂದೇ ಅವುಗಳನ್ನು ತೆಗೆಯಿರಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.